ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2ನೇ ಪತ್ನಿ ಮನೆಗೆ ಬಂದರೆ ಮೊದಲ ಪತ್ನಿ ಜೀವನಾಂಶ ಕೋರಲು ಅರ್ಹ

Last Updated 13 ಡಿಸೆಂಬರ್ 2012, 19:40 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಪತಿಯು ಎರಡನೇ ಪತ್ನಿಯನ್ನು ಮನೆಗೆ ಕರೆತಂದರೆ, ಮೊದಲನೇ ಪತ್ನಿಯು ಅದನ್ನೇ ಆಧರಿಸಿ  ಜೀವನಾಂಶ ಕೋರಬಹುದು ಎಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ.

ಹೀಗೆ, ಎರಡನೇ ಪತ್ನಿಯನ್ನು ಮನೆಗೆ ಕರೆತಂದಾಗ ಮೊದಲನೇ ಪತ್ನಿಯು ಗಂಡನೊಂದಿಗೆ ಸಹ ಜೀವನ ನಡೆಸಬೇಕೆಂದು ಅಪೇಕ್ಷಿಸಬಾರದು ಎಂದೂ ವಿಚ್ಛೇದನ ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾಯಮೂರ್ತಿ ರೋಷನ್ ದಲ್ವಿ ಸ್ಪಷ್ಟಪಡಿಸಿದ್ದಾರೆ.

ವೈಯಕ್ತಿಕ ಕಾನೂನಿನ ಅಡಿ ವ್ಯಕ್ತಿಗೆ ಎರಡನೇ ಪತ್ನಿಯನ್ನು ಮನೆಗೆ ಕರೆತರಲು ಅವಕಾಶವಿದ್ದರೂ, ಪತಿಯು ಮನೆಗೆ ಮತ್ತೊಬ್ಬಳನ್ನು ಪತ್ನಿಯಾಗಿ ಕರೆ ತಂದಾಗ, ಮೊದಲು ಕೈಹಿಡಿದಾಕೆಯ ಭಾವನೆಗಳಿಗೆ ಘಾಸಿಯಾಗುವುದನ್ನು ಊಹಿಸಲಾಗದು. ಅದು ವ್ಯಕ್ತಿಯು ಮೊದಲ ಬಾಳ ಸಂಗಾತಿಯ ಮೇಲೆ ಎಸಗುವ ಭಾವನಾತ್ಮಕ ಮತ್ತು ಮಾನಸಿಕ ಹಿಂಸಾಚಾರ ಎಂಬುದು ಅನೇಕ ಪ್ರಕರಣಗಳಲ್ಲಿ ಸಾಬೀತಾಗಿದೆ ಎಂದು ನ್ಯಾಯಮೂರ್ತಿ ವಿವರಿಸಿದ್ದಾರೆ.

ನಾಸಿಕ್‌ದ ಕೌಟುಂಬಿಕ ನ್ಯಾಯಾಲಯ ನೀಡಿದ ತೀರ್ಪನ್ನು ಪ್ರಶ್ನಿಸಿ ಇರ್ಫಾನ್ ಶೇಖ್ ಎಂಬುವವರು ಸಲ್ಲಿಸಿದ್ದ ವಿಚಾರಣೆ ವೇಳೆ ಅವರು ಹೀಗೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT