ಗುರುವಾರ , ಮೇ 26, 2022
22 °C

36 ಗುಡಿಸಲುಗಳು ಬೆಂಕಿಗೆ ಆಹುತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಂಡವಪುರ: ತಾಲ್ಲೂಕಿನ ಚಿನಕುರಳಿ ಸಮೀಪದಲ್ಲಿರುವ ಬೋವಿ ಜನಾಂಗಕ್ಕೆ ಸೇರಿದ 36 ಗುಡಿಸಲುಗಳಿಗೆ ಸೋಮ ವಾರ ಬೆಂಕಿ ಬಿದ್ದ ಪರಿಣಾಮ ಸಂಪೂರ್ಣ ಭಸ್ಮವಾಗಿ ಮಕ್ಕಳು ಸೇರಿದಂತೆ ಎಲ್ಲಾ ಕುಟುಂಬಗಳು ಬೀದಿಪಾಲಾಗಿವೆ. ಬೇಬಿಬೆಟ್ಟದ ರಸ್ತೆಯಲ್ಲಿ ವಾಸವಾಗಿದ್ದ ಬೋವಿ ಜನರ ಗುಡಿಸಲಿನಲ್ಲಿದ್ದ ಬಟ್ಟೆ, ಪಾತ್ರೆಗಳು, ದಿನಸಿ, ಶಾಲಾ ಮಕ್ಕಳ ಪುಸ್ತಕಗಳು ಸೇರಿದಂತೆ ಅನೇಕ ಸಾಮಗ್ರಿ ಸಂಪೂರ್ಣ ನಾಶವಾಗಿ ಅಪಾರ ನಷ್ಟ ಉಂಟಾಗಿದೆ. ಗುಡಿಸಲು ಕಳೆದು ಕೊಂಡಿರುವ ಜನರು ಚಿನಕುರಳಿ ಸುತ್ತಮುತ್ತ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಲ್ಲಿ ದಿನಗೂಲಿಕಾರರಾಗಿ ಕೂಲಿ ಕೆಲಸ ಮಾಡುತ್ತಿದ್ದರು.ಎಂದಿನಂತೆ ಕೂಲಿ ಕೆಲಸಕ್ಕೆ ಹೋಗಿದ್ದು ಗುಡಿಸಲಿನಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಬೋವಿ ಜನಾಂಗದವರು ಸುಮಾರು ಕಳೆದ 20 ವರ್ಷಗಳಿಂದ ಸುತ್ತಮುತ್ತಲು ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದು, ದಿನಕ್ಕೆ 150 ರೂ. ಸಂಪಾದನೆ ಮಾಡಿಕೊಂಡು ತಮ್ಮ ಜೀವನ ಸಾಗಿಸುತ್ತಿದ್ದರು. ಇವರಿಗೆ ಸ್ವಂತ ಮನೆಗಳಿಲ್ಲದ ಕಾರಣ ಖಾಸಗಿ ವ್ಯಕ್ತಿಯ ಜಮೀನಿನಲ್ಲಿ ಗುಡಿಸಲುಗಳನ್ನು ನಿರ್ಮಿಸಿಕೊಂಡಿದ್ದರು.  36 ಕುಟುಂಬಗಳು ಗುಡಿಸಲುಗಳನ್ನು ಸಂಪೂರ್ಣವಾಗಿ ಕಳೆದುಕೊಂಡು ಇದೀಗ ಮರ ಹಾಗೂ ಬಂಡೆಗಳ ಕೆಳಗೆ ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣಗೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.