ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

28 ಮಂದಿ ರೌಡಿಗಳು ವಶಕ್ಕೆ

ನೆಲಮಂಗಳ ತಾಲ್ಲೂಕಿನಾದ್ಯಂತ ಪೊಲೀಸರ ಕಾರ್ಯಾಚರಣೆ
Last Updated 7 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನೆಲಮಂಗಲ: ಶುಕ್ರವಾರ ರಾತ್ರಿ ತಾಲ್ಲೂಕಿನಾದ್ಯಂತ ಕಾರ್ಯಾಚರಣೆ ನಡೆಸಿದ ಪೊಲೀಸರು ರೌಡಿ ಪಟ್ಟಿಯಲ್ಲಿರುವ 28 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

‘ಖಾಸಿಂ, ಎಚ್‌.ಎಸ್‌.ಉಮೇಶ್‌, ಶರವಣ, ಮೋಹನಕುಮಾರ್‌ ಅಲಿ­ಯಾಸ್‌ ಕುಳ್ಳ, ನಾಗರಾಜು, ಬಸವ­ರಾಜು ಅಲಿಯಾಸ್‌ ಅಪ್ಪಿ, ಜಿ.ಮೂರ್ತಿ, ಜಬಿ, ಜಫ್ರುಲ್ಲಾ, ಯತೀಶ್‌, ಮಂಜುನಾಥ್‌, ಗೋವಿಂದ­ರಾಜು, ಹೇಮಂತಕುಮಾರ್‌ ಅಲಿ­ಯಾಸ್‌ ಹುಸ್ಕೂರು ಶಿವ, ದಿಲೀಪ್‌, ರಾಜು, ಕೆಂಪರಾಜು, ಮಹಾದೇವಯ್ಯ, ಮಂಜುನಾಥ್‌, ಧರ್ಮಪ್ರಕಾಶ್‌, ನಿಂಗೇಗೌಡ, ಕೆಂಪರಾಜು, ಎಚ್‌.ಡಿ.­ಕಿರಣ್‌, ಮುನಿರಾಜು, ನಾಗರಾಜು,  ಗಿರೀಶ್‌, ಮೌಲಾ, ಯತೀಶ್‌ ಅಲಿ­ಯಾಸ್‌ ಬೆಟ್ಟಹಳ್ಳಿ ಯತೀಶ್‌ ಸೇರಿದಂತೆ 28 ಮಂದಿಯನ್ನು ವಶಕ್ಕೆ ತೆಗೆದು­ಕೊಳ್ಳಲಾಗಿದೆ’ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ವರಿಷ್ಠಾಧಿಕಾರಿ ಬಿ.ರಮೇಶ್‌ ತಿಳಿಸಿದ್ದಾರೆ.

ಪಟ್ಟಣ, ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕೆಲ ರೌಡಿಗಳು ಮಾರಕಾಸ್ತ್ರ, ರಿವಾಲ್ವರ್‌ಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದಾರೆ. ರೌಡಿ ಚಟುವಟಿಕೆ ಮತ್ತೆ ಚಿಗುರೊಡೆಯುತ್ತಿದೆ ಎಂಬ ಮಾಹಿತಿ ಆಧರಿಸಿ ದಿಢೀರ್‌ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಿದ್ದೇವೆ ಎಂದರು.
ವಶಕ್ಕೆ ಪಡೆದ ರೌಡಿಗಳ ಜೀವನ ನಿರ್ವಹಣೆ, ಚಲನವಲನಗಳ ಬಗ್ಗೆ ಮಾಹಿತಿ ಪಡೆದಿದ್ದು, ವಿವಿಧ ಕೇಸ್‌ಗಳಲ್ಲಿ ಬೇಕಾದಂತಹ ಶಂಕಿತ ರೌಡಿಗಳಾದ ಬಸವರಾಜು, ನಾಗ­ರಾಜು, ಜಬಿ, ಮೋಹನ ಅವರನ್ನು ಬಂಧಿಸಿ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಮುಂದೆ ಹಾಜರು ಪಡಿಸಿದ್ದು ಉಳಿದ­ವರನ್ನು ಎಚ್ಚರಿಸಿ ಮುಚ್ಚಳಿಕೆ ಬರೆಸಿ­ಕೊಂಡು ಬಿಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಲ್ಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಈ ಕಾರ್ಯಾಚರಣೆ ನಡೆಸ-­ಲಾಗಿದೆ. ಅಡಿಷನಲ್‌ ಎಸ್ಪಿ ಅಬ್ದುಲ್‌ ಅಹಮದ್‌, ಡಿವೈಎಸ್ಪಿ ಮಲ್ಲೇಶ್‌, ಸರ್ಕಲ್‌ ಇನ್ಸ್‌ಪೆಕ್ಟರ್‌ ಪರಮೇಶ್ವರ್‌, ಸಬ್‌­ಇನ್ಸ್‌ಪೆಕ್ಟರ್‌­ಗಳಾದ ಬಾಲಾಜಿ­ಬಾಬು, ಗ್ರಾಮಾಂತರ ಠಾಣೆಯ ನವೀನ್‌­ಕುಮಾರ್‌, ಪಟ್ಟಣ ಠಾಣೆಯ ಚೇತನ್‌ಕುಮಾರ್‌, ಮಾದನಾಯಕ­ನಹಳ್ಳಿ ಠಾಣೆಯ ರವಿ ಮತ್ತು ಸಿಬ್ಬಂದಿ ಭಾಗಿಗಳಾಗಿದ್ದರು. ವಶಕ್ಕೆ ಪಡೆದ ರೌಡಿಗಳನ್ನು ವೀಕ್ಷಿಸಲು ನೂರಾರು ಜನ ಪಟ್ಟಣ ಪೊಲೀಸ್‌ ಠಾಣೆ ಮುಂದೆ ಜಮಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT