ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

31 ಗೋಲು ಬಿಟ್ಟ ಚೇನ್!

Last Updated 26 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ: `ಓಂಗ್ ಸಮುಂದ್ರ ಸತ್ಯ ಪುತ್ರ ಪೆಂಗ್ ಚೇನ್~ ಇದು ಸಿಂಗಪುರ ಪುರುಷರ ಹಾಕಿ ತಂಡದ ಗೋಲ್‌ಕೀಪರ್ ಹೆಸರು.

ಹಾಕಿ ಇಂಡಿಯಾ ನೀಡಿರುವ ತಂಡದ ಪಟ್ಟಿಯಲ್ಲಿರುವ ಪ್ರಕಾರ ಇಂಗ್ಲಿಷ್‌ನಲ್ಲಿ ಅವರ ಹೆಸರು ಬರೆಯಲು 29 ಅಕ್ಷರಗಳು ಬೇಕು. ಅವರ ಉದ್ದ ಹೆಸರಿಗೂ, ಅವರ ಗೋಲ್‌ಕೀಪಿಂಗ್‌ಗೂ ನಿಕಟವಾದ ಸಂಬಂಧವಿದೆ.  ಭಾನುವಾರ ಮುಕ್ತಾಯವಾದ ಒಲಿಂಪಿಕ್ ಅರ್ಹತಾ ಟೂರ್ನಿಯಲ್ಲಿ ಎದುರಾಳಿಗಳಿಗೆ ಬಿಟ್ಟುಕೊಟ್ಟ ಗೋಲುಗಳ ಸಂಖ್ಯೆಯೂ  ಅಷ್ಟೇ ಹೆಚ್ಚು. ಆರು ಪಂದ್ಯಗಳಲ್ಲಿ ಅವರು 31 ಗೋಲುಗಳನ್ನು ಕೊಟ್ಟರೆ, ಅವರ ಸಹ ಗೋಲ್‌ಕೀಪರ್ ರಾಬಿನ್ ವೆನ್ ಚುಂಗ್ 28 ಗೋಲುಗಳನ್ನು ಎದುರಾಳಿ ತಂಡಗಳಿಗೆ ಕಾಣಿಕೆ ನೀಡಿದ್ದಾರೆ.

ಟೂರ್ನಿಯಲ್ಲಿ ಕೊನೆಯ ಸ್ಥಾನ ಪಡೆದ ಸಿಂಗಪುರ ತಂಡದ ಎಲ್ಲ ಆಟಗಾರರೂ ಹೊಸಬರು. ವಿಶ್ವವಿದ್ಯಾಲಯಗಳಿಂದ ಆಯ್ಕೆ ಮಾಡಿ ಕಟ್ಟಿದ ಈ ತಂಡದ ಎಲ್ಲ ಆಟಗಾರರು ತಮ್ಮ ಪದಾರ್ಪಣೆಯನ್ನು ಟೂರ್ನಿಯ ಮೊದಲ ಪಂದ್ಯದಲ್ಲಿ ಮಾಡಿದ್ದರು. ಆ ಪಂದ್ಯದಲ್ಲಿ ಭಾರತ ತಂಡವು 15 ಗೋಲುಗಳನ್ನು ಗಳಿಸಿತ್ತು.
 
ನಂತರ ಕೆನಡಾ ತಂಡವು 11 ಗೋಲು ಗಳಿಸಿತ್ತು, ಭಾನುವಾರ 5 ಮತ್ತು 6ನೇ ಸ್ಥಾನದ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಇಟಲಿ ತಂಡವು 5 ಗೋಲು ಗಳಿಸಿತು. 

`ಈ ಟೂರ್ನಿಯಲ್ಲಿ ಇಷ್ಟೊಂದು ಗೋಲು ಬಿಟ್ಟುಕೊಟ್ಟಿದ್ದು ಬೇಸರವೇನಿಲ್ಲ. ಅದರಿಂದ ನಮಗೆ ಕಲಿಯಲು ಬಹಳಷ್ಟು ಸಿಕ್ಕಿತು. ಮುಂದಿನ ದಿನಗಳಲ್ಲಿ ನಮ್ಮನ್ನು ಸುಧಾರಣೆ ಮಾಡಿಕೊಳ್ಳಲು ಅವಕಾಶ ಸಿಕ್ಕಿತು~ ಸ್ಯಾಮ್ ಮತ್ತು ರಾಬಿನ್ `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT