ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

26ರಂದು ಚುನಾವಣೆ: ಮತಗಟ್ಟೆ ಸ್ಥಳ ಬದಲಾವಣೆ

Last Updated 21 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ರಾಮನಗರ: ನಗರಸಭೆಯ 2ನೇ ವಾರ್ಡ್‌ಗೆ ಇದೇ 26ರಂದು ನಡೆಯಲಿರುವ ಉಪ ಚುನಾವಣೆಗೆ ಸಂಬಂಧಿಸಿದಂತೆ ಎರಡು ಮತಗಟ್ಟೆಗಳ ಸ್ಥಳ ಬದಲಾಯಿಸಿ ಚುನಾವಣಾಧಿಕಾರಿಯೂ ಆಗಿರುವ ತಹಶೀಲ್ದಾರ್ ಆದೇಶಿಸಿದ್ದಾರೆ.

ಮತಗಟ್ಟೆ ಸಂಖ್ಯೆ 4 ಹಾಗೂ 5 ಕ್ಕೆ ಸಂಬಂಧಿಸಿದಂತೆ ಇದ್ದ ಮತಗಟ್ಟೆ ಕಟ್ಟಡಗಳನ್ನು ಕೆಡವಲಾಗಿದ್ದು, ಈ ಸ್ಥಳದಲ್ಲಿ ಕಂದಾಯ ಭವನ ಹಾಗೂ ಜಿಲ್ಲಾ ಪಂಚಾಯಿತಿ ಭವನ ನಿರ್ಮಾಣವಾಗಿದೆ. ಆದ್ದರಿಂದ ಮತಗಟ್ಟೆಗಳನ್ನು ಬದಲಿಸಲಾಗಿದೆ.
 
ಈ ಸಂಬಂಧ ರಾಜ್ಯ ಚುನಾವಣಾ ಆಯೋಗದ ಅನುಮತಿ ಪಡೆಯಲಾಗಿದೆ. ಅಲ್ಲದೆ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಅಭ್ಯರ್ಥಿಗಳ ಗಮನಕ್ಕೂ ತರಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಲ್ಲಿಗೆ ಸ್ಥಳಾಂತರ?: ಮತಗಟ್ಟೆ ಸಂಖ್ಯೆ 4 ಅನ್ನು ವಿಜಯನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಕೊಠಡಿ ಸಂಖ್ಯೆ-1 ಹಾಗೂ ಮತಗಟ್ಟೆ ಸಂಖ್ಯೆ 5 ಅನ್ನು ವಿಜಯನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಕೊಠಡಿ ಸಂಖ್ಯೆ 2ಕ್ಕೆ ಸ್ಥಳಾಂತರಿಸಲಾಗಿದೆ.
 
ಮತಗಟ್ಟೆ ಸಂಖ್ಯೆ 3 ಹಳೆ ಕಟ್ಟಡದಲ್ಲಿಯೇ ಮುಂದುವರೆದಿದ್ದು ಕಟ್ಟಡದ ಹೆಸರು ಮಾತ್ರ ಬದಲಾವಣೆಯಾಗಿದೆ. ಈ ಮೊದಲು ಈ ಕಟ್ಟಡ ಪಿಡಬ್ಲ್ಯೂಡಿ ಸಹಾಯಕ ಎಂಜಿನಿಯರ್ ಕಚೇರಿ ಎಂದು ಕರೆಯಲಾಗುತ್ತಿತ್ತು.
 
ಈಗ ಈ ಕಟ್ಟಡವನ್ನು ಲೋಕೋಪಯೋಗಿ, ಬಂದರು ಹಾಗೂ ಒಳನಾಡು ಸಾರಿಗೆ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಚೇರಿ (ವಿಶೇಷ ಉಪ ವಿಭಾಗ ಕಚೇರಿ) ಎಂದು ಕರೆಯಲಾಗುತ್ತಿದೆ ಎಂದು ತಹಶೀಲ್ದಾರ್ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT