ಶುಕ್ರವಾರ, ಜೂನ್ 18, 2021
21 °C

30 ವರ್ಷದ ನಂತರ ಯೋಧನ ಶವಸಂಸ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಸ್ಕೊ (ಐಎಎನ್‌ಎಸ್/ಆರ್‌ಐಎ ನೋವೊಸ್ತಿ):  ಸುಮಾರು 30 ವರ್ಷಗಳ ಹಿಂದೆ ಆಪ್ಘಾನಿಸ್ತಾನದಲ್ಲಿ ಮಡಿದಿದ್ದ ಸೋವಿಯತ್ ಸೈನಿಕನ ಶವವನ್ನು ಆತನ ತಾಯ್ನಾಡಾದ ಕಜಕಿಸ್ತಾನದಲ್ಲಿ ಮತ್ತೆ ಸಂಸ್ಕಾರ ಮಾಡಲಾಗುತ್ತದೆ.

 

ಅಲೆಕ್ಸಿ ಜುಯೆವ್ 1982ರಲ್ಲಿ ಆಪ್ಘಾನಿಸ್ತಾನದಲ್ಲಿ ಮಿಲಿಟರಿ ಚಾಲಕನಾಗಿ ಸೋವಿಯತ್ ಪಡೆಯನ್ನು ಸೇರಿದ್ದ. 19 ವರ್ಷದವನಾಗಿದ್ದ ಜುಯೆವ್ 1983ರಲ್ಲಿ ಉತ್ತರ ಕಾಬೂಲ್‌ನ ಪರ್ವಾನ್ ಪ್ರಾಂತ್ಯದಲ್ಲಿ ಕಾಣೆಯಾಗಿದ್ದ. ಎರಡು ವರ್ಷಗಳ ಹಿಂದೆ ಇತನ ಇರುವಿಕೆಯನ್ನು ಮಾಸ್ಕೊ ಮೂಲದ ಸಮಿತಿ ಪತ್ತೆ ಹಚ್ಚಿತ್ತು. ಮುಜಾಹೀದ್ದಿನ್ ವಿರುದ್ಧ 1979-89ರ ಅವಧಿಯಲ್ಲಿ ನಡೆದಿದ್ದ ಯುದ್ಧದಲ್ಲಿ ಮೃತಪಟ್ಟ 15 ಸಾವಿರಕ್ಕೂ ಹೆಚ್ಚು ಸೋವಿಯತ್ ಸೈನಿಕರಲ್ಲಿ ಅಲೆಕ್ಸಿ ಕೂಡ ಇದ್ದ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.