ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

26ಕ್ಕೆ ಕೇಜ್ರಿವಾಲ್‌ ಪ್ರಮಾಣ ವಚನ

Last Updated 23 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ: ರಾಜಧಾನಿಯಲ್ಲಿ ಸರ್ಕಾರ ರಚಿಸಲು ಹಕ್ಕು ಮಂಡಿಸು­ವು­ದರೊಂದಿಗೆ ‘ಆಮ್‌ ಆದ್ಮಿ ಪಕ್ಷ’ವು (ಎಎಪಿ) ಕಳೆ­ದೆ­ರಡು ವಾರದಿಂದ ತಲೆದೋರಿದ್ದ ರಾಜ­ಕೀಯ ಬಿಕ್ಕಟ್ಟಿಗೆ ಅಂತ್ಯ ಹಾಡಲು ಮುಂದಾ­­­ಗಿದೆ. ಕಾಂಗ್ರೆಸ್‌ ಬೆಂಬಲ­ದೊಂದಿಗೆ ಎಎಪಿ ಅಧಿಕಾರ ಹಿಡಿಯಲಿದೆ.

ಎಎಪಿ ಶಾಸಕಾಂಗ ಪಕ್ಷದ ನಾಯಕ­ರಾಗಿ ಆಯ್ಕೆಯಾಗಿರುವ  ಅರ­ವಿಂದ ಕೇಜ್ರಿವಾಲ್‌ ಇದೇ 26ರಂದು ರಾಮ­ಲೀಲಾ ಮೈದಾ­ನ­ದಲ್ಲಿ ಮುಖ್ಯ­ಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಲು ಬಯಸಿದ್ದಾರೆ.

ಎರಡು ವರ್ಷದ ಹಿಂದೆ ಇದೇ ಮೈದಾನ­ದಲ್ಲಿ ‘ಜನ ಲೋಕಪಾಲ ಮಸೂದೆ’ ಜಾರಿಗೆ ಹೋರಾಟ ನಡೆ­ದಿತ್ತು. ಮಾಜಿ ಐಆರ್‌ಎಸ್‌ ಅಧಿಕಾ­ರಿಯಾದ ಕೇಜ್ರಿವಾಲ್‌ ಸೋಮವಾರ ದೆಹಲಿ ಲೆ. ಗವರ್ನರ್‌ ನಜೀಬ್‌ ಜಂಗ್‌ ಅವರನ್ನು ಭೇಟಿ­ಯಾಗಿ ಸರ್ಕಾರ ರಚಿಸುವ ಹಕ್ಕು ಮಂಡಿಸಿದರು.

‘ಸರ್ಕಾರ ರಚಿಸುವ ಪ್ರಸ್ತಾವವನ್ನು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ತೀರ್ಮಾ­ನಕ್ಕಾಗಿ ಕಳುಹಿಸ­ಲಾ­ಗುವುದು. ಅವ­ರಿಂದ ಉತ್ತರ ಬಂದ ಬಳಿಕ ಪ್ರಮಾಣ ವಚನ ದಿನಾಂಕ, ಸಮಯ  ನಿಗದಿ­ಪಡಿಸ­ಲಾ­-ಗು­ವುದು’ ಎಂದು ಲೆಫ್ಟಿನೆಂಟ್‌ ಗವ­ರ್ನರ್‌ ಅವರು ತಿಳಿಸಿದ್ದಾರೆ. ‘ಸರ್ಕಾರ ರಚಿಸಿದ ಬಳಿಕ ವಿಧಾನ­ಸಭೆ­ಯಲ್ಲಿ ವಿಶ್ವಾಸಮತ ಕೇಳುವ ನಿರ್ಣಯ ಮಂಡಿಸುತ್ತೇವೆ’ ಎಂದು ಕೇಜ್ರಿವಾಲ್‌ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT