30ರಂದು ಕನಕದಾಸರ 525ನೇ ಜಯಂತ್ಯುತ್ಸವ

6

30ರಂದು ಕನಕದಾಸರ 525ನೇ ಜಯಂತ್ಯುತ್ಸವ

Published:
Updated:

ಬೆಂಗಳೂರು: ಕರ್ನಾಟಕ ಕುರುಬರ ಜಾಗೃತಿ ಸಮಿತಿ ಮತ್ತು ರಾಜ್ಯ ನೌಕರರ ಮತ್ತು ಕಾರ್ಮಿಕರ ಕೇಂದ್ರ ಕನಕ ಸಮಿತಿ ಆಶ್ರಯದಲ್ಲಿ ಇದೇ 30ರಂದು ವಿಜಯನಗರದ ನ್ಯೂ ಪಬ್ಲಿಕ್ ಶಾಲಾ ಮೈದಾನದಲ್ಲಿ ಕನಕದಾಸರ 525ನೇ ಜಯಂತ್ಯುತ್ಸವವನ್ನು ಹಮ್ಮಿಕೊಳ್ಳಲಾಗಿದೆ.ಕಾರ್ಯಕ್ರಮ ಮುನ್ನ ಮೈಸೂರು ರಸ್ತೆಯ ಬೀರೇಶ್ವರ ದೇವಸ್ಥಾನದಿಂದ ವಿಜಯನಗರದ ಮೈದಾನದವರೆಗೆ ಸಂತ ಕನಕದಾಸರ ಭಾವಚಿತ್ರ ಮೆರವಣಿಗೆ ಮಾಡಲಾಗುವುದು ಎಂದು ಸಮಿತಿ ಕಾರ್ಯಾಧ್ಯಕ್ಷ ಟಿ.ಬಿ.ಬಳಗಾವಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಸಂಜೆ 5ಕ್ಕೆ ಕಾರ್ಯಕ್ರಮ ಉದ್ಘಾಟಿಸುವರು. ಉಪಮುಖ್ಯಮಂತ್ರಿಗಳಾದ ಕೆ.ಎಸ್.ಈಶ್ವರಪ್ಪ ಮತ್ತು ಆರ್.ಅಶೋಕ, ಸಚಿವರಾದ ವಿ.ಸೋಮಣ್ಣ, ವರ್ತೂರು ಪ್ರಕಾಶ್ ಅತಿಥಿಗಳಾಗಿ ಭಾಗವಹಿಸುವರು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry