3 ಕಡೆ ಹೊಸ ಪಶುಆಹಾರ ಘಟಕ

7

3 ಕಡೆ ಹೊಸ ಪಶುಆಹಾರ ಘಟಕ

Published:
Updated:

ಬೆಂಗಳೂರು: ರೈತರಿಗೆ ಪಶು ಆಹಾರ ಪೂರೈಸಲು ಶಿಕಾರಿಪುರ, ಬಿಡದಿ ಹಾಗೂ ಹಾಸನದಲ್ಲಿ ಶೀಘ್ರದಲ್ಲಿಯೇ ಪಶು ಆಹಾರ ತಯಾರಿಕಾ ಘಟಕಗಳನ್ನು ಸ್ಥಾಪಿಸುವುದಾಗಿ ಕರ್ನಾಟಕ ಹಾಲು ಮಹಾಮಂಡಳಿಯ (ಕೆಎಂಎಫ್) ವ್ಯವಸ್ಥಾಪಕ ನಿರ್ದೇಶಕ ಎ.ಎಸ್. ಪ್ರೇಮನಾಥ್ ತಿಳಿಸಿದರು.ನಗರದಲ್ಲಿರುವ ಕೆಎಂಎಫ್ ಕೇಂದ್ರ ಕಚೇರಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ‘ಪ್ರಸ್ತುತ ದಿನಗಳಲ್ಲಿ ರಾಜ್ಯದಲ್ಲಿ ಸ್ವಲ್ಪಮಟ್ಟಿಗೆ ಹಾಲು ಉತ್ಪಾದನೆ ಕಡಿಮೆಯಾಗಿದೆ. ಮುಖ್ಯವಾಗಿ ಪಶು ಆಹಾರದ ಕೊರತೆಯೇ ಇದಕ್ಕೆ ಕಾರಣ. ಇದನ್ನು ನೀಗಿಸಲು ರೈತರಿಗೆ ಸೂಕ್ತ ಬೆಲೆಯಲ್ಲಿ ಪಶು ಆಹಾರ ಪೂರೈಸಲು ಘಟಕಗಳನ್ನು ಸ್ಥಾಪಿಸಲಾಗುತ್ತಿದೆ’ ಎಂದು ಅವರು ಹೇಳಿದರು.‘ರಾಜ್ಯ ಸರ್ಕಾರದ ನೆರವಿನೊಂದಿಗೆ ಶಿಕಾರಿಪುರದಲ್ಲಿ 300 ಟನ್ ಸಾಮರ್ಥ್ಯದ ಘಟಕವನ್ನು ರೂ 45 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗುತ್ತಿದೆ. ಒಂದು ವರ್ಷದೊಳಗೆ ಈ ಘಟಕ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ’ ಎಂದು ಅವರು ತಿಳಿಸಿದರು.‘ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿಯಿಂದ ಸಾಲ ಪಡೆದು ಬಿಡದಿ ಹಾಗೂ ಹಾಸನ ಘಟಕಗಳನ್ನು ಸ್ಥಾಪಿಸಲಾಗುವುದು. ಸುಮಾರು ರೂ 60 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವ 500 ಟನ್ ಸಾಮರ್ಥ್ಯದ ಬಿಡದಿ ಘಟಕವು 18 ತಿಂಗಳಲ್ಲಿ ಕಾರ್ಯಾರಂಭ ಮಾಡಲಿದೆ.ಇದರಂತೆ ರೂ 40 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವ 300 ಟನ್ ಸಾಮರ್ಥ್ಯದ ಹಾಸನ ಘಟಕವು ಸೆಪ್ಟೆಂಬರ್‌ನಲ್ಲಿ ಆರಂಭವಾಗಲಿದೆ’ ಎಂದು ಅವರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry