27ಕ್ಕೆ ಕೆಜೆಪಿಯಿಂದ ಪ್ರತಿಭಟನೆ

7

27ಕ್ಕೆ ಕೆಜೆಪಿಯಿಂದ ಪ್ರತಿಭಟನೆ

Published:
Updated:

ದಾವಣಗೆರೆ: ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಜಾರಿಗೆ ತಂದ ವಿವಿಧ ಜನಪರ ಕಾರ್ಯಕ್ರಮಗಳನ್ನು ಈಗಿನ ಸರ್ಕಾರ ವಿಫಲಗೊಳಿಸುತ್ತಿದೆ ಎಂದು ಆರೋಪಿಸಿ ಕರ್ನಾಟಕ ಜನತಾ ಪಕ್ಷದ ಕಾರ್ಯಕರ್ತರು ಡಿ. 27ರಂದು ನಗರದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.ಅಂದು ಬೆಳಿಗ್ಗೆ 11ರಿಂದ ಪಾಲಿಕೆ ಆವರಣದಲ್ಲಿ ಧರಣಿ ಹಮ್ಮಿಕೊಳ್ಳಲಾಗಿದೆ. ಬಳಿಕ ಪ್ರತಿಭಟನಾ ಮೆರವಣಿಗೆಯ ಮೂಲಕ ತಾಲ್ಲೂಕು ಕಚೇರಿಗೆ ಸಂಜೆ 4ಕ್ಕೆ ತೆರಳಿ ಮನವಿ ಸಲ್ಲಿಸಲಾಗುವುದು ಎಂದು ಕೆಜೆಪಿಯ ಜಿಲ್ಲಾ ಸಂಚಾಲಕ  ಬಿ.ಎಸ್. ಜಗದೀಶ್ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸೈಯದ್ ಹರಿಹರ, ಕೆ. ಹೇಮಂತ್ ಕುಮಾರ್, ಷಣ್ಮುಖಯ್ಯ, ವೀರಭದ್ರಸ್ವಾಮಿ, ಕೆ.ಎಸ್. ಮೋಹನ್, ಕಡ್ಲೇಬಾಳು ಬಸವರಾಜ್, ವೀರಣ್ಣ, ಪಿ.ಎಸ್. ಬಸವರಾಜ್, ರೇಣುಕಸ್ವಾಮಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry