3 ತಿಂಗಳ ಬಳಿಕ ಅಂತ್ಯಕ್ರಿಯೆ

7

3 ತಿಂಗಳ ಬಳಿಕ ಅಂತ್ಯಕ್ರಿಯೆ

Published:
Updated:

ಬೀಜಿಂಗ್ (ಎಎಫ್‌ಪಿ): ಸೋಮವಾರ ಇಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ ಕಾಂಬೋಡಿಯಾದ ಮಾಜಿ ದೊರೆ ನರೊದಮ್ ಸಿಹನೌಕ್ ಅವರಿಗೆ ಅಂತಿಮ ನಮನ ಸಲ್ಲಿಸುವ ಸಲುವಾಗಿ ಬುಧವಾರ ಸಾವಿರಾರು ಜನರು ಕಾಂಬೋಡಿಯಾದ ರಾಜಧಾನಿಯ ಬೀದಿಗಳಲ್ಲಿ ನೆರೆದಿದ್ದರು. ಕ್ಯಾನ್ಸರ್, ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ  89ರ ಹರೆಯದ ನರೊದಮ್ ಬೀಜಿಂಗ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಪಾರ್ಥಿವ ಶರೀರವನ್ನು ಬಿಳಿ ಹೂಗಳಿಂದ ಅಲಂಕರಿಸಿದ ವಿಶೇಷ ವಿಮಾನದಲ್ಲಿ ಬೀಜಿಂಗ್‌ನಿಂದ ಕಾಂಬೋಡಿಯಾದ ರಾಜಧಾನಿಗೆ ತರಲಾಯಿತು.ಸಿಹನೌಕ್ ಅವರ ಪಾರ್ಥಿವ ಶರೀರವನ್ನು ಮೂರು ತಿಂಗಳುಗಳ ಕಾಲ ಅರಮನೆಯಲ್ಲಿಟ್ಟ ಬಳಿಕ  ಅಂತ್ಯಸಂಸ್ಕಾರ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry