27ರಂದು ಪ್ರಧಾನಿ ಸಿಂಗ್ ಅಮೆರಿಕಕ್ಕೆ

7

27ರಂದು ಪ್ರಧಾನಿ ಸಿಂಗ್ ಅಮೆರಿಕಕ್ಕೆ

Published:
Updated:

ವಾಷಿಂಗ್ಟನ್‌ (ಪಿಟಿಐ): ‘ಈ ತಿಂಗಳ 27ರಂದು ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಅಮೆರಿಕಕ್ಕೆ ಭೇಟಿ ನೀಡುವ ಸಂದಭರ್ದಲ್ಲಿ ಅಧ್ಯಕ್ಷ ಬರಾಕ್‌ ಒಬಾಮ ಅವರೊಂದಿಗೆ ನಡೆಸುವ ಚರ್ಚೆ ಉಭಯ ದೇಶಗಳ ಆರ್ಥಿಕ ಪರಿಸ್ಥಿತಿ ಕುರಿತು ಬೆಳಕು ಚೆಲ್ಲಲಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.‘ಆರ್ಥಿಕ ಅಭಿವೃದ್ಧಿ ಸಾಧಿಸ ಬೇಕಾದರೆ ಭಾರತ ಮತ್ತು ಅಮೆರಿಕ ಜತೆಗೂಡಿ ಏನು ಮಾಡಬಹುದು ಎನ್ನು­ವುದರ ಕುರಿತು ಶ್ವೇತಭವನದಲ್ಲಿ ಒಬಾಮ ಅವರೊಂದಿಗೆ ಸಿಂಗ್‌ ಚರ್ಚೆ ನಡೆಸಲಿದ್ದಾರೆ’.‘ಈ ಚರ್ಚೆ ಸ್ಥಳೀಯ ಭದ್ರತೆ ಮತ್ತು ಸ್ಥಿರತೆ  ಮೇಲೆ ಕೇಂದ್ರೀಕರಿ ಸಲಿದೆ. ಅಲ್ಲದೇ, ಎರಡು ದೇಶಗಳಲ್ಲಿ ಉದ್ಯಮ ಹೂಡಿಕೆ ಮತ್ತು

ಅಭಿವೃದ್ಧಿ ಸಹಕಾರದ ಕುರಿತೂ ಮಾತುಕತೆ ನಡೆಯಲಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry