27ರಿಂದ ಸಗಟು ಆಭರಣ ಮೇಳ

7

27ರಿಂದ ಸಗಟು ಆಭರಣ ಮೇಳ

Published:
Updated:

ಬೆಂಗಳೂರು: ದೇಶದ ಅತಿದೊಡ್ಡ ಸಗಟು ಆಭರಣ ಮೇಳ `ಜ್ಯೂವೆಲ್ಸ್ ಅಫ್ ಇಂಡಿಯಾ~ ಅಕ್ಟೋಬರ್ 27ರಿಂದ 29ರ ವರೆಗೆ ನಗರದ ವಿಠಲ್ ಮಲ್ಯ ರಸ್ತೆಯಲ್ಲಿರುವ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿದೆ.ದೇಶದಾದ್ಯಂತದ ನವೀನ ಮಾದರಿಯ ಕಣ್ಣು ಕೋರೆೃಸುವ ಆಭರಣಗಳು ನಗರದ ಜನರನ್ನು ಸೂಜಿಗಲ್ಲಿನಂತೆ ಸೆಳೆಯುಲು ಸಜ್ಜಾಗಿವೆ. ಪ್ರದರ್ಶನ ಮೇಳಕ್ಕೆ ಹಿರಿಯ ನಟಿ ಸುಮಲತಾ ಅಂಬರೀಶ್ ರಾಯಭಾರಿಯಾಗಿದ್ದಾರೆ. ದೇಶದ 120ಕ್ಕೂ ಅಧಿಕ ಜ್ಯೂವೆಲ್ಲರ್ಸ್ ಒಂದೇ ವೇದಿಕೆಯಡಿ ತಮ್ಮ ಆಭರಣಗಳನ್ನು ಪ್ರದರ್ಶನಕ್ಕೆ ಇಡಲಿದ್ದಾರೆ.ಮೇಳದಲ್ಲಿ ಜೈಪುರದ ಮೀನಾಕ್ಷಿ ಮತ್ತು ಕ್ಲಾಸಿಕ್ ಕುಂದನ್ ವರ್ಕ್, ತಮಿಳುನಾಡಿನ ದೇವಸ್ಥಾನ ಮತ್ತು ಆಂಟಿಕ್ ಜ್ಯೂವೆಲ್ಲರಿ, ಮುಂಬೈನಿಂದ ಬ್ರಾಂಡೆಡ್ ಮತ್ತು ಡಿಸೈನರ್ ಆಭರಣಗಳು, ಕೋಲ್ಕತ್ತದ ಕರಕುಶಲ ಹಾಗೂ ಆದಿವಾಸಿ ಶೈಲಿಯ ಆಭರಣಗಳು, ಗುಜರಾತಿ ಶೈಲಿಯ ಕರಕುಶಲ ಆಭರಣಗಳು, ದಕ್ಷಿಣ ಭಾರತದ ಅತ್ಯುತ್ತಮ ಬ್ರೈಡಲ್ ಕಲೆಕ್ಷನ್, ಪ್ಯೂಷನ್, ಪುರುಷರ ಆಭರಣಗಳು ಸೇರಿದಂತೆ ನಾನಾ ಬಗೆಯ ಆಭರಣಗಳ ಪ್ರದರ್ಶನ ಇರಲಿದೆ.`ನಾವು ಹೊಸ ಅನ್ವೇಷಣೆಗಳಿಗೆ ಹಾಗೂ ಕಲ್ಪನೆಗಳಿಗೆ ಹೆಸರುವಾಸಿಯಾಗಿದ್ದೇವೆ. ಇದರಿಂದಾಗಿ ಗ್ರಾಹಕರ ದೃಷ್ಟಿಯಲ್ಲಿ ತಾಜಾತನ ಉಳಿಸಿಕೊಳ್ಳಲು ಸಾಧ್ಯವಾಗಿದೆ. ಗುಣಮಟ್ಟಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿದೆ.ಜೈಪುರ, ಚೆನ್ನೈ, ಹೈದರಾಬಾದ್, ಮುಂಬೈ, ಗುಜರಾತ್, ಅಹಮದಾಬಾದ್, ಬರ್ಮಾ, ಬೆಂಗಳೂರು, ತಮಿಳುನಾಡು ಸೇರಿದಂತೆ ವಿವಿಧ ಕಡೆಗಳಿಂದ ಆಭರಣ ಮಾರಾಟಗಾರರು ಮೇಳದಲ್ಲಿ ಪಾಲ್ಗೊಳ್ಳುತ್ತಿದ್ದಾರೆ~ ಎಂದು ಆಭರಣ ಮೇಳದ ಸಂಯೋಜಕ ಸಂದೀಪ್ ಬೇಕಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry