ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

30ರಿಂದ ‘ಅತಿಮಧುರ ಅನುರಾಗ’ ಆರಂಭ

Last Updated 20 ಡಿಸೆಂಬರ್ 2013, 5:49 IST
ಅಕ್ಷರ ಗಾತ್ರ

ಮೈಸೂರು: ‘ಜೀ ಕನ್ನಡ’ ವಾಹಿನಿಯ ಹೊಸ ಮಿನಿ ಧಾರಾವಾಹಿ ‘ಅತಿಮಧುರ ಅನುರಾಗ’ ಡಿ. 30ರಿಂದ  ರಾತ್ರಿ 8 ಗಂಟೆಗೆ ಪ್ರಸಾರಗೊಳ್ಳಲಿದೆ.

‘ಪ್ರತಿ ಸೋಮವಾರದಿಂದ ಗುರುವಾರದವರೆಗೆ ಪ್ರಸಾರವಾಗುವ ಈ ಧಾರಾವಾಹಿಯು 13 ವಾರಗಳ, 65 ಕಂತುಗಳಲ್ಲಿ ಮಾತ್ರ ಪ್ರಸಾರವಾಗಲಿದೆ. ಮೆಗಾ ಧಾರವಾಹಿಗಳ ಏಕತಾನತೆ ಮುರಿಯಲು ಇದು ನೆರವಾಗಲಿದೆ’ ಎಂದು ಧಾರಾವಾಹಿಯ ನಿರ್ಮಾಪಕಿ, ನಿರ್ದೇಶಕಿ ಶ್ರುತಿ ನಾಯ್ಡು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಈ ಧಾರಾವಾಹಿ ಕಥೆ ಮೈಸೂರಿನಲ್ಲಿಯೇ ನಡೆಯುತ್ತದೆ. ಮುಖ್ಯವಾಗಿ ಇದು ನನ್ನದೇ ಕಥೆ. ಹೀಗಾಗಿ ಮೈಸೂರಲ್ಲಿ ಅಲ್ಲದೆ, ಬಲಮುರಿಯಲ್ಲಿಯೂ ಚಿತ್ರೀಕರಣ ನಡೆಯಲಿದೆ. ಭಿನ್ನವಾದ ಪ್ರೇಮಕಥೆಯನ್ನು ಹೊಸಬಗೆಯಾಗಿ ಕಟ್ಟಿಕೊಡಲಾಗುತ್ತದೆ. ಸುಂದರ ಅನುಭವವನ್ನು ಇದು ನೀಡಲಿದೆ.

ಸಿನಿಮಾದಲ್ಲಿ ನಟಿಸಿದ್ದ ಸ್ಪೂರ್ತಿ ಹಾಗೂ ವಿಶ್ವಾಸ್‌ ನಾಯಕ ಹಾಗೂ ನಾಯಕಿ. ಉಳಿದಂತೆ ರಾಮೇಶ್ವರಿ ವರ್ಮಾ, ನಾಗೇಂದ್ರ ಷಾ, ಕೃಷ್ಣ ಅಡಿಗ, ಹರಿಕೃಷ್ಣ, ಆಶಾಲತಾ, ದಮಯಂತಿ ನಾಗರಾಜ್ ನಟಿಸುತ್ತಿದ್ದಾರೆ’ ಎಂದು ವಿವರಿಸಿದರು.

ಧಾರವಾಹಿ ನಾಯಕಿ ಸ್ಫೂರ್ತಿ, ಇದುವರೆಗೆ ಒಂದು ತಿಂಗಳವರೆಗೆ ಚಿತ್ರೀಕರಣ ನಡೆದಿದೆ. ಆದರೆ, ಅಳಲು ಗ್ಲಿಸರಿನ್‌ ಬಳಸಿಲ್ಲ. ಅಂದರೆ ಅಳುವ ಪಾತ್ರವಿಲ್ಲ ಎಂದರು.

‘ಈಗಾಗಲೇ ಜೀ ಕನ್ನಡದಲ್ಲಿ ಭಲೆ ಬಸವ ಹಾಗೂ ನಿತ್ಯೋತ್ಸವ ಮಿನಿ ಧಾರಾವಾಹಿಗಳಾಗಿ ಜನಪ್ರಿಯವಾಗಿವೆ. ಈ ಸಾಲಿಗೆ ಅತಿಮಧುರ ಅನುರಾಗ ಕೂಡಾ ಸೇರಲಿದೆ’ ಎಂದು  ಧಾರಾವಾಹಿ ವಿಭಾಗದ ವ್ಯವಸ್ಥಾಪಕ ಸುಧನ್ವಾ ದೇರಾಜೆ ಹೇಳಿದರು.
ಕಲಾವಿದರಾದ ರಾಮೇಶ್ವರಿ ವರ್ಮಾ,  ಸುಂದರ್, ಜೀ ಟಿವಿ ಸಮೂಹದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಡಾ.ಎಂ. ಗೌತಮ್‌ ಮಾಚಯ್ಯ ಹಾಗೂ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT