27ರಂದು ಕೊಪ್ಪಳ ಜಿಲ್ಲಾ ಲೇಖಕಿಯರ ಸಮ್ಮೇಳನ
ಕೊಪ್ಪಳ: ತಿರುಳ್ಗನ್ನಡ ಕಲೆ, ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ, ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ಹಾಗೂ ರುಕ್ಮಿಣಿಬಾಯಿ ಸ್ಮಾರಕ ಟ್ರಸ್ಟ್ನ ಆಶ್ರಯದಲ್ಲಿ ಆ. 27ರಂದು ನಗರದ ಸಾಹಿತ್ಯ ಭವನದಲ್ಲಿ ಕೊಪ್ಪಳ ಜಿಲ್ಲಾ ಲೇಖಕಿಯರ ಪ್ರಥಮ ಸಮ್ಮೇಳನವನ್ನು ಹಮ್ಮಿ ಕೊಳ್ಳಲಾಗಿದೆ.
ಅಂದು ಬೆಳಿಗ್ಗೆ 10.30 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ನಂದಿಹಳ್ಳಿಯಲ್ಲಿರುವ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥೆ ಡಾ.ಮಲ್ಲಿಕಾ ಘಂಟಿ ಸಮ್ಮೇಳನವನ್ನು ಉದ್ಘಾಟಿಸುವರು.
ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪವಿತ್ರಕ್ಕ ಸಾನಿಧ್ಯ ವಹಿಸುವರು. ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಅಧ್ಯಕ್ಷತೆ ವಹಿಸುವರು. ಸಾಹಿತಿ ಸ್ನೇಹಲತಾ ಜೋಶಿ ಸಮ್ಮೇಳನಾಧ್ಯಕ್ಷರಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಮಧ್ಯಾಹ್ನ 12.30 ಗಂಟೆಗೆ ಸಮ್ಮೇಳನಾಧ್ಯಕ್ಷರ ಸಾಹಿತ್ಯ ಎಂಬ ವಿಷಯ ಕುರಿತು ವಿಚಾರ ಸಂಕಿರಣ ನಡೆಯಲಿದ್ದು, ಮಲಪ್ರಭಾ-ಘಟಪ್ರಭಾ ಯೋಜನೆಗಳ ಕಾಡಾದ ಭೂ ಅಭಿವೃದ್ಧಿ ಅಧಿಕಾರಿ ಡಾ.ಹನುಮಾಕ್ಷಿ ಗೋಗಿ ಅಧ್ಯಕ್ಷತೆ ವಹಿಸುವರು.
ಮಧ್ಯಾಹ್ನ 2.30 ಗಂಟೆಗೆ ತಾವರಗೇರಾದ ಶಶಿಧರಸ್ವಾಮಿ ವಿದ್ಯಾನಿಕೇತನ ಪದವಿಪೂರ್ವ ಕಾಲೇಜಿನ ಶಿಕ್ಷಕಿ ಡಾ.ಸುಶೀಲಾ ತಾಳಿಕೋಟಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ 2ನೇ ಗೋಷ್ಠಿಯಲ್ಲಿ `ಕೊಪ್ಪಳ ಜಿಲ್ಲೆಯ ಸಾಹಿತ್ಯ~ ಎಂಬ ವಿಷಯ ಕುರಿತು ವಿಷಯ ಮಂಡನೆಯಾಗಲಿದೆ.
ಮಧ್ಯಾಹ್ನ 3.30 ಗಂಟೆಗೆ ಕವಿಗೋಷ್ಠಿ ನಡೆಯಲಿದ್ದು, ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಹನುಮಂತಪ್ಪ ಅಂಡಗಿ ಅಧ್ಯಕ್ಷತೆ ವಹಿಸುವರು.
ಸಂಜೆ 6 ಗಂಟೆಗೆ ನಡೆಯುವ ಸಮಾರೋಪ ಸಮಾರಂಭವನ್ನು ಸಾಹಿತಿ ವಿಜಯಲಕ್ಷ್ಮಿ ಪ್ರಹ್ಲಾದ ಬೆಟಗೇರಿ ಉದ್ಘಾಟಿಸುವರು. ಅಧ್ಯಕ್ಸತೆಯನ್ನು ಪತ್ರಕರ್ತ ಸಿದ್ದಪ್ಪ ಹಂಚಿನಾಳ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.