33 ಲಕ್ಷ ವರ್ಷ ಹಳೆಯ ಕಲ್ಲಿನ ವಸ್ತುಗಳು ಪತ್ತೆ

7

33 ಲಕ್ಷ ವರ್ಷ ಹಳೆಯ ಕಲ್ಲಿನ ವಸ್ತುಗಳು ಪತ್ತೆ

Published:
Updated:

ವಾಷಿಂಗ್ಟನ್‌ (ಐಎಎನ್‌ಎಸ್‌): ಪೂರ್ವ ಆಫ್ರಿಕಾದಲ್ಲಿ 33 ಲಕ್ಷ ವರ್ಷಗಳಿಗೂ ಹಿಂದಿನ ಕಲ್ಲಿನ ಚೂಪಾದ ಆಯುಧಗಳು ಮತ್ತು ಇತರ ವಸ್ತುಗಳನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಇದು ಈವರೆಗೆ ಪತ್ತೆಯಾಗಿರುವ ಅತ್ಯಂತ ಹಳೆಯ ವಸ್ತುಗಳು.ಚೂಪಾದ ಅಂಚು ಹೊಂದಿರುವ ಉಪಕರಣಗಳನ್ನು ತಯಾರಿಸುವ ಕುರಿತು ಚಿಂತಿಸುವ ಶಕ್ತಿ ಮೂಲ ಮಾನವರಿಗೂ ಇತ್ತು ಎನ್ನುವುದಕ್ಕೆ ಈ ಸಲಕರಣೆಗಳು ಸಾಕ್ಷಿಯಾಗಿವೆ. ಕೀನ್ಯಾದ ವಾಯವ್ಯ ಭಾಗದಲ್ಲಿ ಇವನ್ನು ಪತ್ತೆ ಮಾಡಲಾಗಿದೆ.ಮೂಲ ಮಾನವನ ವರ್ತನೆ‌‌ ಮತ್ತು ಸಾಮರ್ಥ್ಯದ ಬಗ್ಗೆ ನಮಗೆ ಈವರೆಗೆ ಗೊತ್ತಿಲ್ಲದಿರುವ ಅಂಶಗಳತ್ತ ಈ ವಸ್ತುಗಳು ಬೆಳಕು ಚೆಲ್ಲುತ್ತದೆ. ನಮ್ಮ ಪೂರ್ವಜರಲ್ಲಿ ಜ್ಞಾನ ಅಭಿವೃದ್ಧಿಯಾಗಿರುವ ಪ್ರಕ್ರಿಯೆ ಬಗ್ಗೆ ಇದು ಹೆಚ್ಚಿನ ಮಾಹಿತಿ ಒದಗಿಸಬಹುದು ಎಂದು ನ್ಯೂಯಾರ್ಕ್‌ನಲ್ಲಿರುವ ಸ್ಟೋನಿ ಬ್ರೂಕ್‌ ವಿಶ್ವವಿದ್ಯಾಲಯದ ತುರ್ಕನ್‌ ಬೇಸಿನ್‌ ಇನ್‌ಸ್ಟಿಟ್ಯೂಟ್‌ನ ಸಂಶೋಧಕಿ ಸೋನಿಯಾ ಹರ್ಮಂಡ್‌ ಹೇಳಿದ್ದಾರೆ.ಈ ಅಧ್ಯಯನ ‘ನೇಚರ್‌’ ನಿಯತಕಾಲಿಕದಲ್ಲಿ ಪ್ರಕಟವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry