ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2ಜಿ ಹರಾಜು: ರೂ 20 ಸಾವಿರ ಕೋಟಿ ನಿರೀಕ್ಷೆ

Last Updated 14 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪ್ರಸಕ್ತ ಆರ್ಥಿಕ ವರ್ಷದ ಅಂತ್ಯದಲ್ಲಿ ನಡೆಯಲಿರುವ  ಎರಡನೇ ಸುತ್ತಿನ ತರಂಗಾಂತರ ಹರಾಜಿನಿಂದ 20,000 ಕೋಟಿ ರೂಪಾಯಿ ಸಂಗ್ರಹವಾಗುವ ನಿರೀಕ್ಷೆ ಇದೆ ಎಂದು ದೂರಸಂಪರ್ಕ ಇಲಾಖೆ ಕಾರ್ಯದರ್ಶಿ ಆರ್. ಚಂದ್ರಶೇಖರ್ ಹೇಳಿದ್ದಾರೆ.

`ಈಗ ನಿಗದಿ ಪಡಿಸಿರುವ ಬೆಲೆಯಲ್ಲಿ ಹರಾಜು ಹಾಕಲಿರುವ 1800 ಮೆಗಾ ಹರ್ಟ್ಸ್ ಮತ್ತು 900 ಮೆಗಾ ಹರ್ಟ್ಸ್ ತರಂಗಾಂತರ ಶ್ರೇಣಿಯಿಂದ ರೂ 20,000 ಕೋಟಿ ರೂಪಾಯಿ ಸಂಗ್ರಹವಾಗಬಹುದು ಎಂದು ನನಗನ್ನಿಸುತ್ತದೆ' ಎಂದು ಎಫ್‌ಐಸಿಸಿಐ ಆಯೋಜಿಸಿದ್ದ `ಇಂಡಿಯಾ ಟೆಲಿಕಾಂ-2012' ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಚಂದ್ರಶೇಖರ್ ಸುದ್ದಿಗಾರರಿಗೆ ತಿಳಿಸಿದರು.

ಈ ಆರ್ಥಿಕ ವರ್ಷದ ಅಂತ್ಯದೊಳಗೆ ಹರಾಜು ಪ್ರಕ್ರಿಯೆ ಮುಗಿಯಲಿದ್ದು, ಈ ಮೊದಲಿನ ಹರಾಜು ಸಂಸ್ಥೆಯೇ ಈ ಹರಾಜನ್ನು ನಡೆಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT