27ನೇ ಶರಣ ಮೇಳ 11ರಿಂದ

7

27ನೇ ಶರಣ ಮೇಳ 11ರಿಂದ

Published:
Updated:

ಕೂಡಲಸಂಗಮ: ಕೂಡಲಸಂಗಮ ಬಸವ ಧರ್ಮ ಪೀಠದವತಿಯಿಂದ ಕೂಡಲಸಂಗಮ­ದಲ್ಲಿ ಇದೇ 11 ರಿಂದ 15ರ ವರೆಗೆ 27ನೇಯ ಶರಣ ಮೇಳ ನಡೆಯು­ತ್ತಿದ್ದು ಸಮಾರಂಭಕ್ಕೆ ಕರ್ನಾಟಕ, ಆಂಧ್ರ­ಪ್ರದೇಶ, ಮಹಾ­ರಾಷ್ಟ್ರ, ತಮಿಳುನಾಡು, ಗೋವಾ ಮುಂತಾದ ರಾಜ್ಯಗಳಿಂದ ಸುಮಾರು 2ಲಕ್ಷಕ್ಕೂ ಅಧಿಕ ಬಸವ ಭಕ್ತರು ಬರುವ ನಿರೀಕ್ಷೆ ಇದೆ ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಮಾಹಾದೇಶ್ವರ ಸ್ವಾಮೀಜಿ ಹೇಳಿದರು.ಭಾನುವಾರ ಕೂಡಲಸಂಗಮ ಬಸವ ಧರ್ಮ ಪೀಠದ ಮಹಾಮನೆ ಮಹಾಮಠದ ಆವರಣದಲ್ಲಿ ಸುದ್ದಿಗಾರ­ರೊಂದಿಗೆ ಅವರು ಮಾತನಾಡಿದರು. ಶರಣ ಮೇಳ ಪ್ರತಿ ವರ್ಷವೂ ಲಿಂಗಾಯತ ಧರ್ಮ ಸಂಸ್ಥಾಪನಾ ದಿನದ ಅಂಗವಾಗಿ ಇದೇ 11 ರಿಂದ 15ರ ವರೆಗೆ ನಡೆಯುತ್ತದೆ. ಶರಣ ಮೇಳ 26 ವರ್ಷದಿಂದ ಯಶಸ್ವಿಯಾಗಿ ನಡೆದು ಬಂದಿದೆ. ಶರಣ ಮೇಳಕ್ಕೆ ಬರುವ ಭಕ್ತರಿಗೆ ಎಲ್ಲ ಸಿದ್ಧತೆಗಳು ನಡೆದಿದ್ದು ಇನು್ನ ನಾಲ್ಕು ದಿನಗಳಲ್ಲಿ ಎಲ್ಲ ಸಿದ್ಧತೆಗಳು ಮುಕ್ತಾಯಗೊಳ್ಳುತ್ತವೆ.ಇದೇ 9 ರಂದು ಬೆಳಿಗ್ಗೆ 8 ಗಂಟೆಗೆ ಅಖಂಡ ವಚನ ಪಠಣ ಸಪ್ತಾಹ ಕಾರ್ಯಕ್ರಮದ ಮೂಲಕ ಮೇಳದ ಕಾರ್ಯಗಳಿಗೆ ಚಾಲನೆ ದೊರೆಯು­ವುದು. ಜ.10 ರಂದು ಬೆಳಗ್ಗೆ 10 ಗಂಟೆಗೆ ಬಸವ ಕೃಪಾ ಅನಾಥಾಲಯದ ಮಕ್ಕಳಿಂದ ವಸ್ತು ಪ್ರದರ್ಶನಕ್ಕೆ ಜಗದ್ಗುರು ಮಾತೆ ಮಹಾದೇವಿ ಚಾಲನೆ ಕೊಡುವರು ಎಂದು ಶ್ರೀಗಳು ಹೇಳಿದರು.6ಜನರಿಗೆ ಶರಣ ರತ್ನ ಪ್ರಶಸ್ತಿ ಪ್ರದಾನ: ಕೂಡಲ­ಸಂಗಮದಲ್ಲಿ ನಡೆಯುವ 27ನೇ ಶರಣ ಮೇಳದಲ್ಲಿ ಬಸವ ಧರ್ಮ ಪೀಠದ ವತಿಯಿಂದ 6ಜನ ಕಾಯಕ ಜೀವಿಗಳಿಗೆ ಇದೇ 13ರಂದು ನಡೆಯುವ ಶರಣ ಮೇಳ ಉದ್ಘಾಟನಾ ಸಮಾರಂಭದಲ್ಲಿ ಶರಣ ರತ್ನ ಪ್ರಶಸ್ತಿ ಪ್ರಧಾನ ಮಾಡಲಾ­ಗುವುದು.ಸಂಶೋಧನಾ ಕ್ಷೇತ್ರದಲ್ಲಿ ಸಾದನೆ ಮಾಡಿದ ಧಾರವಾಡದ ಡಾ. ಎಸ್.ಆರ್. ಗುಂಜಾಳ, ಬಸವ ತತ್ವ ಪ್ರಚಾರಕ್ಕೆ ಸೇವೆ ಸಲ್ಲಿಸಿದ ಲಾತೂರದ ಸುದರ್ಶನ ಬಿರಾದಾರ, ದಾಸೋಹ ಕ್ಷೇತ್ರದಲ್ಲಿ ಸೇವೆ ಮಾಡಿದ ಸವದತ್ತಿಯ ಆನಂದ ಜೋಪ್ರಾ, ಕೃಷಿ ಕ್ಷೇತ್ರದಲ್ಲಿ ಗೋಕಾಕದ ಬಸವರಾಜ ಕರ್ಜಗಿಮಠ, ಬಸವ ತತ್ವ ಪ್ರಚಾರ ಮಾಡಿದ ಬೈಲಹೊಂಗಲದ ಮೃತ್ಯುಂಜಯ ಸ್ವಾಮಿ ಹಿರೇಮಠ, ಯಲಬುರ್ಗದ ಅಮರಪ್ಪ ಅವರಿಗೆ ಪ್ರದಾನ ಮಾಡಲಾಗುವುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry