30 ಶಿಕ್ಷಕರಿಗೆ ರಾಜ್ಯ ಪ್ರಶಸ್ತಿ

7

30 ಶಿಕ್ಷಕರಿಗೆ ರಾಜ್ಯ ಪ್ರಶಸ್ತಿ

Published:
Updated:

ಬೆಂಗಳೂರು: ಪ್ರಸಕ್ತ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ 30 ಶಿಕ್ಷಕರು ಆಯ್ಕೆಯಾಗಿದ್ದು, ಇದೇ 5ರಂದು ಶಿವಮೊಗ್ಗದಲ್ಲಿ ನಡೆಯುವ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. 20 ಮಂದಿ ಪ್ರಾಥಮಿಕ ಮತ್ತು 10 ಮಂದಿ ಪ್ರೌಢಶಾಲಾ ಶಿಕ್ಷಕರು ಈ ಬಾರಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.ಪ್ರಾಥಮಿಕ ಶಾಲಾ ಶಿಕ್ಷಕರು

(ಬೆಂಗಳೂರು ವಿಭಾಗ): ಸಿದ್ದಲಿಂಗಪ್ಪ - ಸಹ ಶಿಕ್ಷಕರು, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಟಿ.ದಾಸರಹಳ್ಳಿ, ಉತ್ತರ ವಲಯ -3, ಬೆಂಗಳೂರು. ಟಿ.ಆರ್.ನಾಗಮಣಿ - ಮುಖ್ಯಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚುಂಚುಘಟ್ಟ, ದಕ್ಷಿಣ ವಲಯ - 3, ಬೆಂಗಳೂರು.ಜಿ.ತಿಮ್ಮೇಗೌಡ - ಮುಖ್ಯಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ತಿಪ್ಪೂರು, ದೊಡ್ಡಬಳ್ಳಾಪುರ ತಾಲ್ಲೂಕು. ಆರ್.ಮುನಿವೆಂಕಟಸ್ವಾಮಿ - ಸಹ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಗಂಗಾಪುರ, ಶಿಡ್ಲಘಟ್ಟ ತಾಲ್ಲೂಕು. ಎಲ್.ಕುಮಾರ್ - ಸಹ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚನ್ನಪಟ್ಟಣ, ಜೆಟ್ಟಿಅಗ್ರಹಾರ ಅಂಚೆ, ಕೊರಟಗೆರೆ ತಾಲ್ಲೂಕು.

ಎಚ್.ವಿ.ಮಂಜುನಾಥ್ - ಸಹ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಶಿವರಾಜಪುರ, ತೀರ್ಥಹಳ್ಳಿ ತಾಲ್ಲೂಕು.ಮೈಸೂರು ವಿಭಾಗ: ಕುಸುಮಾ - ಸಹ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಿದ್ದರಹಳ್ಳಿ, ಅರಸೀಕೆರೆ ತಾಲ್ಲೂಕು.

ಎಚ್.ಡಿ.ಶಿವಪ್ಪ - ಪದವೀಧರೇತರ ಮುಖ್ಯಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಾಲ್ಮತ್ತೂರು, ಕೊಪ್ಪ.

ಎನ್.ಕೆ.ಪ್ರಭು - ಸಹ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಪ್ಪೆಂಡಡಿ, ನಾಪೋಕ್ಲು, ಮಡಿಕೇರಿ ತಾಲ್ಲೂಕು.

ಬಿ.ಸೋಮಶೇಖರ್ ಶೆಟ್ಟಿ -ಮುಖ್ಯಶಿಕ್ಷಕರು, ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಧರ್ಮಸ್ಥಳ, ಬೆಳ್ತಂಗಡಿ ತಾಲ್ಲೂಕು.ಎನ್.ವಸಂತಿ - ಮುಖ್ಯಶಿಕ್ಷಕರು, ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಮಾಳ, ಕಾರ್ಕಳ ತಾಲ್ಲೂಕು.

ಬೆಳಗಾವಿ ವಿಭಾಗ: ಪಂಚಪ್ಪ ಶಿವನಪ್ಪ ಚಿಕ್ಕೊಪ್ಪ - ಪದವೀಧರೇತರ ಮುಖ್ಯಶಿಕ್ಷಕರು, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಮುರಗೋಡ, ಸವದತ್ತಿ ತಾಲ್ಲೂಕು.ಎನ್.ಜಿ.ಚೌಕಿಮಠ - ಸಹ ಶಿಕ್ಷಕರು, ಕೆಬಿಎಚ್‌ಪಿಎಸ್, ಯರನಾಳ, ಬಸವನಬಾಗೇವಾಡಿ ತಾಲ್ಲೂಕು.ನೀಲಪ್ಪ ದ್ಯಾವಪ್ಪ ಗೊರವರ - ಸಹ ಶಿಕ್ಷಕರು,  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಲಕುರ್ಕಿ, ಬಾದಾಮಿ ತಾಲ್ಲೂಕು.ವಿ.ವಿ.ವಾಲಿ - ಮುಖ್ಯಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನ.02, ಮುಳಗುಂದ ತಾಲ್ಲೂಕು.ಖುರ್ಶಿದಾಬಾನು ಕರೀಮ ಶೇಖ - ಮುಖ್ಯಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರ್ವೋದಯ ನಗರ, ಕೋಡಿಬಾಗ, ಕಾರವಾರ.ಗುಲ್ಬರ್ಗ ವಿಭಾಗ: ಕವಿತಾ - ಸಹ ಶಿಕ್ಷಕರು, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಸ್ಟೇಷನ್ ಗಾಣಗಾಪುರ, ಅಫಜಲಪುರ ತಾಲ್ಲೂಕು.

ರೇಖಾ ಎನ್.ಡಿ - ಸಹ ಶಿಕ್ಷಕರು, ಪಾಟೀಲ ಅನ್ನದಾನಗೌಡರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೋಟೆ, ಹೂವಿನ ಹಡಗಲಿ ತಾಲ್ಲೂಕು.ರುಕ್ಮಿಣಿಬಾಯಿ - ಸಹ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಸನದೊಡ್ಡಿ, ಮಾನ್ವಿ ತಾಲ್ಲೂಕು.

ಶಿವಪ್ಪ ಜೋಗಿ - ಸಹ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬುಡಶೆಟ್ನಾಳ, ಕೊಪ್ಪಳ ತಾಲ್ಲೂಕು.

ಪ್ರೌಢಶಾಲಾ ಶಿಕ್ಷಕರು:ಆರ್.ಎನ್.ಶೈಲಾ - ಮುಖ್ಯ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಟಿ.ದಾಸರಹಳ್ಳಿ, ಉತ್ತರ ವಲಯ - 4, ಬೆಂಗಳೂರು.ಅಶ್ವತ್ಥ್ ನಾರಾಯಣಸ್ವಾಮಿ - ದೈಹಿಕ ಶಿಕ್ಷಕರು, ಶ್ರೀರಾಮಕೃಷ್ಣ ಗ್ರಾಮಾಂತರ ಪ್ರೌಢಶಾಲೆ, ಬೆಟ್ಟಕೋಟೆ, ದೇವನಹಳ್ಳಿ ತಾಲ್ಲೂಕು.

ವಿ.ಈ.ಉಮಾ - ಮುಖ್ಯಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ತಾಂಡವಪುರ, ನಂಜನಗೂಡು ತಾಲ್ಲೂಕು.ಸಿ.ಎಲ್.ನಂಜರಾಜು- ಸಹ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಬಿ.ಹೊಸೂರು, ಮಂಡ್ಯ ಉತ್ತರ ವಲಯ, ಮಂಡ್ಯ ತಾಲ್ಲೂಕು.

ಎಚ್.ಪುತ್ತುನಾಯ್ಕ - ಮುಖ್ಯಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಉಪ್ಪೂರು, ಬ್ರಹ್ಮಾವರ ವಲಯ, ಉಡುಪಿ ಜಿಲ್ಲೆ.ಅಪ್ಪಾಸಾಹೇಬ ರಾಯಪ್ಪ ಕುರಬರ - ಚಿತ್ರಕಲಾ ಶಿಕ್ಷಕರು, ಸೋನಾವಾಲಕರ ಸರ್ಕಾರಿ ಪ್ರೌಢಶಾಲೆ, ಮೂಡಲಗಿ, ಗೋಕಾಕ ತಾಲ್ಲೂಕು.ಕಸ್ತೂರಿಬಾಯಿ ಟಿ.ಪಾಟೀಲ-ಜಗದ್ಗುರು ಶಿವಾನಂದ ಪ್ರೌಢಶಾಲೆ, ಬೈರಿದೇವರಕೊಪ್ಪ, ಹುಬ್ಬಳ್ಳಿ ತಾಲ್ಲೂಕು.ಸುಧೀರ ದೇವಣ್ಣ ನಾಯ್ಕ - ಸಹ ಶಿಕ್ಷಕರು, ಸರ್ಕಾರಿ ಸಂಯುಕ್ತ ಪ್ರೌಢಶಾಲೆ, ಹಿಲ್ಲೂರು, ಅಂಕೋಲ ತಾಲ್ಲೂಕು.ಸೂರ್ಯಪ್ರಕಾಶ್ ಘನಾತೆ, ಸಹ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಲಿಂಗೇರಿ ಸ್ಟೇಷನ್, ಯಾದಗಿರಿ ತಾಲ್ಲೂಕು.ಧನಾಜಿ ಕಾಂಬಳೆ - ಸಹ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ತೋರಣ, ಔರಾದ ತಾಲ್ಲೂಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry