3 ದಿನಗಳ ಸತತ ಏರಿಕೆ; ನಂತರ ಅಲ್ಪಇಳಿಕೆ

7
ಬಿಎಸ್‌ಇ ಸೂಚ್ಯಂಕ 62.70 ಅಂಶ ನಷ್ಟ

3 ದಿನಗಳ ಸತತ ಏರಿಕೆ; ನಂತರ ಅಲ್ಪಇಳಿಕೆ

Published:
Updated:

ಮುಂಬೈ(ಪಿಟಿಐ): ಸತತ 3 ದಿನಗಳ ಕಾಲ ಏರಿಕೆ ದಾಖಲಿಸಿದ್ದ ಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್‌ಇ)ದ ಸಂವೇದಿ ಸೂಚ್ಯಂಕ(ಸೆನ್ಸೆಕ್ಸ್) ಶುಕ್ರವಾರ 63 ಅಂಶಗಳಷ್ಟು ಅಲ್ಪ ಕುಸಿತ ಕಂಡಿತು.ಮಂಗಳವಾರದಿಂದ ಗುರುವಾರದವರೆಗೂ ಏರುಮುಖವಾಗಿಯೇ ಇದ್ದ ಸೂಚ್ಯಂಕ, ಮೂರು ದಿನಗಳಲ್ಲಿ ಒಟ್ಟು 182 ಅಂಶಗಳ ಹೆಚ್ಚಳ ಕಂಡಿದ್ದಿತು. ಆ ಮೂಲಕ ಹೂಡಿಕೆದಾರರಿಗೆ ಸಾಕಷ್ಟು ಲಾಭವನ್ನೂ ತಂದುಕೊಟ್ಟಿದ್ದಿತು.ಬಹುಬ್ರಾಂಡ್ ಮಾರಾಟ ವಲಯದಲ್ಲಿ ವಿದೇಶಿ ನೇರ ಹೂಡಿಕೆ(ಎಫ್‌ಡಿಐ)ಗೆ ಅವಕಾಶ ನೀಡುವ ವಿಚಾರಕ್ಕೆ ರಾಜ್ಯಸಭೆಯಲ್ಲಿ ಜಯ ದೊರೆತ ಸುದ್ದಿ ಹೊರಬೀಳುತ್ತಿದ್ದಂತೆಯೇ ಪರಿಸ್ಥಿತಿಯ ಅನುಕೂಲ ಪಡೆದುಕೊಳ್ಳಲು ಹೂಡಿಕೆದಾರರು ಮುಂದಾದರು. ಮೂರು ದಿನಗಳಿಂದ ಮೌಲ್ಯ ಹೆಚ್ಚಿಸಿಕೊಂಡಿದ್ದ ಷೇರುಗಳನ್ನು ಮಾರಿ ಲಾಭ ಗಳಿಸುವ ಉಮೇದಿಗೆ ಇಳಿದರು. ಇದು ಖರೀದಿಗಿಂತಲೂ ಮಾರಾಟ ವಹಿವಾಟು ಹೆಚ್ಚುವಂತೆ ಮಾಡಿದ್ದರಿಂದ ಸೂಚ್ಯಂಕ ಇಳಿಮುಖವಾಯಿತು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.ಗುರುವಾರ 19,486.80 ಅಂಶಗಳಲ್ಲಿ ಕೊನೆಗೊಂಡಿದ್ದ ಸೂಚ್ಯಂಕ, ಶುಕ್ರವಾರ 62.70 ಅಂಶ ನಷ್ಟದೊಂದಿಗೆ 19,424.10ರಲ್ಲಿ ಕೊನೆಗೊಂಡಿತು.

ಎನ್‌ಎಸ್‌ಇ: ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ(ಎನ್‌ಎಸ್‌ಇ)ದಲ್ಲಿನ `ನಿಫ್ಟಿ'ಯೂ 23.50 ಅಂಶ ಕಳೆದುಕೊಂಡು 5907.40ರಲ್ಲಿ ಅಂತ್ಯ ಕಂಡಿತು.ಮಾರುತಿ ಷೇರು ಏರಿಕೆ: ಈ ಮಧ್ಯೆ `ಬಿಎಸ್‌ಇ'ಯಲ್ಲಿ ಮಾರುತಿ ಸುಜುಕಿ ಇಂಡಿಯ ಕಂಪೆನಿಯ ಷೇರುಗಳು ಶುಕ್ರವಾರ ಹೂಡಿಕೆದಾರರಿಗೆ ಭಾರಿ ಲಾಭ ತಂದುಕೊಟ್ಟವು. ಮಾರುತಿ ತನ್ನ ಎಲ್ಲ ಮಾದರಿ ಕಾರುಗಳ ಬೆಲೆಯನ್ನೂ ಜನವರಿಯಿಂದ ಗರಿಷ್ಠ ರೂ. 20,000ದವರೆಗೂ ಹೆಚ್ಚಿಸುವುದಾಗಿ ಹೇಳಿದ ಪರಿಣಾಮ ಕಂಪೆನಿಯ ಷೇರುಗಳ ಮೌಲ್ಯ ರೂ. 1533.75ಕ್ಕೆ ( ಶೇ 3.54ರಷ್ಟು) ಹೆಚ್ಚುವುದರೊಂದಿಗೆ ಕಳೆದ 52 ವಾರಗಳಲ್ಲಿಯೇ ಗರಿಷ್ಠ ಮಟ್ಟಕ್ಕೇರಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry