ಮಂಗಳವಾರ, ಮೇ 11, 2021
26 °C

28ಕ್ಕೆ ಸಣ್ಣ ಕೈಗಾರಿಕೆ ಬಂಡವಾಳ ಹೂಡಿಕೆದಾರರ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡಲು ಮತ್ತು ಸಣ್ಣ ಕೈಗಾರಿಕೋದ್ಯಮಿಗಳನ್ನು ಆಕರ್ಷಿಸಲು ಇದೇ ತಿಂಗಳ 19ರಿಂದ ಮೇ 15 ರವರೆಗೆ ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಸಣ್ಣ ಕೈಗಾರಿಕೆ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ನಡೆಸಲಾಗುವುದು ಎಂದು ಸಣ್ಣ ಕೈಗಾರಿಕಾ ಸಚಿವ ರಾಜೂಗೌಡ ಹೇಳಿದರು.ಮೊದಲನೇ ಹಂತದಲ್ಲಿ ಏ. 19ರಂದು ಹುಬ್ಬಳ್ಳಿ, ಏ. 20ರಂದು ಬೆಳಗಾವಿ, ಏ. 27ರಂದು ದಾವಣಗೆರೆ, ಏ. 28ರಂದು ಗುಲ್ಬರ್ಗ, ಮೇ 4, 5, 8 ರಂದು ಬೆಂಗಳೂರು, ಮೇ 10ರಂದು ಮೈಸೂರು ಮತ್ತು ಮೇ 15 ರಂದು ಚಿಕ್ಕಬಳ್ಳಾಪುರಗಳಲ್ಲಿ ಈ ಸಮಾವೇಶ ನಡೆಸಲಾಗುವುದು ಎಂದು ಬರ ಪರಿಸ್ಥಿತಿ ಪರಿಶೀಲನೆಯ ಸಭೆಯ ನಂತರ ಸುದ್ದಿಗಾರರಿಗೆ ವಿವರಿಸಿದರು.ಮೊದಲನೇ ಹಂತದಲ್ಲಿ ನಡೆಸಲಾಗುವ ಈ ಸಣ್ಣ ಕೈಗಾರಿಕೆ ಬಂಡವಾಳ ಹೂಡಿಕೆದಾರರ ಸಮಾವೇಶಗಳಿಂದ ಸುಮಾರು ರೂ. 25000ದಿಂದ ರೂ. 30000 ಕೋಟಿ  ಬಂಡವಾಳ ಹರಿದು ಬರಲಿದೆ. ಆಯಾ ಪ್ರದೇಶಕ್ಕೆ ಅನ್ವಯವಾಗುವ ರೀತಿಯಲ್ಲಿ ಸಣ್ಣ ಕೈಗಾರಿಕಾ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಲಾಗುವುದು.ಬರುವ 2-3 ತಿಂಗಳಲ್ಲಿ ಎಲ್ಲ ಜಿಲ್ಲೆಗಳಲ್ಲಿ ಇಂತಹ ಸಮಾವೇಶಪೂರ್ಣಗೊಳಿಸಲಾಗುವುದು. ಸ್ಥಳೀಯ ನಿರುದ್ಯೋಗಿ ಯುವಕರಿಗೆ ಈ ಸಮಾವೇಶಗಳು ಹೆಚ್ಚು ಉದ್ಯೋಗಾವಕಾಶ ನೀಡುವಲ್ಲಿ ನೆರವಾಗುತ್ತವೆ ಎಂದರು.ರಾಜ್ಯದಾದ್ಯಂತ 2006-07ರಿಂದ ಸಣ್ಣ ಕೈಗಾರಿಕೆಗಳಿಗೆ ನೀಡಬೇಕಾದ ಸಹಾಯಧನ ಪೈಕಿ ರೂ. 50 ಕೋಟಿ ಈಗಾಗಲೇ ನೀಡಿದ್ದು, ಇನ್ನೂ ಬಾಕಿ ಉಳಿದ ರೂ. 160 ಕೋಟಿ ಸಹಾಯಧನ ನೀಡಲು 2012-13ನೇ ಸಾಲಿನ ಆಯವ್ಯಯದಲ್ಲಿ ಘೋಷಣೆಯಾಗಿದೆ.

 

ರಾಜ್ಯದಲ್ಲಿರುವ 171 ಕೈಗಾರಿಕಾ ವಸಾಹತುಗಳಿಗೆ ಮೂಲ ಸೌಕರ್ಯ ಕಲ್ಪಿಸಲು ರೂ. 200 ಕೋಟಿ  ಸರ್ಕಾರಕ್ಕೆ ಕೇಳಲಾಗಿದೆ. ಈ ಪೈಕಿ ರಸ್ತೆಗಾಗಿ ರೂ. 60 ಕೋಟಿ ಮತ್ತು ನಗರಾಭಿವೃದ್ಧಿ ಸಚಿವಾಲಯದಿಂದ ಹೆಚ್ಚಿನ ಅನುದಾನ ಪಡೆದು ಮೂಲ ಸೌಕರ್ಯ ಕಲ್ಪಿಸಲು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.ಪಶುಸಂಗೋಪನಾ ಸಚಿವ ರೇವುನಾಯಕ ಬೆಳಮಗಿ, ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.