3568 ಅಲ್ಪಸಂಖ್ಯಾತ ಫಲಾನುಭವಿಗಳಿಗೆ ಸೌಲಭ್ಯ

7

3568 ಅಲ್ಪಸಂಖ್ಯಾತ ಫಲಾನುಭವಿಗಳಿಗೆ ಸೌಲಭ್ಯ

Published:
Updated:

ಚಿಕ್ಕಬಳ್ಳಾಪುರ:  ಮೂರು ವರ್ಷಗಳ ಅವಧಿಯಲ್ಲಿ ಜಿಲ್ಲೆಯ 3,568 ಫಲಾನುಭವಿಗಳಿಗೆ ಒಟ್ಟು 423.76 ಲಕ್ಷ ರೂಪಾಯಿ ಮೌಲ್ಯದ ಯೋಜನೆ ಯನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಕರ್ನಾ ಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್.ಬಿ.ಅಬೂಬಕ್ಕರ್ ತಿಳಿಸಿದರು.`ಗಂಗಾ ಕಲ್ಯಾಣ ಯೋಜನೆಯಡಿ 1900 ಫಲಾನುಭವಿಗಳಿಗೆ 19 ಕೋಟಿ ರೂಪಾಯಿ ವೆಚ್ಚದಲ್ಲಿ ವೈಯಕ್ತಿಕ ಕೊಳವೆಬಾವಿಗಳನ್ನು ಕೊರೆಯಲು ಗುರಿ ಹೊಂದಲಾಗಿದೆ. ಇದಕ್ಕೆ ಪೂರಕವಾಗಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ~ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.`ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಎಲ್ಲ 30 ಜಿಲ್ಲೆಗಳಲ್ಲೂ ನಿಗಮದ ಕಚೇರಿಗಳನ್ನು ತೆರೆಯಲಾಗಿದೆ. ವಿವಿಧ ರೀತಿಯ ಯೋಜನೆಗಳನ್ನು ಅನುಷ್ಠಾನಗೊಳಿಸುವುದರ ಮೂಲಕ ಅಲ್ಪಸಂಖ್ಯಾತರ ಏಳ್ಗೆಗೆ ಶ್ರಮಿಸಲಾಗುತ್ತಿದೆ ಎಂದು ಅವರು ತಿಳಿಸಿದರು.`ನಿಗಮದಿಂದ ಈವರೆಗೆ ಫಲಾನುಭವಿಗಳಿಗೆ ಕೋಟ್ಯಂತರ ರೂಪಾಯಿ ಸಾಲ ನೀಡಿದ್ದು, 160 ಕೋಟಿ ರೂಪಾಯಿ ಸಾಲ ಮರು ಪಾವತಿಯಾಗಬೇಕಿದೆ. ಆರಂಭದಲ್ಲಿ ಪ್ರತಿ ತಿಂಗಳು 30 ಲಕ್ಷ ರೂಪಾಯಿ ಮಾತ್ರವೇ ಮರು ಪಾವತಿಯಾಗುತಿತ್ತು. ಆದರೆ ಈಗ ರೂ.2 ಕೋಟಿ  ಹೆಚ್ಚು ಹಣ ಮರುಪಾವತಿ ಮಾಡಲಾಗುತ್ತಿದೆ~ ಎಂದರು.ವೈರಿಂಗ್ ಮಹತ್ವ ಅರಿಯಲು ಸಲಹೆಮುಳಬಾಗಲು: ಬೆಂಕಿಯ ಅಪಾಯದಿಂದ ಸಂಪತ್ತು ಮತ್ತು ಜೀವದ ಹಾನಿಯಾಗದಂತೆ ಉಳಿಸಿಕೊಳ್ಳಲು ಸರಿಯಾದ ವೈರಿಂಗ್ ಪದ್ಧತಿ ಅನುಸರಿಸುವುದು ಅಗತ್ಯ ಎಂದು ಉದ್ಯಮಿ ಜಗದೀಶ್ವರ್‌ರಾವ್ ಹೇಳಿದರು. ಐಸಿಪಿಸಿಐ ವತಿಯಿಂದ ಪಟ್ಟಣದಲ್ಲಿ ಗುರುವಾರ ನಡೆದ  ಕಾರ್ಯಾಗಾರದಲ್ಲಿ ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry