28 ಖಾಸಗಿ ಸದಸ್ಯರ ಮಸೂದೆ ಮಂಡನೆ

7

28 ಖಾಸಗಿ ಸದಸ್ಯರ ಮಸೂದೆ ಮಂಡನೆ

Published:
Updated:

ನವದೆಹಲಿ (ಪಿಟಿಐ): ಚುನಾವಣೆಯಲ್ಲಿ ಕಪ್ಪು ಹಣದ ಬಳಕೆ ತಡೆಗಟ್ಟಲು ರಾಜ್ಯಗಳೇ ಖರ್ಚು ಭರಿಸುವ ಉದ್ದೇಶಿತ ಮಸೂದೆ ಸೇರಿದಂತೆ 28 ಖಾಸಗಿ ಸದಸ್ಯರ ಮಸೂದೆಗಳನ್ನು ರಾಜ್ಯಸಭೆಯಲ್ಲಿ ಶುಕ್ರವಾರ ಮಂಡಿಸಲಾಯಿತು.

ಮದುವೆ ಸಂದರ್ಭದಲ್ಲಿ ದುಂದು ವೆಚ್ಚಕ್ಕೆ ಕಡಿವಾಣ ಹಾಕುವ ಹಾಗೂ ಆಹಾರ ಪದಾರ್ಥಗಳು ವ್ಯರ್ಥವಾಗದಂತೆ ತಡೆಗಟ್ಟುವ ಮೂಲಕ ಸರಳ ವಿವಾಹಕ್ಕೆ ಅವಕಾಶ ಕಲ್ಪಿಸುವ ಮಸೂದೆ ಇವುಗಳಲ್ಲಿ ಸೇರಿದೆ.ಕೂಡ ಮಂಡಿಸಲಾಯಿತು. ಇದಲ್ಲದೇ ದೇಶದ ಎಲ್ಲ ಯುವಕರಿಗೆ ಕಡ್ಡಾಯ ಸೇನಾ ತರಬೇತಿ ನೀಡುವ ಮಸೂದೆ ಕೂಡ ಮಂಡನೆಯಾಯಿತು.ಸರ್ಕಾರಿ ವೆಚ್ಚದಲ್ಲಿ ಚುನಾವಣೆಗೆ ಸ್ಪರ್ಧಿಸುವ 2012ರ ಮಸೂದೆಯನ್ನು ಬಿಜೆಪಿ ಸದಸ್ಯ ಪ್ರಭಾತ್ ಝಾ ಮಂಡಿಸಿದರು. ಲೋಕಸಭೆ, ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸುವ ಆಯಾ ಪಕ್ಷ ಮತ್ತು ಅದರ ಅಧಿಕೃತ ಅಭ್ಯರ್ಥಿಯೇ ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದ ವಿವರ ಒದಗಿಸಲು ಈ ಮಸೂದೆ ಅವಕಾಶ ಮಾಡಿಕೊಡುತ್ತದೆ.ಚುನಾವಣೆಯಲ್ಲಿ ಕಪ್ಪು ಹಣ ಬಳಕೆ ಹೆಚ್ಚುತ್ತಿರುವುದನ್ನು ಈ ಮೂಲಕ ತಡೆಗಟ್ಟಲು ಉದ್ದೇಶಿಸಿದೆ.

ವಸ್ತುಗಳು ಮತ್ತು ಸೇವೆಗಳ ಬೆಲೆ ಏರಿಕೆ ಪರಿಶೀಲನೆಗಾಗಿ ವಿಶೇಷ ದರ ನಿಯಂತ್ರಣ ಪ್ರಾಧಿಕಾರ ರಚಿಸಲು ಅವಕಾಶ ಕಲ್ಪಿಸುವ ಇನ್ನೊಂದು ಮಸೂದೆಯನ್ನು ಕೂಡ ಝಾ ಅವರೇ ಮಂಡಿಸಿದರು. ಗುರುತಿಸುವಿಕೆ ಮತ್ತು ಅಕ್ರಮವಾಗಿ ದೇಶದೊಳಗೆ ಪ್ರವೇಶಿಸಿದವರನ್ನು ಗಡೀಪಾರು ಮಾಡಲು ಅಧಿಕಾರವಿರುವ ರಾಷ್ಟ್ರೀಯ ಪ್ರಾಧಿಕಾರ ರಚಿಸುವ ಮಸೂದೆಯನ್ನು ಶಿವಸೇನೆ ಸದಸ್ಯ ರಾಜಕುಮಾರ ಧೂತ್ ಮಂಡಿಸಿದರು.ರೈತರ ಮೇಲೆ ಲೇವಾದೇವಿಗಾರರು, ಮಧ್ಯವರ್ತಿಗಳು, ವ್ಯಾಪಾರಿಗಳು ಮತ್ತು ಇತರರಿಂದ ಶೋಷಣೆ ತಪ್ಪಿಸಲು ಅವಕಾಶ ಕಲ್ಪಿಸುವ ಮತ್ತೊಂದು ಮಸೂದೆಯನ್ನು ಧೂತ್ ಅವರೇ ಮಂಡಿಸಿದರು.ಸರಳ ವಿವಾಹ ಮತ್ತು ಈ ವೇಳೆ ಆಹಾರ ವ್ಯರ್ಥವಾಗದಂತೆ ನೋಡಿಕೊಳ್ಳುವುದು, ಸಂಪತ್ತಿನ ಪ್ರದರ್ಶನ ತಡೆಗಟ್ಟಲು ಅವಕಾಶ ಕಲ್ಪಿಸುವ ಮಸೂದೆಯನ್ನು ಬಿಎಸ್‌ಪಿ ಸದಸ್ಯ ಅಖಿಲೇಶ್ ದಾಸ್ ಗುಪ್ತಾ ಮಂಡಿಸಿದರು. ದೇಶದಲ್ಲಿನ ಎಲ್ಲ ಯುವಕರಿಗೆ ಮಿಲಿಟರಿ ತರಬೇತಿ ಕಡ್ಡಾಯಗೊಳಿಸಲು ಅವಕಾಶ ನೀಡುವ ಮಸೂದೆಯನ್ನು ಬಿಜೆಪಿ ಸದಸ್ಯ ಅವಿನಾಶ್ ರಾಯ್ ಮಂಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry