3 ಕೋಟಿ ಸಾಲದಲ್ಲಿ ಬಿಬಿಎಂಪಿ - ಜೆಡಿಎಸ್ ಆರೋಪ

7

3 ಕೋಟಿ ಸಾಲದಲ್ಲಿ ಬಿಬಿಎಂಪಿ - ಜೆಡಿಎಸ್ ಆರೋಪ

Published:
Updated:
3 ಕೋಟಿ ಸಾಲದಲ್ಲಿ ಬಿಬಿಎಂಪಿ - ಜೆಡಿಎಸ್ ಆರೋಪ

ಬೆಂಗಳೂರು: `ಸಮರ್ಪಕ ಆರ್ಥಿಕ ನಿರ್ವಹಣೆಯಿಲ್ಲದೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಮೂರು ಸಾವಿರ ಕೋಟಿ ರೂಪಾಯಿ ಸಾಲದಲ್ಲಿದೆ~ ಎಂದು ಬಿಬಿಎಂಪಿ ಜೆಡಿಎಸ್ ಪಕ್ಷದ ನಾಯಕ ಟಿ.ತಿಮ್ಮೇಗೌಡ ಹೇಳಿದರು.ನಗರದಲ್ಲಿ ಬುಧವಾರ ನಡೆದ ಪತ್ರಿಕೋಗೋಷ್ಠಿಯಲ್ಲಿ ಅವರು ಮಾತನಾಡಿದರು. `ಪಾಲಿಕೆಗೆ ಪ್ರತಿ ತಿಂಗಳು 200 ಕೋಟಿ ರೂಪಾಯಿ ಖರ್ಚು ಬರುತ್ತದೆ. ಇದರಲ್ಲಿ ವಿವಿಧ ಸಾಲಗಳ ಬಡ್ಡಿಗೆ 40 ಕೋಟಿ, ಪಾಲಿಕೆಯ ಸಿಬ್ಬಂದಿಗಳ ಸಂಬಳಕ್ಕೆ 37 ಕೋಟಿ, ತ್ಯಾಜ್ಯ ನಿರ್ವಹಣೆಗೆ 30 ಕೋಟಿ, ಆಡಳಿತದ ಖರ್ಚು 20 ಕೋಟಿ ಮತ್ತು ಇತರೆ ನಿರ್ವಹಣಾ ಖರ್ಚು 20 ಕೋಟಿ ರೂಪಾಯಿಗಳಷ್ಟಿದೆ. ಆದರೆ, ಸದ್ಯ ಪಾಲಿಕೆಯ ತಿಂಗಳ ಸರಾಸರಿ ಆದಾಯ ಕೇವಲ 40 ಕೋಟಿ ರೂಪಾಯಿಗಳು ಮಾತ್ರ. ಇದರಿಂದ ಪಾಲಿಕೆಯ ಆದಾಯ ಹಾಗೂ ಖರ್ಚಿನಲ್ಲಿ ಏರುಪೇರು ಉಂಟಾಗಿದೆ~ ಎಂದು ಅವರು ಹೇಳಿದರು.`ಹಣದ ಕೊರತೆಯಿಂದಾಗಿ ಬಿಬಿಎಂಪಿ ಗುತ್ತಿಗೆದಾರರಿಗೆ ನೀಡಬೇಕಾದ ಬಾಕಿಯನ್ನು ನೀಡಿಲ್ಲ. ಹೀಗಾಗಿ ಗುತ್ತಿಗೆದಾರರು ಎಲ್ಲ ರೀತಿಯ ಕಾಮಗಾರಿಗಳನ್ನು ಸ್ಥಗಿತಗೊಳಿಸಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ.

 

ಸರ್ಕಾರ ನೀಡಬೇಕಾಗಿರುವ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿಸಲು ಪಾಲಿಕೆಯ ಆಡಳಿತ ಪಕ್ಷ ಸೋತಿದೆ. ಪಾಲಿಕೆಗೆ ನೀಡುವುದಾಗಿ ಹೇಳಿದ್ದ 2,250 ಕೋಟಿ ರೂಪಾಯಿ ಅನುದಾನವನ್ನು ರಾಜ್ಯ ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು~ ಎಂದು ಅವರು ಒತ್ತಾಯಿಸಿದರು.`ನಗರದ ತ್ಯಾಜ್ಯವನ್ನು ವಾರ್ಡ್ ಮಟ್ಟದಲ್ಲೇ ವಿಂಗಡಣೆ ಮಾಡಿದರೆ ಕಸದ ಸಮಸ್ಯೆ ಶೇ 60ರಷ್ಟು ಕಡಿಮೆಯಾಗಲಿದೆ. ಆದರೆ, ಪಾಲಿಕೆ ಈ ಕಾರ್ಯವನ್ನು ಸಮರ್ಪಕವಾಗಿ ಜಾರಿಗೆ ತರಲು ವಿಫಲವಾಗಿದೆ. ಆಡಳಿತ ಪಕ್ಷದ ಸದಸ್ಯರಿಗೆ ನಗರದ ಬಗ್ಗೆ ಕಾಳಜಿ ಇಲ್ಲ. ಪಾಲಿಕೆಯ ಅಧಿಕಾರಿಗಳಿಗೆ ತಮ್ಮ ಕೆಲಸದಲ್ಲಿ ಬದ್ಧತೆ ಇಲ್ಲ. ಹೀಗಾಗಿ ನಗರದ ಸಮಸ್ಯೆಗಳು ಹೆಚ್ಚಾಗುತ್ತಲೇ ಇವೆ~ ಎಂದು ಅವರು ದೂರಿದರು.`ಪಾಲಿಕೆಯ ತೆರಿಗೆ ಪಾವತಿದಾರರಿಂದ ಮೇ ತಿಂಗಳಿಂದ ವಸೂಲಿಯಾದ ಮುಂಗಡ ತೆರಿಗೆ ಹಣ 644 ಕೋಟಿ ರೂಪಾಯಿ ಸದ್ಯ ಪಾಲಿಕೆಯಲ್ಲಿದೆ. ಈ ಹಣದ ಹೊರತು ಪಾಲಿಕೆಗೆ ಬೇರೆ ಆದಾಯ ಸದ್ಯಕ್ಕಿಲ್ಲ. ಈ ಹಣದಿಂದ ಪಾಲಿಕೆಯ ನಿರ್ವಹಣೆ ಮುಂದಿನ ದಿನಗಳಲ್ಲಿ ಕಷ್ಟವಾಗಲಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಮುಂದೆ ಪಾಲಿಕೆ ಇನ್ನಷ್ಟು ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ~ ಎಂದರು.`ನಗರದ ಮಾಲ್‌ಗಳು, ಕಲ್ಯಾಣ ಮಂಟಪಗಳು ಹಾಗೂ ಅಪಾರ್ಟ್‌ಮೆಂಟ್‌ಗಳು ಕೋಟ್ಯಂತರ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿವೆ. ಕೂಡಲೇ ಪಾಲಿಕೆಯ ಅಧಿಕಾರಿಗಳು ಈ ಬಾಕಿ ವಸೂಲಿಗೆ ಮುಂದಾಗಬೇಕು~ ಎಂದು ಅವರು ಒತ್ತಾಯಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry