28ಕ್ಕೆ ವಿಟಿಯು ಉದ್ಯೋಗ ಮೇಳ

7

28ಕ್ಕೆ ವಿಟಿಯು ಉದ್ಯೋಗ ಮೇಳ

Published:
Updated:

ಬೆಳಗಾವಿ: ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕೈಗೆತ್ತಿ ಕೊಂಡಿರುವ ಎಂಜಿನಿಯರಿಂಗ್‌ ಪದವೀಧರರ ಕೌಶಲ ಅಭಿವೃ ದ್ಧಿಗೊಳಿಸುವ ‘ಮಿಷನ್‌ ವಿಟಿಯು– ಎಂಪವರ್‌ 10,000’ ಯೋಜನೆ ಯಡಿ ದಾವಣಗೆರೆಯ ಯುಬಿಡಿಟಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ  ಇದೇ 28ರಂದು ಬೆಳಿಗ್ಗೆ 9ರಿಂದ ಸಂಜೆ 5.30ರ ವರೆಗೆ ಬೃಹತ್‌ ಉದ್ಯೋಗ ಮೇಳ ಹಮ್ಮಿಕೊಂಡಿದೆ.ಈ ಉದ್ಯೋಗ ಮೇಳಕ್ಕೆ ಟೆಸ್ಕೊ, ವಿಪ್ರೊ, ಗೋದ್ರೇಜ್‌, ಐಬಿಎಂ, ಇನ್ಫೊಸಿಸ್‌, ಐಡಿಯಾ ಟೆಲಿಕಾಂ, ಏರ್‌ಟೆಲ್‌, ಐಸಿಐಸಿಐ, ಐಎನ್‌ಜಿ ವೈಶ್ಯ, ಮಾರುತಿ ಸುಜುಕಿ, ಅಮೆಜಾನ್‌, ಆದಿತ್ಯ ಬಿರ್ಲಾ ಸೇರಿದಂತೆ 50ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪೆನಿಗಳು ಬರಲಿವೆ. ವಿಟಿಯು ಸಂಯೋಜಿತ ಎಂಜಿನಿಯರಿಂಗ್‌ ಕಾಲೇಜುಗಳ ಉದ್ಯೋಗ ಆಕಾಂಕ್ಷಿ ಪದವೀಧರರು ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry