ಶನಿವಾರ, ನವೆಂಬರ್ 23, 2019
17 °C

3ಜಿ: ವೊಡಾಫೋನ್, ಐಡಿಯಾ ನಿರಾಳ

Published:
Updated:

ನವದೆಹಲಿ (ಪಿಟಿಐ): ಪರವಾನಗಿ ಇಲ್ಲದೆ ನಿಗದಿತ ದೂರಸಂಪರ್ಕ ವಲಯದ ಹೊರಗೆ ಕಾನೂನು ಬಾಹಿರವಾಗಿ 3ಜಿ ತರಂಗಾಂತರ ಸೇವೆ ಒದಗಿಸಿದ ವೊಡಾಫೋನ್ ಮತ್ತು ಐಡಿಯಾ ಸೆಲ್ಯುಲರ್ ಸಂಸ್ಥೆ ಗಳ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ದೆಹಲಿ ಹೈಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ತಡೆಯೊಡ್ಡಿದೆ.ಕೇಂದ್ರ ತಮ್ಮ ವಿರುದ್ಧ ಕ್ರಮವಾಗಿ ವಿಧಿಸಿದ  ರೂ 550 ಮತ್ತು ರೂ  300 ಕೋಟಿ ದಂಡವನ್ನು ಪ್ರಶ್ನಿಸಿ ವೊಡಾಫೋನ್ ಮತ್ತು ಐಡಿಯಾ ಸೆಲ್ಯುಲರ್ ಸಂಸ್ಥೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಈ ರೀತಿ ತಾಕೀತು ಮಾಡಿದೆ.ಇದೇ ರೀತಿಯ ಪ್ರಕರಣವೊಂದರಲ್ಲಿ ಸುಪ್ರೀಂಕೋರ್ಟ್, ಭಾರ್ತಿ ಸೆಲ್ಯುಲರ್ ಸಂಸ್ಥೆ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಸುಪ್ರೀಂಕೋರ್ಟ್, ದೂರಸಂಪರ್ಕ ಇಲಾಖೆಗೆ ತಾಕೀತು ಮಾಡಿತ್ತು. ಇದನ್ನೇ ಮಾನದಂಡವಾಗಿಟ್ಟುಕೊಂಡು ಈ ಆದೇಶ ನೀಡಲಾಗಿದೆ ಎಂದು ನ್ಯಾಯಮೂರ್ತಿ ರಾಜೀವ್ ಶಕ್ದರ್ ತಿಳಿಸಿದರು. ಯಾವುದೇ ಹೊಸ ಗ್ರಾಹಕರಿಗೆ 3ಜಿ ಸೇವೆ ನೀಡದಂತೆ ಎರಡೂ ಖಾಸಗಿ ದೂರಸಂಪರ್ಕ ಸಂಸ್ಥೆಗಳಿಗೆ ನ್ಯಾಯಾಲಯ ಷರತ್ತು ವಿಧಿಸಿದೆ.

ಪ್ರತಿಕ್ರಿಯಿಸಿ (+)