ಮಂಗಳವಾರ, ಮೇ 18, 2021
28 °C

29ರಂದು ಕೌನ್ಸೆಲಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವೈದ್ಯಕೀಯ/ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಇದೇ 29ರಂದು ಮುಂದುವರಿದ ಕ್ಯಾಷುವಲ್ ಸುತ್ತಿನ ಕೌನ್ಸೆಲಿಂಗ್ ನಡೆಯಲಿದೆ. ಕೆಲವರು ಸೀಟುಗಳನ್ನು ಹಿಂತಿರುಗಿಸಿರುವುದರಿಂದ ತೆರವಾಗಿರುವ ಸೀಟುಗಳ ಭರ್ತಿಗೆ ಕೌನ್ಸೆಲಿಂಗ್ ನಡೆಯಲಿದೆ.ಎರಡು ಕಡೆ ಪ್ರವೇಶ ಪಡೆದು ಇದುವರೆಗೆ ಸೀಟು ವಾಪಸ್ ಮಾಡದೆ ಇರುವ ವಿದ್ಯಾರ್ಥಿಗಳು ಇದೇ 28ರ ಒಳಗೆ ಸೀಟು ಹಿಂತಿರುಗಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮನವಿ ಮಾಡಿದೆ.ಎಂಜಿನಿಯರಿಂಗ್ ಮತ್ತು ವಾಸ್ತುಶಿಲ್ಪ ಕೋರ್ಸ್‌ಗಳ ಪ್ರವೇಶಕ್ಕೆ ಮುಂದುವರಿದ ಕ್ಯಾಷುವಲ್ ಸುತ್ತಿನ ಕೌನ್ಸೆಲಿಂಗ್ ಇದೇ 30 ಮತ್ತು ಅ.1ರಂದು ನಡೆಯಲಿದೆ. ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ಎರಡು ಕೋರ್ಸ್‌ಗಳಿಗೆ ಪ್ರವೇಶ ಪಡೆದಿರುವ ಅಥವಾ ಒಂದೇ ಕೋರ್ಸ್‌ಗೆ ಎರಡು ಕಡೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಒಂದು ಸೀಟು ಉಳಿಸಿಕೊಂಡು ಮತ್ತೊಂದು ಸೀಟು ಹಿಂತಿರುಗಿಸಿದರೆ, ಬೇರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಇದನ್ನು ಅರ್ಥಮಾಡಿಕೊಂಡು ಸೀಟು ಹಿಂತಿರುಗಿಸಬೇಕು ಎಂದು ಪ್ರಾಧಿಕಾರ ವಿನಂತಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.