ಶುಕ್ರವಾರ, ನವೆಂಬರ್ 22, 2019
21 °C
ಅಮೆರಿಕದ `ಮಿನಿಮೆಲ್ಟ್ಸ್ ಐಸ್‌ಕ್ರೀಂ' ಗುರಿ

3 ವರ್ಷಕ್ಕೆ ರೂ.300ಕೋಟಿ ವಹಿವಾಟು

Published:
Updated:

ಬೆಂಗಳೂರು: ದೇಶದ ಐಸ್‌ಕ್ರೀಂ ತಯಾರಿಕೆಯ ಸಂಘಟಿತ ಮಾರುಕಟ್ಟೆ ರೂ.2500 ಕೋಟಿ ಮೌಲ್ಯದ್ದಾಗಿದ್ದು, ಮುಂದಿನ ಮೂರು ವರ್ಷಗಳಲ್ಲಿ ಶೇ 12ರಷ್ಟು ಮಾರುಕಟ್ಟೆ ಪಾಲು ಪಡೆದುಕೊಳ್ಳುವ ಗುರಿ ಎದೆ ಎಂದು `ಹನಿಬೀ ಅಮ್ಯೂಸ್‌ಮೆಂಟ್ ಪ್ರೈ.ಲಿ.' ವ್ಯವಸ್ಥಾಪಕ ನಿರ್ದೇಶಕ ಶೋಯಬ್ ಸಲೀಂ ಹೇಳಿದರು.ಅಮೆರಿಕ ಕನೆಕ್ಟಿಕಟ್‌ನ `ಮಿನಿ ಮೆಲ್ಟ್ಸ್' ಐಸ್‌ಕ್ರೀಂನ ಭಾರತ ಫ್ರಾಂಚೈಸಿಗೆ ಮಂಗಳವಾರ ಚಾಲನೆ ನೀಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ವರ್ಷ ರೂ.100 ಕೋಟಿ ವಹಿವಾಟು ನಡೆಸಲಾಗುವುದು. ಮೂರು ವರ್ಷದಲ್ಲಿ ರೂ.300 ಕೋಟಿಗೆ ಹೆಚ್ಚಿಸಿಕೊಳ್ಳುವ ವಿಶ್ವಾಸವಿದೆ ಎಂದರು.ಐಸ್‌ಕ್ರೀಂ 50 ಸ್ವಾದಗಳಲ್ಲಿದ್ದು, ಸದ್ಯ 9 ಮಾದರಿ ಪರಿಚಯಿಸಲಾಗುತ್ತಿದೆ. ಬೆಂಗಳೂರಿನಲ್ಲಿ 20 ಮಾರಾಟ ಕೇಂದ್ರ ಆರಂಭ. ನಂತರ ಮೈಸೂರು, ಮಂಗಳೂರು, ತುಮಕೂರಿಗೂ ವಿಸ್ತರಿಸುವೆವು. ಮುಂದೆ ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ದೇಶದಾದ್ಯಂತ 1200 ಕೇಂದ್ರ ತೆರೆಯಲಾಗುವುದು ಎಂದರು.`ಮಿನಿ ಮೆಲ್ಟ್ಸ್' 9 ದೇಶಗಳಲ್ಲಿ ಐಸ್ ಕ್ರೀಂ ತಯಾರಿಸಿ 24 ದೇಶಗಳಲ್ಲಿ ಮಾರುತ್ತಿದೆ. ಬೆಂಗಳೂರಿನದು 10ನೇ ಘಟಕ. ರೂ.18.90 ಕೋಟಿ ವೆಚ್ಚದ, 10 ಸಾವಿರ ಚದರಡಿಯ ಈ ಘಟಕದಲ್ಲಿ ಮೈನಸ್ 195 ಡಿಗ್ರಿ ತಾಪಮಾನದಲ್ಲಿ ಐಸ್ ಕ್ರೀಂ ತಯಾರಾಗುತ್ತದೆ. ಅಗತ್ಯ ಶೀತಲೀಕರಣ ಯಂತ್ರಗಳನ್ನು ತೈವಾನ್‌ನಿಂದ ಆಮದು ಮಾಡಿಕೊಳ್ಳಲಾಗಿದೆ. 300 ಮಂದಿಗೆ ಉದ್ಯೋಗ ನೀಡಲಾಗಿದೆ ಎಂದು `ಒಎಸ್‌ಆರ್' ಸಮೂಹದ ಅಧ್ಯಕ್ಷ ಸಯ್ಯದ್ ಸಲೀಂ ವಿವರಿಸಿದರು.

ಪ್ರತಿಕ್ರಿಯಿಸಿ (+)