28 ರಂದು ಬ್ಯಾಂಕ್‌ಮುಷ್ಕರ

7

28 ರಂದು ಬ್ಯಾಂಕ್‌ಮುಷ್ಕರ

Published:
Updated:

 ಹುಬ್ಬಳ್ಳಿ: ಬೆಲೆ ಏರಿಕೆ ತಡೆಗಟ್ಟಲು ಅವಶ್ಯಕ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಫೆ.28 ರಂದು ಮುಷ್ಕರ ನಡೆಸುವಂತೆ ಬ್ಯಾಂಕ್ ನೌಕರರಿಗೆ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ) ಕರೆ ನೀಡಿದೆ.ಪತ್ರಿಕಾಗೋಷ್ಠಿಯಲ್ಲಿ ಭಾನುವಾರ ಎಐಬಿಇಎ ರಾಷ್ಟ್ರೀಯ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಎಚ್. ವೆಂಕಟಾಚಲಂ ಈ ವಿಷಯ ತಿಳಿಸಿದರು.`ಎಲ್ಲ ಕಾರ್ಮಿಕ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಅಸಂಘಟಿತ ಕಾರ್ಮಿಕರಿಗೆ ರಾಷ್ಟ್ರೀಯ ಭದ್ರತಾ ನಿಧಿ ಸ್ಥಾಪಿಸಿ, ಅವಶ್ಯವಾದ ಹಣ ಒದಗಿಸಬೇಕು. ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ನಿಲ್ಲಿಸಬೇಕು. ಬೋನಸ್, ಭವಿಷ್ಯನಿಧಿಗಳ ಮೇಲಿನ ಮಿತಿಯನ್ನು ರದ್ದುಗೊಳಿಸಿ, ಗ್ರ್ಯಾಚುಟಿ ಮೊತ್ತವನ್ನು ಹೆಚ್ಚಿಸಬೇಕು ಎಂಬುವು ಪ್ರಮುಖ ಬೇಡಿಕೆಗಳಾಗಿವೆ~ ಎಂದು ಅವರು ತಿಳಿಸಿದರು.ಬಿಎಂಎಸ್, ಐಎನ್‌ಟಿಯುಸಿ, ಎಐಟಿಯುಸಿ, ಎಚ್‌ಎಂಎಸ್, ಸಿಐಟಿಯು, ಎಐಯುಟಿಯುಸಿ, ಟಿಯುಸಿಸಿ, ಯುಟಿಯುಸಿ, ಎಲ್‌ಪಿಎಫ್ ಸೇರಿದಂತೆ ಹಲವು ಕಾರ್ಮಿಕ ಸಂಘಟನೆಗಳ ಜತೆಯಲ್ಲಿ ಈ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry