ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

27, 28ರಂದು ಬೆಕ್ಕುಗಳ ಪ್ರದರ್ಶನ

Last Updated 23 ಏಪ್ರಿಲ್ 2013, 19:32 IST
ಅಕ್ಷರ ಗಾತ್ರ

ಬೆಂಗಳೂರು: `ಜರ್ಮನಿಯ ವಿಶ್ವ ಬೆಕ್ಕುಗಳ ಸಂಸ್ಥೆ (ಡಬ್ಲ್ಯೂ.ಸಿ.ಎಫ್) ಮತ್ತು ಭಾರತೀಯ ಬೆಕ್ಕುಗಳ ಸಂಸ್ಥೆಗಳ (ಐ.ಸಿ.ಎಫ್) ವತಿಯಿಂದ ಹೋಟೆಲ್ ಛಾನ್ಸರಿ ಪೆವಿಲಿಯನ್‌ನಲ್ಲಿ ಇದೇ ಶನಿವಾರ ಮತ್ತು ಭಾನುವಾರ (ಏ. 27ಮತ್ತು 28) ಅಂತರರಾಷ್ಟ್ರೀಯ ಬೆಕ್ಕುಗಳ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ' ಎಂದು ಐ.ಸಿ.ಎಫ್.ನ ಅಧ್ಯಕ್ಷ ಶ್ರೀನಾಯರ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಕ್ಕುಗಳನ್ನು ಸಾಕುವ ಕುರಿತು ಬಹುತೇಕ ಜನರಲ್ಲಿ ಮೂಢನಂಬಿಕೆ ಇದೆ. ಆದರೆ, ಬೆಕ್ಕು ಮಾನವ ಸ್ನೇಹಿ ಸಾಕು ಪ್ರಾಣಿಯಾಗಿದೆ. ಬೆಕ್ಕುಗಳನ್ನು ಸಾಕುವುದರಿಂದ ಯಾವುದೇ ಅಪಾಯವಿಲ್ಲ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ತಳಿಗಳ ಬೆಕ್ಕುಗಳ ಪ್ರದರ್ಶನ ಮತ್ತು ಬೆಕ್ಕುಗಳನ್ನು ಸಾಕುವ ಕುರಿತು ಮಾಹಿತಿ ನೀಡಲಾಗುವುದು. ಕೇರಳ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳ ದೇಶಿಯ ಮತ್ತು ವಿದೇಶಿ ತಳಿಯ ಬೆಕ್ಕುಗಳು ಪ್ರದರ್ಶನಗೊಳ್ಳಲಿವೆ ಎಂದರು.

ಪ್ರತಿ ದಿನ 120 ಬೆಕ್ಕುಗಳು ಪ್ರದರ್ಶನಗೊಳ್ಳಲಿದ್ದು, ಮೊದಲು ಹೆಸರು ನೋಂದಾಯಿಸಿಕೊಂಡವರಿಗೆ ಪ್ರದರ್ಶನಕ್ಕೆ ಆದ್ಯತೆ ನೀಡಲಾಗುವುದು. ಆಯ್ಕೆಯಾದ ಬೆಕ್ಕಿಗೆ ಬಹುಮಾನ ಮತ್ತು ಡಬ್ಲ್ಯೂ.ಸಿ.ಎಫ್ ನಿಂದ ಪ್ರಮಾಣಪತ್ರ ನೀಡಲಾಗುವುದು. ಆಸಕ್ತರು ತಮ್ಮ ಬೆಕ್ಕಿನ ತಳಿಯ ವಿವರಗಳೊಂದಿಗೆ ಹೆಸರು ನೋಂದಾಯಿಸಿಕೊಳ್ಳಬಹುದು ಎಂದರು.
ಮಾಹಿತಿಗೆ: 97429 29998.  www.indiancatfederation.org

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT