ಬುಧವಾರ, ಮೇ 12, 2021
18 °C

30 ಕಿಲೊ ಅಕ್ಕಿ ಜುಲೈನಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಕಿಲೊಗೆ ಒಂದು ರೂಪಾಯಿದರದಲ್ಲಿ ತಿಂಗಳಿಗೆ 30 ಕಿಲೊ ಅಕ್ಕಿ  ನೀಡುವ  ಯೋಜನೆ ಜುಲೈ ತಿಂಗಳಿಂದ ಜಾರಿಗೆ ಬರುವುದು ಖಚಿತ. ಈ ವಿಷಯದಲ್ಲಿ ಅನುಮಾನ ಬೇಡ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದರು.ರಾಜ್ಯದಲ್ಲಿ 87 ಲಕ್ಷ ಬಿ.ಪಿ.ಎಲ್ ಮತ್ತು 11 ಲಕ್ಷ ಅಂತ್ಯೋದಯ ಪಡಿತರ ಚೀಟಿದಾರರಿದ್ದಾರೆ. ಈ ಕುಟುಂಬಗಳಿಗೆ ತಿಂಗಳಿಗೆ 30 ಕೆ.ಜಿ ಅಕ್ಕಿ ನೀಡಲಾಗುವುದು. ಇದುವರೆಗೂ ಇದ್ದ ಯೂನಿಟ್ ಪದ್ಧತಿಯನ್ನು ರದ್ದುಪಡಿಸಲಾಗುವುದು ಎಂದು ಅವರು ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯ ಕೊನೆಯಲ್ಲಿ ಉತ್ತರಿಸುತ್ತ ಹೇಳಿದರು.ಕಡಿಮೆ ದರದಲ್ಲಿ ಅಕ್ಕಿ ನೀಡುವ ಯೋಜನೆಯನ್ನು ತರಾತುರಿಯಲ್ಲಿ ಜಾರಿ ಮಾಡಿಲ್ಲ. ಅದರ ಸಾಧಕ- ಬಾಧಕಗಳ ಬಗ್ಗೆ ಅಧ್ಯಯನ ಮಾಡಿಯೇ ಈ ತೀರ್ಮಾನಕ್ಕೆ ಬಂದಿರುವುದು ಎಂದರು. ಅಕ್ಕಿ ಸಂಗ್ರಹ ಮಾಡಿಕೊಳ್ಳಲು ಸಾಧ್ಯವಾಗದ ಕಾರಣ ಜೂನ್ ತಿಂಗಳಿಂದ ಈ ಕಾರ್ಯಕ್ರಮ ಆರಂಭಿಸಲು ಸಾಧ್ಯ ಆಗಲಿಲ್ಲ. ಜುಲೈ ತಿಂಗಳಿಂದ ಅಕ್ಕಿ ವಿತರಣೆ ಆಗಲಿದ್ದು, ಸಿದ್ಧತೆ ನಡೆದಿದೆ. ಎಷ್ಟೇ ಹಣ ಖರ್ಚಾದರೂ ಐದು ವರ್ಷಗಳ ಕಾಲ ಇದು ಜಾರಿಯಲ್ಲಿರುತ್ತದೆ ಎಂದೂ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.