ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

29ಸಾವಿರ ಅಂಗವಿಕಲರಿಗೆ ಸರ್ಕಾರದ ಸೌಲಭ್ಯ

Last Updated 3 ಡಿಸೆಂಬರ್ 2013, 5:42 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯಲ್ಲಿ 29,534 ಅಂಗವಿಕಲ ಗುರುತಿನ ಚೀಟಿಗಳನ್ನು ನೀಡಲಾಗಿದೆ. ಇವರಿಗೆ ಸರ್ಕಾರದಿಂದ ಹತ್ತು–ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಮುಖ್ಯವಾಗಿ ಸರ್ಕಾರ ಮಾಸಿಕ ವೇತನ ನೀಡುತ್ತಿದೆ. ಅಂಕವಿಕಲತೆಯ ಶೇಕಡಾವಾರು ಲೆಕ್ಕದಲ್ಲಿ ವೇತನವನ್ನೂ ನಿಗದಿಗೊಳಿಸಲಾಗಿದೆ.

ಓದುವ ವಿದ್ಯಾರ್ಥಿಗಳಿಗೆ ಅಂಗವಿಕಲ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಇದು ಕೂಡ ಆಯಾ ತರಗತಿ ಆಧಾರ ವಾಗಿರುತ್ತದೆ. ಈ ಮೇಲಿನ ಎಲ್ಲಾ ಯೋಜನೆಗಳು ಈ ಹಿಂದಿನಿಂದಲೂ ಇವೆ.

ಈ ವರ್ಷದ ಆಗಸ್ಟ್‌ನಿಂದ ಸರ್ಕಾರ ಅಂಗವಿಕಲರಿಗಾಗಿ ಹೊಸ ಹೊಸಯೋಜನೆಗಳನ್ನು ಅನುಷ್ಠಾನ ಗೊಳಿಸುತ್ತಿದ್ದು, ಪ್ರಮುಖವಾಗಿ ಶುಲ್ಕ ಮರುಪಾವತಿ ಯೋಜನೆ ಈ ಶೈಕ್ಷಣಿಕ ವರ್ಷದಿಂದ ಆರಂಭವಾಗಿದೆ. ಉನ್ನತ ಶಿಕ್ಷಣ ಪಡೆಯುತ್ತಿರುವ ಅಂಗವಿಕಲರಿಗೆ ಪ್ರಯೋಗಾಲಯ, ಗ್ರಂಥಾಲಯ ಮತ್ತಿತರ ಶುಲ್ಕಗಳನ್ನು ಸರ್ಕಾರವೇ ಭರಿಸಲಿದೆ.

ಹಾಗೆಯೇ, ಅಂಗವಿಕಲರನ್ನು ಮದುವೆ ಯಾಗುವವರಿಗೆ ಸರ್ಕಾರ ₨ 50ಸಾವಿರ ಪ್ರೋತ್ಸಾಹ ಧನ ನೀಡಲಿದೆ. ಅಂಧ ಗರ್ಭಿಣಿಯರಿಗೆ ಎರಡು ಹೆರಿಗೆಗೆ, ಪ್ರತಿ ತಿಂಗಳು ₨ 2ಸಾವಿರ ಶಿಶುಪಾಲನ ಭತ್ಯೆ ನೀಡಲಿದೆ.

ಇವೆಲ್ಲದರ ಜತೆ ಅಂಗವಿಕಲರಿಗೆ ಮೂರು ಬೈಸಿಕಲ್‌, ಗಾಲಿ ಕುರ್ಚಿ, ಬಗಲು ಕೋಲು, ಅಂಧರಿಗೆ ಕೋಲು, ವಾಚ್‌, ಕಿವಿಯ ಸಲಕರಣೆ ಸೇರಿದಂತೆ ಮತ್ತಿತರರ ಸಾಧನಗಳನ್ನು ಇಲಾಖೆ ನೀಡುತ್ತದೆ ಎಂದು ಮಾಹಿತಿ ನೀಡುತ್ತಾರೆ ಜಿಲ್ಲಾ ಕಲ್ಯಾಣಧಿಕಾರಿ, ಅಂಗವಿಕಲ ಮತ್ತು ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಯೋಜನಾ ಸಹಾಯಕ ಎಸ್‌.ಕೆ.ನರೇಂದ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT