31 ಶಾಲೆಗಳಿಗೆ ಕಾಂಪೌಂಡೇ ಇಲ್ಲ

7

31 ಶಾಲೆಗಳಿಗೆ ಕಾಂಪೌಂಡೇ ಇಲ್ಲ

Published:
Updated:
31 ಶಾಲೆಗಳಿಗೆ ಕಾಂಪೌಂಡೇ ಇಲ್ಲ

ಮೈಸೂರು: ತಾಲ್ಲೂಕಿನಲ್ಲಿ 2 ಶಾಲೆಗಳು 10ಕ್ಕಿಂತ ಕಡಿಮೆ ವಿದ್ಯಾರ್ಥಿಗಳನ್ನು ಹೊಂದಿದ್ದರೆ, ದಕ್ಷಿಣ ವಲಯದಲ್ಲಿ 2 ಶಾಲೆಗಳಲ್ಲೂ 4ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಾರೆ. ಉತ್ತರ ವಲಯ ವ್ಯಾಪ್ತಿಯ 6 ಶಾಲೆಗಳು ಬಾಡಿಗೆ ಕಟ್ಟಡಲ್ಲಿ ನಡೆಯುತ್ತಿವೆ. ಮೈಸೂರು ತಾಲ್ಲೂಕಿನ 31 ಶಾಲೆಗಳಲ್ಲಿ ಕಾಂಪೌಂಡ್ ಇಲ್ಲವೇ ಇಲ್ಲ.-ಇವು ಮೈಸೂರು ತಾಲ್ಲೂಕು ಹಾಗೂ ನಗರ ವ್ಯಾಪ್ತಿಯ ಶಾಲೆಗಳ ದುಃಸ್ಥಿತಿ. ಮೈಸೂರು ತಾಲ್ಲೂಕಿನ ಹನುಮಂತಪುರ ಹಾಗೂ ಮಹದೇವಪುರ ಶಾಲೆಯಲ್ಲಿ 10ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಾರೆ. ತಾಲ್ಲೂಕಿನಲ್ಲಿ 218 ಶಾಲೆಗಳಿದ್ದು, 1182 ಶಿಕ್ಷಕರಿದ್ದಾರೆ. ಆದರೆ, ತಾಲ್ಲೂಕಿನಲ್ಲಿ ಕಟ್ಟಡದ ಕೊರತೆಯಾಗಲಿ ಹಾಗೂ ಶಿಕ್ಷಕರ ಕೊರತೆಯಾಗಲಿ ಇಲ್ಲ. ಆದರೆ ಕೆಲವೊಂದು ಶಾಲೆಗಳಲ್ಲಿ ಕಟ್ಟಡಗಳು ಶಿಥಿಲಗೊಂಡಿದ್ದು, ಅವುಗಳ ದುರಸ್ತಿ ಕಾರ್ಯ ನಡೆಯುತ್ತಿದೆ.84 ಶಾಲೆಗಳಿಗೆ ಯುರೇಕಾ ಫೋರ್ಬ್ಸ್‌ ಕಂಪೆನಿಯವರು ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿದ್ದಾರೆ. ಉಳಿದ ಶಾಲೆಗಳಿಗೆ ನೀರಿನ ಸೌಲಭ್ಯ ಕಲ್ಪಿಸಬೇಕಾಗಿದೆ. ತಾಲ್ಲೂಕಿನ ಕಳಸ್ತವಾಡಿ, ನೆಹರುನಗರ, ಭಾರತ್‌ನಗರ, ಕಮರವಳ್ಳಿ, ದೊಡ್ಡಮಾರಗೌಡನಹಳ್ಳಿ, ವಾಜಮಂಗಲ, ಹಾರೋಹಳ್ಳಿ, ಮೂಡಲಹುಂಡಿ, ಗುಮಚನಹಳ್ಳಿ, ಕೆಂಚಲಗೂಡು, ಚಟ್ನಹಳ್ಳಿ, ದೊಡ್ಡಕಾನ್ಯ, ಕೆ.ಎಂ.ಹುಂಡಿ, ದಡದಹಳ್ಳಿ, ರಾಯನಹುಂಡಿ, ಭೈರವೇಶ್ವರನಗರ, ಕೂರ‌್ಗಳ್ಳಿ, ಹೂಟಗಳ್ಳಿ, ಜಟ್ಟಿಹುಂಡಿ, ಗೌಹಳ್ಳಿ, ಕೇರ‌್ಗಳ್ಳಿ, ಕೋಟೆಹುಂಡಿ, ರಮಾಬಾಯಿನಗರ, ಉಂಡವಾಡಿ, ಹುಯಿಲಾಳು, ಲಕ್ಷ್ಮೀಪುರ, ಮದ್ದೂರು, ದೊಡ್ಡಕಾನ್ಯ ಹಾಗೂ ದೂರ ಗ್ರಾಮಗಳ ಸರ್ಕಾರಿ ಹಿರಿಯ ಹಾಗೂ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕಾಂಪೌಂಡ್ ಇಲ್ಲ. ಕೆಲವೊಂದು ಶಾಲೆಗಳಿಗೆ ಕಾಂಪೌಂಡ್ ನಿರ್ಮಿಸಲು ಜಾಗವಿಲ್ಲ. ಕಳಸ್ತವಾಡಿ ಶಾಲೆಯ ಜಾಗದ ವಿವಾದ ನ್ಯಾಯಾಲಯದಲ್ಲಿದೆ.ಶಾಲೆಗಳಲ್ಲಿ ಕೊಠಡಿಗಳ ಕೊರತೆ ಇಲ್ಲ, ಶಿಕ್ಷಕರ ಕೊರತೆಯೂ ಇಲ್ಲ. ಎಲ್ಲಾ ಶಾಲೆಗಳಲ್ಲೂ ಹುಡುಗರಿಗೆ ಹಾಗೂ ಹುಡುಗಿಯರಿಗೆ ಪ್ರತ್ಯೇಕ ಶೌಚಾಲಯವಿದೆ, ಶಾಲೆಗಳಲ್ಲಿ ಮೂಲಸೌಲಭ್ಯದ ಕೊರತೆ ಆಗದಂತೆ ನೋಡಿಕೊಳ್ಳುತ್ತಿದ್ದೇವೆ ಎನ್ನುತ್ತಾರೆ. ಮೈಸೂರು ತಾಲ್ಲೂಕು ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ವಿ.ಕಾಂತ.

ಉತ್ತರ ವಲಯ: ಮೈಸೂರು ನಗರ ಉತ್ತರ ವಲಯ ವ್ಯಾಪ್ತಿಯ 6 ಶಾಲೆಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಸರ್ಕಾರಿ ಹಿರಿಯ ಪ್ರಾಥಮಿಕ ನಿಜಾಮಿಯಾ, ಅಲೀಂನಗರ, ಪಟ್ಟೆಗಾರ್ ಮಂಡ್ವ, ಸಾಲಿಕಾ ದಿವಾನ್‌ಕಾನ್, ಎನ್‌ಜಿಕೆ ಬ್ಲಾಕ್‌ನ ಉರ್ದು ಶಾಲೆಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಸಿವಿ ರಸ್ತೆಯಲ್ಲಿದ್ದ ಉರ್ದು ಶಾಲೆಗೆಬಾಡಿಗೆ ಕಟ್ಟಡ ಪರಿಣಾಮ

ಕಟ್ಟಡದ ಮಾಲೀಕರು ಮಕ್ಕಳು ಬೀದಿಗೆ ಕೆಡವಿದ್ದು ನಿದರ್ಶನ. ಉತ್ತರ ವಲಯ ವ್ಯಾಪ್ತಿಯಲ್ಲಿ 76 ಸರ್ಕಾರಿ ಶಾಲೆಗಳಲ್ಲಿ 41 ಉರ್ದು ಹಾಗೂ 35 ಕನ್ನಡ ಶಾಲೆಗಳಿವೆ. ಕೆಲವೊಂದು ಶಾಲೆಗಳನ್ನು ಬಿಟ್ಟರೆ ಉಳಿದ ಶಾಲೆಗಳಲ್ಲಿ ಕುಡಿಯುವ ನೀರು ಹಾಗೂ ಶೌಚಾಲಯಗಳಿವೆ. ಹೆಚ್ಚಿನ ಶಾಲೆಗಳಲ್ಲಿ ಕಾಂಪೌಂಡ್ ನಿರ್ಮಾಣಕ್ಕೆ ಜಾಗವೇ ಇಲ್ಲ. ಕಟ್ಟಡಗಳು ಹಾಗೂ ಉಪನ್ಯಾಸಕರ ಕೊರತೆ ಇಲ್ಲ ಎನ್ನುತ್ತಾರೆ ಉತ್ತರ ವಲಯ ಬಿಇಓ ಕರೀಗೌಡ.

ದಕ್ಷಿಣ ವಲಯ: ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಒಟ್ಟು 40 ಶಾಲೆಗಳಿದ್ದು, 2 ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಇದ್ದಾರೆ. ಇಟ್ಟಿಗೆಗೂಡಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಬ್ಬರು ಹಾಗೂ ಶಿವರಾಂಪೇಟೆಯ ದೇವರಾಜ ಅರಸ್ ಶಾಲೆಯಲ್ಲಿ 4 ವಿದ್ಯಾರ್ಥಿಗಳಿದ್ದಾರೆ. ಕುರುಬಾರಹಳ್ಳಿ ಶಾಲೆಯಲ್ಲಿ ಕಾಂಪೌಂಡ್ ಇಲ್ಲ.

ಅಲ್ಲದೇ ಅಶೋಕಪುರಂ 13ನೇ ಕ್ರಾಸ್ ಶಾಲೆ, ನಾಚನಹಳ್ಳಿ ಪಾಳ್ಯ ಹಾಗೂ ಹಳೇ ಇಟ್ಟಿಗೆಗೂಡು ಶಾಲೆಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ.  ಕುರುಬಾರಹಳ್ಳಿ ಶಾಲೆಯಲ್ಲಿ ಕಾಂಪೌಂಡ್ ಕೆಡವಲಾಗಿತ್ತು. ಈಗ ಅದನ್ನು ಸರಿಪಡಿಸಲಾಗಿದೆ. ಉಳಿದಂತೆ ಯಾವುದೇ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇಲ್ಲ, ಕಟ್ಟಡದ ಕೊರತೆಯೂ ಇಲ್ಲ. ಹುಡುಗರು ಮತ್ತು ಹುಡುಗಿಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಲಾಗಿದೆ ಎನ್ನುತ್ತಾರೆ ದಕ್ಷಿಣ ವಲಯ ಬಿಇಓ ರಘುನಂದನ್.7 ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ಮಕ್ಕಳು

ಕೆ.ಆರ್.ನಗರ: ಪಟ್ಟಣದ ಪ್ರತಿಷ್ಠಿತ ಕೃಷ್ಣರಾಜೇಂದ್ರ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲೆ ವಿಭಾಗ) ಸೇರಿದಂತೆ ತಾಲ್ಲೂಕಿನ ವಿವಿಧ ಶಾಲೆಗಳಲ್ಲಿ ಮೂಲ ಸೌಲಭ್ಯಗಳಿಲ್ಲದೇ ವಿದ್ಯಾರ್ಥಿಗಳು ಪರದಾಡುವಂತಾಗಿದೆ.

257 ಶಾಲೆಗಳಲ್ಲಿ 223 ಪ್ರಾಥಮಿಕ ಶಾಲೆ ಮತ್ತು 34 ಪ್ರೌಢ ಶಾಲೆಗಳಿವೆ. ಪ್ರಾಥಮಿಕ ಶಾಲೆಯಲ್ಲಿ 906 ಶಿಕ್ಷಕರು ಮತ್ತು ಪ್ರೌಢಶಾಲೆಯಲ್ಲಿ 265 ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 137 ಪ್ರಾಥಮಿಕ ಮತ್ತು 15 ಪ್ರೌಢಶಾಲೆಗಳಲ್ಲಿ ಮೇಲ್ಚಾವಣಿ, ತಡೆ ಗೋಡೆ, ನೆಲ, ಕಿಟಕಿ ಬಾಗಿಲುಗಳು ದುರಸ್ತಿ ಆಗಬೇಕಿದೆ.223 ಪ್ರಾಥಮಿಕ ಶಾಲೆಗಳಲ್ಲಿ 14 ಶಾಲೆಗಳಲ್ಲಿ ಕುಡಿಯುವ ನೀರಿನ ಸೌಲಭ್ಯವಿಲ್ಲ. 33 ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಹಾಗೂ 25 ಶಾಲೆಗಳಲ್ಲಿ ಗಂಡು ಮಕ್ಕಳಿಗೆ ಶೌಚಾಲಯವಿಲ್ಲ. 137 ಶಾಲೆಗಳ ಕಟ್ಟಡ ದುರಸ್ತಿ ಆಗಬೇಕಿದೆ. 42 ಶಾಲೆಗಳು ಕೊಠಡಿಗಳ ಸಮಸ್ಯೆ ಎದುರಿಸುತ್ತಿವೆ. 162 ಶಾಲೆಗಳಲ್ಲಿ ಪೀಠೋಪಕರಣಗಳ ಕೊರತೆ ಇದೆ. 7 ಕಡೆ ವಿದ್ಯುತ್ ಸೌಲಭ್ಯವಿಲ್ಲ.34 ಪ್ರೌಢ ಶಾಲೆಗಳ ಪೈಕಿ 9 ಶಾಲೆಗಳಲ್ಲಿ ಕುಡಿಯುವ ನೀರು ಲಭ್ಯವಿಲ್ಲ. 8 ಶಾಲೆಗಳಲ್ಲಿ ಹೆಣ್ಣು ಮಕ್ಕಳ ಶೌಚಾಲಯ ಹಾಗೂ 12 ಶಾಲೆಗಳಲ್ಲಿ ಗಂಡು ಮಕ್ಕಳ ಶೌಚಾಲಯವಿಲ್ಲ. 15 ಶಾಲಾ ಕಟ್ಟಗಳು ದುಸ್ತಿ ಹಂತದಲ್ಲಿವೆ. 15 ಶಾಲೆಗಳು ಕೊಠಡಿಗಳ ಸಮಸ್ಯೆ ಹಾಗೂ 13 ಶಾಲೆಗಳು ಪೀಠೋಪಕರಣಗಳ ಸಮಸ್ಯೆ ಎದುರಿಸುತ್ತಿವೆ. 8 ಶಾಲೆಗಳಲ್ಲಿ ವಿದ್ಯುತ್ ಸೌಲಭ್ಯವಿಲ್ಲ.7 ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಾರೆ. ಹೊಸೂರು ಸರ್ಕಾರಿ ಕಿರಿಯ ಪ್ರಾಥಮಿಕ ಉರ್ದು ಶಾಲೆಯಲ್ಲಿ 7 ವಿದ್ಯಾರ್ಥಿಗಳು, ಹೊಸಕೊಪ್ಪಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 9 ವಿದ್ಯಾರ್ಥಿಗಳು, ಕೆಸ್ತೂರು ಗೇಟ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 9 ವಿದ್ಯಾರ್ಥಿಗಳು, ಶ್ಯಾಬಾಳು ಸರ್ಕಾರಿ ಕಿರಿಯ ಪ್ರಾಥಮಿಕ ಉರ್ದು ಶಾಲೆಯಲ್ಲಿ 4 ವಿದ್ಯಾರ್ಥಿಗಳು, ಕರ್ಪೂರವಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಉರ್ದು ಶಾಲೆಯಲ್ಲಿ 6 ವಿದ್ಯಾರ್ಥಿಗಳು, ಹನಸೋಗೆ ಸರ್ಕಾರಿ ಕಿರಿಯ ಪ್ರಾಥಮಿಕ ಉರ್ದು ಶಾಲೆಯಲ್ಲಿ 6 ವಿದ್ಯಾರ್ಥಿಗಳು ಮತ್ತು ಎರೆಮನುಗನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಉರ್ದು ಶಾಲೆಯಲ್ಲಿ 6 ಮಂದಿ ವ್ಯಾಸಂಗ ಮಾಡುತ್ತಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry