ಗುರುವಾರ , ಮೇ 26, 2022
23 °C
ರಾಜ್ಯ ಸರ್ಕಾರಿ ನೌಕರರ ಚುನಾವಣೆ

30 ಸ್ಥಾನಕ್ಕೆ 63 ನಾಮಪತ್ರ ಸಲ್ಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆನೇಕಲ್:  ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆನೇಕಲ್ ತಾಲ್ಲೂಕು  ಹಾಗೂ ಯೋಜನಾ ಘಟಕಗಳ ಕಾರ್ಯಕಾರಿ ಸಮಿತಿಗೆ ನಡೆಯಲಿರುವ ಚುನಾವಣೆ ರಂಗೇರಿದ್ದು, ಮೂವತ್ತು ಸ್ಥಾನಗಳಿಗೆ ವಿವಿಧ ಇಲಾಖೆಗಳಿಂದ ಒಟ್ಟು 63 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.  ಇಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಈ ದಿನವೇ ಮೂವತ್ತು ನಾಮಪತ್ರಗಳು ಸಲ್ಲಿಕೆಯಾಗಿವೆ.        ಹೆಚ್ಚು ಮತದಾರರನ್ನು ಹೊಂದಿರುವ ಪ್ರಾಥಮಿಕ ಶಿಕ್ಷಣ ಇಲಾಖೆಯಿಂದ ಮೂರು ಸ್ಥಾನಕ್ಕಾಗಿ ಹದಿನೆಂಟು ನಾಮಪತ್ರಗಳು ಸಲ್ಲಿಕೆಯಾಗಿವೆ. ಹೆಚ್ಚು ಸ್ಥಾನಗಳನ್ನು ಹೊಂದಿರುವ ಆರೋಗ್ಯ ಮತ್ತು ಕುಟುಂಬ ಇಲಾಖೆಯ ನಾಲ್ಕು ಸ್ಥಾನಗಳಿಗೆ  ಹನ್ನೊಂದು ನಾಮಪತ್ರ, ಕಂದಾಯ ಇಲಾಖೆಯ ಎರಡು ಸ್ಥಾನಕ್ಕೆ ಐದು ನಾಮಪತ್ರ ಸಲ್ಲಿಕೆಯಾಗಿವೆ.ಪ್ರಾಥಮಿಕ ಶಿಕ್ಷಣ ಇಲಾಖೆಯ ಮೂರು ಸ್ಥಾನಗಳಿಗೆ ಕೆ.ಎಂ. ಸೊಣ್ಣಪ್ಪ, ಗುರುಲೋಕೇಶ್, ವೆಂಕಟಸ್ವಾಮಿ ರೆಡ್ಡಿ, ನಾರಾಯಣಮೂರ್ತಿ, ಸೋಮಣ್ಣ, ಶ್ರಿನಾಥ್, ವೆಂಕಟರಮಣ, ರಾಜೇಂದ್ರ ಪ್ರಸಾದ್, ಟಿ.ಎನ್. ಮಂಜುನಾಥ್, ಆರ್. ಶ್ರಿನಿವಾಸ್, ಆರ್. ರಾಮಚಂದ್ರ, ಟಿ. ಲೋಕೇಶ್,  ಮುನಿಕೃಷ್ಣ, ವಿ. ವೆಂಕಟೇಶ್, ಜಿ. ನಾಗರಾಜು, ಪಿ. ಚಂದ್ರಶೇಖರ್, ಟಿ.ಎಸ್. ಪೂರ್ಣಿಮ, ಆರ್. ನಾರಾಯಣ  ನಾಮಪತ್ರ ಸಲ್ಲಿಸಿದ್ದಾರೆ.  ಆರೋಗ್ಯ ಮತ್ತು ಕುಟುಂಬ ಇಲಾಖೆಯ 4 ಸ್ಥಾನಗಳಿಗೆ ಪಿ.ಎಂ. ಮುನಿರೆಡ್ಡಿ, ಸತೀಶ್‌ರೆಡ್ಡಿ, ಆರ್. ಗೋವಿಂದರಾಜು, ಎಂ. ಶಿವಣ್ಣ, ಹೇಮಂತ್ ಕುಮಾರ್, ಮುರಳಿ, ಶ್ರಿನಿವಾಸ್, ರಾಜೀವ್ ಶಾಂತಗಿರಿ, ಮಾರ್ಕಂಡಪ್ಪ, ಪ್ರೇಮಾವತಿ ಗೋಪಾಲ್ ನಾಮಪತ್ರ ಸಲ್ಲಿಸಿದ್ದಾರೆ.ಶಿಕ್ಷಣ ಇಲಾಖೆ ಬೋಧಕೇತರ ವಿಭಾಗದ 1 ಸ್ಥಾನಕ್ಕೆ ಸಿ.ಆರ್. ನಾಗಭೂಷಣ್, ವಿ.ಕೆ. ಗವಿರಂಗಯ್ಯ, ಶೃತಿ ಚೈತ್ರ ಎಸ್.ಎನ್. ಮಠ ನಾಮಪತ್ರ ಸಲ್ಲಿಸಿದ್ದಾರೆ.  ಜುಲೈ 16 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ.  ಶಿಕ್ಷಣ, ಆರೋಗ್ಯ ಮತ್ತು ಕಂದಾಯ ಇಲಾಖೆಯಲ್ಲಿ ತೀವ್ರ ಪೈಪೋಟಿ ನಡೆಯುವ ಸಾಧ್ಯತೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.