ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

34 ಕಂಪೆನಿಗಳಿಗೆ ರಾಮದೇವ್ ಸಹಚರ ಮುಖ್ಯಸ್ಥ

Last Updated 8 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್): ಯೋಗಗುರು ರಾಮದೇವ್ ನಿರ್ದೇಶಕರೆಂದು ಹೇಳುವ ಯಾವ ಕಂಪೆನಿಯೂ ನೋಂದಣಿ ಆಗಿಲ್ಲ. ಆದರೆ ಅವರ ಆಪ್ತ ಸಹಚರ ಬಾಲಕೃಷ್ಣ 34 ಕಂಪೆನಿಗಳ ಮುಖ್ಯಸ್ಥರಾಗಿದ್ದು ಈ ಕಂಪೆನಿಗಳು ಒಟ್ಟು ರೂ 265 ಕೋಟಿ ವಹಿವಾಟು ನಡೆಸುತ್ತಿವೆ ಎಂದು ಸರ್ಕಾರ ಗುರುವಾರ ಹೇಳಿದೆ.

`ರಾಮದೇವ್ ನಿರ್ದೇಶಕರಾಗಿರುವ  ಯಾವ ಕಂಪೆನಿಯೂ ರಾಷ್ಟ್ರದಲ್ಲಿ ನೋಂದಣಿಯಾಗಿಲ್ಲ. ಆದರೆ ರಾಮದೇವ್ ಅವರ ಸಹಚರ ಬಾಲಕೃಷ್ಣ ನಿರ್ದೇಶಕರಾಗಿರುವ 34 ಕಂಪೆನಿಗಳು  ನೋಂದಣಿಯಾಗಿವೆ~ ಎಂದು ಕಂಪೆನಿ ವ್ಯವಹಾರಗಳ ರಾಜ್ಯ ಖಾತೆ ಸಚಿವ ಆರ್.ಪಿ.ಎನ್. ಸಿಂಗ್ ಲೋಕಸಭೆಗೆ ಲಿಖಿತ ಉತ್ತರ ನೀಡಿದ್ದಾರೆ.

ರಾಮದೇವ್ ಮತ್ತು ಬಾಲಕೃಷ್ಣ ಅವರು ಹೊಂದಿರುವ ಕಂಪೆನಿಗಳ ಸಂಖ್ಯೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, `ಅಲ್ಪ ಅವಧಿಯಲ್ಲಿ ಈ ಕಂಪೆನಿಗಳು ಹೆಚ್ಚಿನ ವಹಿವಾಟು ಗಳಿಸಿರುವುದಕ್ಕೆ ಕಾರಣವನ್ನು ಈ ಹಂತದಲ್ಲಿ ಗುರುತಿಸಲು ಸಾಧ್ಯವಿಲ್ಲ~ ಎಂದೂ ಅವರು ಹೇಳಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT