ಬುಧವಾರ, ಡಿಸೆಂಬರ್ 11, 2019
26 °C

31ರಿಂದ ವಿಬ್‌ಗ್ಯೋರ್ ಹೈ

Published:
Updated:
31ರಿಂದ ವಿಬ್‌ಗ್ಯೋರ್ ಹೈ

ನಿತ್ಯ ಓದು ಬರಹದ ದಿನಚರಿಯಲ್ಲಿರುವ ಮಕ್ಕಳಿಗೆ ಸ್ವಲ್ಪ ಬ್ರೇಕ್ ನೀಡಿ, ಅವರೊಳಗಿನ ಪ್ರತಿಭೆ ಹೊರತರುವ ಉದ್ದೇಶದೊಂದಿಗೆ ಉದ್ಯಾನ ನಗರಿಯಲ್ಲಿ ಇದೇ ಮೊದಲ ಬಾರಿಗೆ ‘ವಿಬ್‌ಗ್ಯೋರ್ ಹೈ’ ಸ್ಕೂಲ್ ಆಫ್ ಅಕಾಡೆಮಿ ಜ.31 ರಿಂದ ಫೆ. 6ರ ವರೆಗೆ ‘ವಿವಾ 2011’ ಬೃಹತ್ ಅಂತರ್ ಶಾಲಾ ಉತ್ಸವ ಆಯೋಜಿಸುತ್ತಿದೆ.

 ಮಾರತ್‌ಹಳ್ಳಿ ಮತ್ತು ಹರ್ಲೂರು ರಸ್ತೆ ಶಾಲೆಗಳಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, 20ಕ್ಕೂ ಹೆಚ್ಚಿನ ಶಾಲೆಗಳು ಪಾಲ್ಗೊಳ್ಳಲಿವೆ ಎನ್ನುತ್ತಾರೆ ಅಕಾಡೆಮಿಯ ನಿರ್ದೇಶಕಿ ಕವಿತಾ ಸಹಾಯ್.

ಇಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡೆ, ಕಾರ್ಯಾಗಾರ ಜೊತೆಗೆ ಫ್ಯಾಷನ್ ಷೋ, ರಾಕ್‌ಆನ್, ಮಾಮ್ ಆ್ಯಂಡ್ ಮಿ, ಸ್ಕೇಟಿಂಗ್, ಈಜು ಮತ್ತಿತರ ಮನರಂಜನಾತ್ಮಕ ಸ್ಪರ್ಧೆಗಳಿವೆ.

ಇಂದಿನ ಪೀಳಿಗೆಯ ಮಕ್ಕಳಲ್ಲಿನ ಪ್ರತಿಭೆ ಗುರುತಿಸುವ ಜೊತೆಗೆ, ಶೈಕ್ಷಣಿಕ ಚಟುವಟಿಕೆಗಳ ಹೊರತಾದ ಚಿಣ್ಣರ ಪ್ರಪಂಚ ಸೃಷ್ಟಿಯಾಗಲಿದೆ. ಇಲ್ಲಿ ಪೋಷಕರು ಪಾಲ್ಗೊಂಡು ಕಾರ್ಯಕ್ರಮದ ರಸಾನುಭವ ಸವಿಯಬಹುದು ಎಂದು ಅವರು ಹೇಳುತ್ತಾರೆ. ಪೋಷಕರೂ ಕೂಡ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶವಿದೆ ಎಂದು ಪ್ರಾಚಾರ್ಯೆ ಅರ್ಚನಾ ಶ್ರೀವಾಸ್ತವ, ಶಾಲಾ ಸದಸ್ಯರಾದ ಗೀತಾ, ಅಮಿ ದೇಸಾಯಿ ವಿವರಿಸುತ್ತಾರೆ.

ಪ್ರತಿಕ್ರಿಯಿಸಿ (+)