27 ಜಾನುವಾರು ಅಕ್ರಮ ಸಾಗಣೆ: ವಾಹನ ವಶ

7

27 ಜಾನುವಾರು ಅಕ್ರಮ ಸಾಗಣೆ: ವಾಹನ ವಶ

Published:
Updated:

ಗುಂಡ್ಲುಪೇಟೆ: ತಾಲ್ಲೂಕಿನ ಅರಣ್ಯ ಭಾಗಗಳ ಮೂಲಕ ಅಕ್ರಮವಾಗಿ ಜಾನು­ವಾರು­ಗಳನ್ನು ಕೇರಳಕ್ಕೆ ಸಾಗಿ­ಸುತ್ತಿದ್ದ  ವಾಹನವನ್ನು ಪ್ರಾಣಿ ದಯಾ ಸಂಘದ ಕಾರ್ಯ­ಕರ್ತರು ಸೋಮವಾರ ವಶ­ಪಡಿಸಿಕೊಂಡು ಗುಂಡ್ಲುಪೇಟೆ ಪೋಲೀ­ಸರ ವಶಕ್ಕೆ ಒಪ್ಪಿಸಿದ್ದಾರೆ.ಬೆಂಗಳೂರಿನ ಪ್ರಾಣಿ ದಯಾ ಸಂಸ್ಥೆ ‘ಗೌ ಗ್ಯಾನ್‌ ಫೌಂಡೇಷನ್‌’ನ ನಾಲ್ವರು ಕಾರ್ಯಕರ್ತರಾದ ಪ್ರಸಾದ್‌, ಸೋನು, ಸಿಂಗ್‌ ಹಾಗೂ ಜೋಷನ್‌ ಆ್ಯಂಟನಿ ಅವರು ಮೂಲೆಹೊಳೆ ಗಡಿ ಭಾಗದಲ್ಲಿ ವಾಹನದಲ್ಲಿ ಕಾದು ಕುಳಿತು ಜಾನು­ವಾರುಗಳ ಅಕ್ರಮ  ಸಾಗಾಣಿಕೆ­ಯನ್ನು ಕ್ಯಾಮೆರಾದಲ್ಲಿ ಚಿತ್ರೀಕರಿಸಿ­ಕೊಂಡರು. ಅದೇ ದಾರಿಯಲ್ಲಿ ಬಂದ ಕಂಟೈನರ್‌  ವಾಹನವನ್ನು ತಡೆದು, ಪರಿಶೀಲಿಸಿ­ದಾಗ ಅದರಲ್ಲಿ 27 ಜಾನುವಾರು­ಗಳನ್ನು ತುಂಬಿಸಲಾಗಿತ್ತು. ಗುಂಡ್ಲುಪೇಟೆ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿ ಅವರ ವಶಕ್ಕೆ ಒಪ್ಪಿಸಿದ್ದಾರೆ.ಅಕ್ರಮವಾಗಿ ಜಾನು­ವಾರು­­­ಗಳನ್ನು ಸಾಗಾ­­­ಣಿಕೆ ಮಾಡುತ್ತಿದ್ದ ಪಿರಿಯಾ­ಪಟ್ಟಣ ಮೂಲದ ಚಾಲಕ ತನ್ವೀರ್‌(19), ಅವನ ಸಹಚರ ನಾಸೀರ್‌ (19) ಅವರನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.ಇದೇ ವಿಚಾರವಾಗಿ ಪೊಲೀಸ್‌ ಅಧಿಕಾರಿಗಳು ಕಂಟೈನರ್‌ ವಾಹನದ ಬಳಿ ದೂರು ನೀಡಿದ ಕಾರ್ಯ­ಕರ್ತರಿಂದ ಮಾಹಿತಿ ಪಡೆಯುತ್ತಿದ್ದಾಗ ವಾಹನಗಳನ್ನು ಚೆಕ್‌ಪೋಸ್ಟ್‌ನಿಂದ ದಾಟಲು ಸಹಾಯ ಮಾಡುವ ಮಧ್ಯವರ್ತಿಯ ಕಡೆಯ ಯುವಕರ ಗುಂಪು ಕಾರ್ಯಕರ್ತರಾದ ಪ್ರಸಾದ್‌ ಮತ್ತು ಜೋಷನ್‌, ಆ್ಯಂಟನಿಯವರ ಮೇಲೆ ಹಲ್ಲೆ ನಡೆಸಲು ಮುಂದಾಯಿತು. ಅವರ ಬಳಿಯಲ್ಲಿದ್ದ ಕ್ಯಾಮೆರಾವನ್ನು ಕಿತ್ತುಕೊಂಡು ಚಿತ್ರೀಕರಣ­ಗೊಂಡಿದ್ದ ದೃಶ್ಯಗಳನ್ನು ಮತ್ತು ಕ್ಯಾಮೆರಾವನ್ನ ನಾಶ­ಪಡಿಸಿ­ದರು.  ಈ ಸಂದರ್ಭ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು ಎಂದು ಕಾರ್ಯಕರ್ತ ಪ್ರಸಾದ್‌ ವಿಷಾದ ವ್ಯಕ್ತಪಡಿಸಿದರು.ಹಲ್ಲೆ ನಡೆಸಲು ಮುಂದಾದ ಮಧ್ಯವರ್ತಿ ಮತ್ತು ಅವರ ಕಡೆಯವರ  ಮೇಲೆ ದೂರು ದಾಖಲಿ­ಸಲು ಮುಂದಾದಾಗ ಒಂದು ದೂರು ದಾಖ­ಲಾದ ನಂತರ ಮತ್ತೊಂದು ದೂರು ದಾಖಲಿಸಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳಿದ್ದಾರೆ ಎಂದು ಪ್ರಸಾ­ದ್‌

ವರದಿ­ಗಾರರಿಗೆ ಮಾಹಿತಿ ನೀಡಿದರು.ಇದಲ್ಲದೆ ವರದಿಗಾರರು ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಾಣಿ ದಯಾ ಸಂಘದ ಕಾರ್ಯಕರ್ತರಿಗೆ ಸಹಾಯ ಮಾಡಲು ಬಂದ ಸ್ಥಳೀಯರನ್ನು ಕೆಲವು ವ್ಯಕ್ತಿಗಳು ಬೆದರಿಸುತ್ತಿದ್ದುದು  ಕಂಡುಬಂತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry