ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2ಜಿ ಲೈಸೆನ್ಸ್ ರದ್ದು: ಹಾನಿಯ ಅಂದಾಜು 82.7 ಕೋಟಿ ಡಾಲರ್ ನಷ್ಟ

Last Updated 9 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

 ನವದೆಹಲಿ (ಪಿಟಿಐ): ಸುಪ್ರೀಂಕೋರ್ಟ್ 122 ಸ್ಪೆಕ್ಟ್ರಂ ಪರವಾನಗಿಗಳನ್ನು ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ ತನ್ನ ಭಾರತೀಯ ಕಾರ್ಯಚಟುವಟಿಕೆಯ 82.7 ಕೋಟಿ ಡಾಲರ್ ಮೌಲ್ಯದ ಆದಾಯವನ್ನು ಹಾನಿಯ ದರವಾಗಿ (ನಷ್ಟದ ಬಾಬ್ತು) ಪರಿಗಣಿಸಿರುವುದಾಗಿ ಹೊಸ ಟೆಲಿಕಾಂ ನಿರ್ವಾಹಕ ಎಟಿಸಲಾಟ್ ಡಿಬಿಯಲ್ಲಿ ಷೇರುದಾರನಾಗಿರುವ ದುಬೈ ಮೂಲದ ಎಟಿಸಲಾಟ್ ಗುರುವಾರ ಪ್ರಕಟಪಡಿಸಿದೆ.

ಯುಎಇನ ಎಟಿಸಲಾಟ್ ಮತ್ತು ಭಾರತೀಯ ನಿರ್ವಾಹಕ ಡಿಬಿ ರಿಯಾಲ್ಟಿ ಜಂಟಿಯಾಗಿ ಎಟಿಸಲಾಟ್ ಡಿಬಿ ಸಂಸ್ಥೆಯನ್ನು ನಡೆಸುತ್ತಿದ್ದು, ಇದರಲ್ಲಿ ಎಟಿಸಲಾಟ್ ಶೇ 45ರಷ್ಟು ಷೇರು ಹೊಂದಿದೆ. ಎಟಿಸಲಾಟ್‌ನ 2011ರ ಒಟ್ಟಾರೆ ಹಣಕಾಸು ಹೇಳಿಕೆಯಲ್ಲಿ 4,135ಕೋಟಿ ರೂಪಾಯಿ (82.7ಕೋಟಿ ಡಾಲರ್) ಮೊತ್ತವನ್ನು ನಷ್ಟದ ಶುಲ್ಕವಾಗಿ ಪರಿಗಣಿಸಲು ಆಡಳಿತ ಮಂಡಳಿ ನಿರ್ಧರಿಸಿರುವುದಾಗಿ ಕಂಪೆನಿಯ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT