3 ಮಕ್ಕಳೊಂದಿಗೆ ಮಹಿಳೆ ಆತ್ಮಹತ್ಯೆ

7

3 ಮಕ್ಕಳೊಂದಿಗೆ ಮಹಿಳೆ ಆತ್ಮಹತ್ಯೆ

Published:
Updated:

 


ಸಸಾರಮ್ (ಪಿಟಿಐ): ಬಿಹಾರದ ರೊಹತಾಸ್ ಜಿಲ್ಲೆಯಲ್ಲಿ ಮೂವರು ಹೆಣ್ಣು ಮಕ್ಕಳೊಂದಿಗೆ ರೈಲಿಗೆ ಸಿಲುಕಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದಮ್‌ಪುರ್‌ನ ಕರ್‌ಬಂದಿಯಾ ಜಿಲ್ಲಾ ರೈಲ್ವೆ ನಿಲ್ದಾಣದಲ್ಲಿ ಘಟನೆ ನಡೆದಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ. 

 

 ಮೃತಪಟ್ಟವರು ಸೊನಮುನಿ ದೇವಿ (30), ಅಂಜಲಿ (5), ಚಂಚಲಿ (3) ಮತ್ತು ಒಂದು ವರ್ಷದ ಮಗು. ಇವರು ಅದಮ್‌ಪುರ ಹಳ್ಳಿಯವರು ಎಂದು ಗುರುತಿಸಲಾಗಿದೆ.

 

ಕಳೆದ ವರ್ಷ ಗಂಡನನ್ನು ಕಳೆದುಕೊಂಡಿದ್ದ ಮಹಿಳೆ ಹಣಕಾಸಿನ ತೊಂದರೆಯಿಂದ ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ಮುಂದಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry