ಗುರುವಾರ , ಜೂನ್ 24, 2021
29 °C

30ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು, ಜನತೆಯಲ್ಲಿ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸವಣೂರ: ಹೊಸ ವರ್ಷದ ಆರಂಭದಲ್ಲಿಯೇ ಸವಣೂರಿನ ಜನತೆಯನ್ನು ಬೆನ್ನತ್ತಿ ಕಾಡಿದ ವಾಂತಿಭೇದಿ ಪ್ರಕರಣ ಮರುಕಳಿಸಿದೆ. 30ಕ್ಕೂ ಹೆಚ್ಚು ರೋಗಿಗಳು ಆಸ್ಪತ್ರೆಗೆ ದಾಖಲಾಗುವು ದರೊಂದಿಗೆ ಆಡಳಿತ ವ್ಯವಸ್ಥೆಯಲ್ಲಿ ಚಡಪಡಿಕೆ ಆರಂಭವಾಗಿದೆ.ಮಂಗಳವಾರ ರಾತ್ರಿಯಿಂದ ವಾಂತಿ ಭೇದಿ ಪ್ರಕರಣ ತೀವ್ರತೆ ಪಡೆದುಕೊಂಡಿದ್ದು, ಕಲುಷಿತ ವಾದ ನೀರು ಹಾಗೂ ಆಹಾರ ಸೇವನೆಯೇ ಇದಕ್ಕೆ ಕಾರಣ ಎಂದು ಆರೋಗ್ಯ ಇಲಾಖೆ ದೃಢಪಡಿಸಿದೆ. ರೋಗಿಗಳಿಗೆ ಎಲ್ಲ ಔಷಧಿ ಉಪಚಾರ ನೀಡಲಾಗಿದೆ. ಚಿಕಿತ್ಸೆಗೆ ರೋಗಿಗಳು ಸ್ಪಂದಿಸುತ್ತಿದ್ದಾರೆ. ಯಾವುದೇ ತುರ್ತು ಪ್ರಕರಣ ಕಂಡುಬಂದಿಲ್ಲ.ಹೆಚ್ಚುವರಿ ಸಿಬ್ಬಂದಿ, ಔಷಧಿಗಳು ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಸವಣೂರ ಆಸ್ಪತ್ರೆಗೆ ಕಲ್ಪಿಸಲಾಗಿದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಬಸವರಾಜ ಸಜ್ಜನ್ ತಿಳಿಸಿದ್ದಾರೆ.ವಾಂತಿ-ಭೇದಿ ಪ್ರಕರಣ ಪತ್ತೆಯಾಗಿರುವ ನಗರದ ಸಿಂಪಿಗಲ್ಲಿ, ಲಾಲಶಾಕಟ್ಟಾಲ, ಲಷ್ಕರ್‌ಬಜಾರ್, ರಾಜೀವಗಾಂಧಿ ನಗರದ ಮೊದಲಾದ ಬಡಾವಣೆಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸುವಂತೆ ಪುರಸಭೆಗೆ ಸೂಚಿಸಲಾಗಿದೆ.ಕಳೆದ ಜನವರಿ ತಿಂಗಳಿನಿಂದಲೂ ಪ್ರತಿ ಬಡಾವಣೆ ಗಳಲ್ಲಿ ಆರೋಗ್ಯ ಸಂರಕ್ಷಣೆ, ಸ್ವಚ್ಛತೆಯ ಬಗ್ಗೆ ಜನಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ನಿರಂತರವಾಗಿ ಕೈಗೊಳ್ಳಲಾಗುತ್ತಿದೆ ಎಂದು ತಾಲ್ಲೂಕು ಆರೋಗ್ಯ ಆಡಳಿತಾಧಿಕಾರಿ ಡಾ. ಚಂದ್ರಕಲಾ ಜೆ. ತಿಳಿಸಿದ್ದಾರೆ.ಅತ್ಯಂತ ಅನೈರ್ಮಲ್ಯತೆ ಹಾಗೂ ಸ್ವಚ್ಛತೆಯ ಬಗ್ಗೆ ನಿರ್ಲಕ್ಷ್ಯತೆಯಿಂದ ಈ ರೋಗ ಮರುಕಳಿ ಸಿದೆ. ಅಡಳಿತ ವ್ಯವಸ್ಥೆಯ ಪ್ರಯತ್ನದೊಂದಿಗೆ ಜನರ ಸಹಕಾರವೂ ಲಭ್ಯವಾದರೆ ಮಾತ್ರ ಈ ರೋಗವನ್ನು ನಿಯಂತ್ರಿಸಬಹುದಾಗಿದೆ ಎಂದು  ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸುಮಾ ತಿಳಿಸಿದ್ದಾರೆ.ಬಿಸಿಯಾದ ಸ್ವಚ್ಛ ಆಹಾರ ಸೇವಿಸುವುದು, ಕುದಿಸಿ ಆರಿಸಿದ, ಶುದ್ಧೀಕರಿಸಿದ ನೀರನ್ನು ಸೇವಿಸುವುದು, ಅನಾರೋಗ್ಯದ ಸಂದರ್ಭದಲ್ಲಿ ಶಾಖಾಹಾರ ಬಳಸುವುದು ಅನಿವಾರ್ಯ ಎಂದು ತಿಳಿಸಿದ್ದಾರೆ.ಕಳೆದ 5 ತಿಂಗಳುಗಳಿಂದ ಪ್ರತಿ 15 ದಿನಗಳಿಗೆ ಒಂದು ಬಾರಿ ಸವಣೂರಿಗೆ ಪೂರೈಕೆಯಾಗುವ ನೀರಿನ ಪರೀಕ್ಷೆಯನ್ನು ಮಾಡಲಾಗುತ್ತಿದೆ. ಪ್ರತಿ ಸಲವೂ ಪರೀಕ್ಷಿಸಲಾದ ನೀರು ಕುಡಿಯಲು ಅಯೋಗ್ಯವಾಗಿದೆ ಎಂಬ ಫಲಿತಾಂಶ ಲಭ್ಯವಾಗಿದೆ. ಈ ಬಗ್ಗೆ ಪುರಸಭೆಗೆ ಸೂಚನೆಯನ್ನೂ ನೀಡಲಾಗಿದೆ.  ಜಲಾಗಾರದಲ್ಲಿ ಸಂಗ್ರಹಗೊಳ್ಳುವ ನೀರನ್ನು ಸರಿಯಾಗಿ ಕ್ಲೋರಿ ನೇಷನ್ ಮಾಡಿ ಪೂರೈಸಬೇಕು. ಕಾಲುವೆಯ ಕೊಳಚೆ ನೀರಿನ ಮಿಶ್ರಣವಾಗದಂತೆ ಜಾಗ್ರತೆ ವಹಿಸಬೇಕು ಎಂಬ ಸಲಹೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಸವಣೂರಿನ ಕೆಲವು ಬಡಾವಣೆಗಳಿಗೆ ಹುರಳಿ ಕೊಪ್ಪಿ ಮಾರ್ಗದ ಕೊಳವೆ ಭಾವಿಗಳಿಂದ ನೀರು ಪೂರೈಕೆಯಾಗುತ್ತದೆ. ಈ ಬಡಾವಣೆಗಳಲ್ಲಿ ಅನಾರೋಗ್ಯದ ಸಮಸ್ಯೆ ಕಂಡುಬಂದಿಲ್ಲ. ಆದರೆ, ಶಿಗ್ಗಾಂವಿ, ನಾಗನೂರ ಕೆರೆ ನೀರು ಪೂರೈಕೆ ಯಾಗುವ ಬಡಾವಣೆಗಳಲ್ಲಿ ಮಾತ್ರ ಈ ಸಮಸ್ಯೆ ಇದೆ.ಅದರಲ್ಲಿಯೂ ಮುಖ್ಯವಾಗಿ ಬಡ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿರುವ ಬಡಾವಣೆ ಗಳಿಗೆ ಭೇದಿ ಪ್ರಕರಣ ವ್ಯಾಪಿಸುತ್ತಿದೆ ಎಂದು  ಆರೋಗ್ಯ ಸಹಾಯಕರು ತಿಳಿಸಿದ್ದಾರೆ.ಈ ಸಮಸ್ಯೆಗೆ ಶಾಶ್ವತವಾದ ಪರಿಹಾರ ಕಂಡುಕೊಳ್ಳುವ ಬಗ್ಗೆ ಆರೋಗ್ಯ ಇಲಾಖೆಯ ಸಲಹೆಗಳಿಗೆ ಪುರಸಭೆಯ ಸ್ಪಂದನೆ ಇದೆಯೇ ಎಂಬ ಬಗ್ಗೆ ಸ್ಪಷ್ಟ ವಾಗಿ ಉತ್ತರಿಸಲು ನಿರಾಕರಿಸಿದ ಇಲಾಖಾ ಅಧಿಕಾರಿಗಳು, ಇದನ್ನು ತಡೆಗಟ್ಟುವಲ್ಲಿ ಜನರ ಸಹಕಾರ ಅವಶ್ಯಕ ಎಂದು ತಿಳಿಸಿದ್ದಾರೆ.ನಗರಕ್ಕೆ ಪೂರೈಕೆಯಾಗುವ ನೀರು ಅಶುದ್ಧವಾಗಿದೆ ಎಂಬ ವೈಜ್ಞಾನಿಕ ವರದಿ ಗಳಿದ್ದರೂ, ಅದೇ ನೀರನ್ನು ಪೂರೈಸಲಾ ಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ದ್ದಾರೆ. ಟ್ಯಾಂಕರ್ ಮೂಲಕ ಪೂರ್ಣ ಪ್ರಮಾಣದಲ್ಲಿ ನೀರು ಪೂರೈಕೆ ಅಸಾಧ್ಯ ಎಂಬ ಬಗ್ಗೆ ಸಮ್ಮತಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.