ಸೋಮವಾರ, ಜೂನ್ 21, 2021
29 °C

300 ಬತ್ತದ ತಳಿ ಲಭ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಣಿಕೊಪ್ಪಲು: ಕಾರ್ಮಿಕರ ಸಮಸ್ಯೆ ಮುಂದೊಡ್ಡಿ ಜಿಲ್ಲೆಯ ರೈತರು ಬತ್ತ ಬೆಳೆಯುವುದನ್ನು ಕೈಬಿಡುವುದು ಆತಂಕಕಾರಿ ಎಂದು ಪೊನ್ನಂಪೇಟೆ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ.ಮೋಹನ್ ಹೇಳಿದರು.ಗೋಣಿಕೊಪ್ಪಲು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಭಾನುವಾರ ನಡೆದ ಕೃಷಿ ಉತ್ಸವ 2012 ಕಾರ್ಯಕ್ರಮದಲ್ಲಿ `ಲಾಭದಾಯಕ ಬತ್ತ ಬೇಸಾಯ ತಾಂತ್ರೀಕರಣ ಮತ್ತಿತರ ಸಾಧ್ಯತೆಗಳು~ ವಿಚಾರ ಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಕಾರ್ಮಿಕರ ಸಮಸ್ಯೆಗೆ ಹೆದರಬಾರದು ಎಂದರು.ಕಾರ್ಮಿಕರು ಮಾಡುವ ಕೆಲಸವನ್ನು ಯಂತ್ರಗಳು ಮಾಡಲಿವೆ. ಬತ್ತದ ಸಸಿ ನಾಟಿಗೆ ಸಿದ್ಧವಾದ ಕೂಡಲೆ ತಮ್ಮನ್ನು ಸಂಪರ್ಕಿಸಿದರೆ ಯಂತ್ರ ಒದಗಿಸಿಕೊಡಲಾಗುವುದು. ಇದರಿಂದ ಅತ್ಯಂತ ಕಡಿಮೆ ಅವಧಿಯಲ್ಲಿ ನಾಟಿ ಕೆಲಸ ಮುಗಿಯಲಿದೆ. ಇದೇ ರೀತಿ ಕೊಯ್ಲಿನ ಸಂದರ್ಭದಲ್ಲಿಯೂ ಯಂತ್ರವೇ ಕೆಲಸಮಾಡಲಿದೆ ಎಂದು ಹೇಳಿದರು.ಬತ್ತದ ಗದ್ದೆಯನ್ನು ಕೈಬಿಟ್ಟರೆ ಅಂತರ್ಜಲ ಕಡಿಮೆಯಾಗಲಿದೆ. ಬತ್ತದ ಬೆಲೆಯೂ ಗಗನಕ್ಕೇರಿ 1 ಕಿಲೋ ಅಕ್ಕಿಗೆ ಮುಂದೆ 200 ರಿಂದ 300 ರೂಪಾಯಿವರೆಗೆ ಏರಿಕೆ ಆಗಲಿದೆ. ಇದರಿಂದ ಕೊಡಗಿನ ಪ್ರಾಕೃತಿಕ ಮತ್ತು ಆರ್ಥಿಕ ವ್ಯವಸ್ಥೆ ಹದಗೆಡಲಿದ್ದು, ಜಿಲ್ಲೆಯ ರೈತರು ಇದಕ್ಕೆ ಅವಕಾಶ ನೀಡಬಾರದು. ಪೊನ್ನಂಪೇಟೆ ಕೃಷಿ ಸಂಶೋಧನಾ ಕೇಂದ್ರದಲ್ಲಿ 300 ಬತ್ತದ ತಳಿಗಳನ್ನು ಇರಿಸಲಾಗಿದೆ. ಆಸಕ್ತ ರೈತರು ಪಡೆದುಕೊಳ್ಳಬಹುದು ಎಂದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ನಿರ್ದೇಶಕ ಮನೋಜ್ ಮಿನೇಜಸ್ ಮಾತನಾಡಿ, ಬತ್ತದ ಶ್ರೀಪದ್ಧತಿ ಮೂಲಕ ಉತ್ತಮ ಆದಾಯ ಗಳಿಸಬಹುದು. ಅತಿ ಕಡಿಮೆ ಬತ್ತದ ಬೀಜ ಬಳಕೆ ಹಾಗೂ ನೀರಿನ ಬಳಕೆಗೆ ಶ್ರೀಪದ್ಧತಿ ಎಂದು ಹೆಸರು. ಶ್ರೀಪದ್ಧತಿಯಲ್ಲಿ ಒಂದು ಎಕರೆಗೆ  ಕೇವಲ 2 ರಿಂದ 3 ಕಿಲೋ ಬಿತ್ತನೆ ಬೀಜ ಸಾಕು. ಇದರಲ್ಲಿ 16ರಿಂದ 20  ಕ್ವಿಂಟಲ್ ಇಳುವರಿ ಲಭಿಸಲಿದೆ. ನೀರಿನ ಪ್ರಮಾಣವೂ ಕಡಿಮೆ ಇದ್ದರೆ ಸಾಕು ಎಂದು ನುಡಿದರು.ಕಿರುಗೂರಿನ ಪ್ರಗತಿಪರ ಕೃಷಿಕ ಸಿ.ಡಿ.ಕರುಂಬಯ್ಯ ಮಾತನಾಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೃಷಿ ಅಧಿಕಾರಿ ಯೋಗೇಶ್ ನಿರೂಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.