ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

28ರಿಂದ ರಾಷ್ಟ್ರೀಯ ಟೇಕ್ವಾಂಡೊ

Last Updated 19 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರೀಯ ಟೇಕ್ವಾಂಡೊ ಚಾಂಪಿಯನ್‌ಷಿಪ್‌ಗೆ ಕರ್ನಾಟಕ ಈ ಸಲ ಆತಿಥ್ಯ ವಹಿಸ ಲಿದ್ದು, ಸತತ ಐದು ವರ್ಷಗಳಿಂದ ಚಾಂಪಿಯನ್‌ ಆಗುತ್ತಾ ಬಂದಿರುವ ಆತಿಥೇಯರಿಗೆ ತವರಿನಲ್ಲಿ ಸಾಮರ್ಥ್ಯ ಮೆರೆಯುವ ಅವಕಾಶ ಒದಗಿ ಬಂದಿದೆ.

ಕೋರಮಂಗಲ ಒಳಾಂಗಣ ಅಂಗಳದಲ್ಲಿ ಡಿಸೆಂಬರ್‌ 28ರಿಂದ 30ರ  ವರೆಗೆ  28ನೇ ರಾಷ್ಟ್ರೀಯ ಟೇಕ್ವಾಂಡೊ ಚಾಂಪಿಯನ್‌ಷಿಪ್‌ ಆಯೋಜಿಸ ಲಾಗಿದೆ.

9ರಿಂದ 12, 13 ಹಾಗೂ 14, 15ರಿಂದ 17 ವರ್ಷದೊಳಗಿನವರು ಮತ್ತು ಹಿರಿಯರ (40 ವರ್ಷ ಮೇಲಿನವರು) ವಯೋಮಾನದಲ್ಲಿ ಸ್ಪರ್ಧೆಗಳು ನಡೆಯಲಿವೆ. ವೈಯಕ್ತಿಕ ಸ್ಪೈರಿಂಗ್‌, ತಂಡ ವಿಭಾಗದ ಸ್ಪೈರಿಂಗ್‌, ವೈಯಕ್ತಿಕ ಪ್ಯಾಟ್ರನ್‌, ವೈಯಕ್ತಿಕ ಪವರ್‌ ಹಾಗೂ ಸೆಲ್ಫ್‌ ಡಿಫೆನ್ಸ್‌ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿವೆ. ಕರ್ನಾಟಕ ತಂಡಕ್ಕೆ ಪುನಿತ್‌ ಕುಮಾರ್‌ ಕೋಚ್‌ ಆಗಿದ್ದಾರೆ.

‘1988 ಮತ್ತು 2004ರಲ್ಲಿ ಬೆಂಗಳೂರಿನಲ್ಲಿ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ನಡೆದಿತ್ತು. ಒಂಬತ್ತು ವರ್ಷಗಳ ಬಳಿಕ ಮತ್ತೊಮ್ಮೆ ಚಾಂಪಿಯನ್‌ಷಿಪ್‌ ಸಂಘಟಿಸುವ ಅವಕಾಶ ಲಭಿಸಿದೆ. 28 ರಾಜ್ಯಗಳ 1000 ಸ್ಪರ್ಧಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ’ ಎಂದು ಕರ್ನಾಟಕ ಟೇಕ್ವಾಂಡೊ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜೆ. ಪ್ರದೀಪ್‌ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕರ್ನಾಟಕದ ರೋಹಿತ್‌, ಹೇಮಂತ್‌್, ಮೀರಬ್ಬಾ, ಪವನ್‌, ನಯನಾ, ವನಿತಾ, ತನುಜಾ ಮತ್ತು ಕೋಚ್‌ ಕೂಡಾ ಆಗಿರುವ ರಮ್ಯಾ ಅವರು ಪ್ರಶಸ್ತಿ ಗೆಲ್ಲುವ ನೆಚ್ಚಿನ ಸ್ಪರ್ಧಿಗಳೆನಿಸಿದ್ದಾರೆ.  ಹೋದ ವರ್ಷ ಅಹಮದಾಬಾದ್‌ನಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲೂ ಇವರು ಪದಕ ಜಯಿಸಿದ್ದರು. ಪರಿಕ್ರಮ ಶಾಲೆಯಲ್ಲಿ ಓದುತ್ತಿರುವ ವನಿತಾ, ನಯನಾ ಟೇಕ್ವಾಂಡೊದ ವಿವಿಧ ಪಟ್ಟುಗಳನ್ನು ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT