ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

30ರಂದು ಕಾರ್ಮಿಕರ ರಾಜ್ಯ ಸಮಾವೇಶ

Last Updated 22 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಕಾರ್ಮಿಕ ಸಂಘಟನೆಗಳ ರಾಜ್ಯ ಸಮಾವೇಶವು ಜನವರಿ 30 ರಂದು ಶೇಷಾದ್ರಿಪುರ ಪ್ರದೇಶದಲ್ಲಿರುವ ವರದಾಚಾರ್ ಸ್ಮಾರಕ ಸಭಾಂಗಣದಲ್ಲಿ ನಡೆಯಲಿದೆ~ ಎಂದು ಬಿಎಂಎಸ್ ಕಾರ್ಮಿಕ ಸಂಘಟನೆಯ ಕೆ.ಎಂ. ಸೂರ್ಯನಾರಾಯಣ್ ಹೇಳಿದರು.

ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ದೇಶವ್ಯಾಪಿ ಕಾರ್ಮಿಕರು ಫೆಬ್ರುವರಿ 28 ರಂದು ನಡೆಸಲಿರುವ ಕಾರ್ಮಿಕರ ಮುಷ್ಕರವನ್ನು ಯಶಸ್ವಿಗೊಳಿಸಲು ಈ ಸಮಾವೇಶ ನಡೆಸಲಾಗುವುದು~ ಎಂದು ಹೇಳಿದರು.

`ದುಡಿಯುವ ಜನರಿಗೆ ಬೆಲೆಯೇ ಇಲ್ಲದಂತಾಗಿದೆ. ಅತಿ ನಿಷ್ಕಾಳಜಿಗೆ ಒಳಗಾಗಿರುವ ವರ್ಗವೆಂದರೆ ಕಾರ್ಮಿಕ ವರ್ಗವಾಗಿದೆ. ಕಾರ್ಮಿಕ ವರ್ಗದ ಜೊತೆಗೆ ಸರ್ಕಾರ ಕಣ್ಣಾ ಮುಚ್ಚಾಲೆಯಾಟ ಆಡುತ್ತಿದೆ. ಹೀಗಾಗಿ ಎಲ್ಲ ಕಾರ್ಮಿಕ ಸಂಘಟನೆಗಳೆಲ್ಲ ಒಗ್ಗಟ್ಟಾಗಿ ಈ ಮುಷ್ಕರದ ರೂಪುರೇಷೆಯನ್ನು ಸಿದ್ಧಪಡಿಸಲಾಗಿದೆ~ ಎಂದರು.

`ಕಾರ್ಮಿಕ ವರ್ಗದ ಮುಖ್ಯ ಬೇಡಿಕೆಗಳೆಂದರೆ, ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು, ಉದ್ಯೋಗ ಸೃಷ್ಟಿಸಲು ಹಾಗೂ ರಕ್ಷಿಸಲು ಪ್ಯಾಕೇಜ್ ಅನುಷ್ಠಾನಗೊಳಿಸಬೇಕು. ಕಾರ್ಮಿಕ ಕಾನೂನುಗಳನ್ನು ನ್ಯಾಯಯುತವಾಗಿ ಸಿದ್ಧಪಡಿಸಬೇಕು. ಕಾರ್ಮಿಕ ವರ್ಗದವರಿಗೆ ಸಲ್ಲಬೇಕಾದ ಪಿಂಚಣಿ ಹಣವನ್ನು ನೀಡಬೇಕು~ ಎಂದು ಒತ್ತಾಯಿಸಿದರು.

`2011 ರ ನವೆಂಬರ್ 8 ರಂದು ಎಲ್ಲ ಕೇಂದ್ರ ಕಾರ್ಮಿಕ ಸಂಘಟನೆಗಳು ದೇಶದಾದ್ಯಂತ ಬೃಹತ್ ಪ್ರಮಾಣದಲ್ಲಿ ಜೈಲ್ ಭರೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದವು. ಆದರೂ ಸರ್ಕಾರ ಇದರಿಂದ ಎಚ್ಚೆತ್ತುಕೊಂಡು ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಅದಕ್ಕಾಗಿ ಫೆಬ್ರುವರಿ 28 ರಂದು ದೇಶದ ಇಡೀ ಕಾರ್ಮಿಕ ವರ್ಗ ಮುಷ್ಕರದಲ್ಲಿ ಭಾಗವಹಿಸಲಿದೆ~ ಎಂದರು.

`ಈ ಮುಷ್ಕರದಿಂದ ಆಗುವ ಪರಿಣಾಮಗಳಿಗೆ ಸರ್ಕಾರವೇ ನೇರ ಹೊಣೆಯಾಗುತ್ತದೆ. ಮುಷ್ಕರದಲ್ಲಿ 11 ಕೇಂದ್ರ ಕಾರ್ಮಿಕ ಸಂಘಟನೆಗಳು ಪಾಲ್ಗೊಳ್ಳಲಿವೆ~ ಎಂದು ಹೇಳಿದರು.

ಗೋಷ್ಠಿಯಲ್ಲಿ ವಿವಿಧ ಸಂಘಟನೆಯ ಸದಸ್ಯರುಗಳಾದ ಎಸ್.ಪ್ರಸನ್ನಕುಮಾರ್, ಶ್ರೀನಿವಾಸಮೂರ್ತಿ, ಎಂ.ಎಸ್.ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT