ಭಾನುವಾರ, ಮೇ 9, 2021
19 °C

30ರಂದು ನ್ಯಾಯಕ್ಕಾಗಿ ನಾವು ಸಂಘಟನೆ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಸ್ವಾಯತ್ತ ವಿಶ್ವವಿದ್ಯಾಲಯಗಳ ಪರೀಕ್ಷೆ ಮತ್ತು ಮೌಲ್ಯಮಾಪನಗಳಲ್ಲಿ ಆಗುವ ಭಾರಿ ವಂಚನೆಯನ್ನು ವಿರೋಧಿಸಿ ಇದೇ 30 ರಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಬೆಂಗಳೂರು ಕೇಂದ್ರದ ಮುಂದೆ ಧರಣಿ ನಡೆಸಲಾಗುವುದು~ ಎಂದು `ನ್ಯಾಯಕ್ಕಾಗಿ ನಾವು~ ಸಂಘಟನೆಯ ಅಧ್ಯಕ್ಷ ಇಂದೂಧರ ಹೊನ್ನಾಪುರ ಹೇಳಿದರು.ಶನಿವಾರ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, `ಕರ್ನಾಟಕದಲ್ಲಿ ವೃತ್ತಿ ಶಿಕ್ಷಣ ಸಂಸ್ಥೆಗಳು ಮಿತಿ ಮೀರಿದ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿವೆ. ಮೆಡಿಕಲ್, ಎಂಜಿನಿಯರಿಂಗ್, ಫಾರ್ಮಸಿ, ನರ್ಸಿಂಗ್ ಕಾಲೇಜುಗಳು ಖಾಸಗಿ ವ್ಯಕ್ತಿಗಳ ಹಾಗೂ ಸಂಸ್ಥೆಗಳ ಒಡೆತನದಲ್ಲಿ ಇರುವವರೆಗೂ ಇಂತಹ ಅಕ್ರಮಗಳು ನಡೆಯುತ್ತಲೇ ಇರುತ್ತವೆ. ಮೊದಲು ಖಾಸಗಿ ವ್ಯಕ್ತಿಗಳ ಹಿಡಿತದಿಂದ ಶಿಕ್ಷಣ ಮುಕ್ತವಾಗಬೇಕು~ ಎಂದು ಅವರು ನುಡಿದರು.`ಸ್ವಾಯತ್ತ ವಿಶ್ವವಿದ್ಯಾಲಯಗಳ ಪರಿಕಲ್ಪನೆ ಕಳೆದ ಎಂಟು ಹತ್ತು ವರ್ಷಗಳದ್ದು. ಇಲ್ಲಿ ಯಾವುದೇ ಬಗೆಯ ಸರ್ಕಾರಿ ಮೇಲುಸ್ತುವಾರಿಗೆ ಅವಕಾಶವಿಲ್ಲದ ಕಾರಣ ಅಕ್ರಮಗಳು ಹೆಚ್ಚಾಗಿವೆ. ಭಾರತದಲ್ಲಿ ಸುಮಾರು 44 ಸ್ವಾಯತ್ತ ವಿಶ್ವವಿದ್ಯಾಲಯಗಳು ಕಪ್ಪು ಪಟ್ಟಿಗೆ ಸೇರಿದ್ದು, ಇವುಗಳಲ್ಲಿ ಕರ್ನಾಟಕದ ಹತ್ತು ಸ್ವಾಯತ್ತ ವಿಶ್ವವಿದ್ಯಾಲಯಗಳಿವೆೆ~ ಎಂದು ಅವರು   ತಿಳಿಸಿದರು.ಸಂಘಟನೆಯ ಕಾರ್ಯಾಧ್ಯಕ್ಷ ಅಗ್ನಿ ಶ್ರೀಧರ, ಪ್ರಜಾ ವಿಮೋಚನಾ ಚಳುವಳಿಯ ರಾಜ್ಯ ಘಟಕದ ಅಧ್ಯಕ್ಷ ಪಟಾಪಟ್ ನಾಗರಾಜ್, ಎಂ.ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.