36 ಬಿ.ಇಡಿ ಕಾಲೇಜು ಪರಿಶೀಲನೆ

7
ಶೈಕ್ಷಣಿಕ ಸಾಲಿನಲ್ಲಿ ಸಂಯೋಜನೆ ನವೀಕರಣ

36 ಬಿ.ಇಡಿ ಕಾಲೇಜು ಪರಿಶೀಲನೆ

Published:
Updated:

ಬೆಂಗಳೂರು: 2013–14ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸಂಯೋಜನೆ ನವೀಕರಣ ಮಾಡುವ ಸಂಬಂಧ ಬೆಂಗಳೂರು ವಿಶ್ವವಿದ್ಯಾಲಯದ 36 ಬಿ.ಇಡಿ ಕಾಲೇಜುಗಳಿಗೆ ಸ್ಥಳೀಯ ವಿಚಾರಣಾ ಸಮಿತಿ (ಎಲ್‌ಐಸಿ) ತೆರಳಿ ಪರಿಶೀಲನೆ ನಡೆಸಲಿದೆ. ಸಮಿತಿಯ ವರದಿಯ ಆಧಾರದಲ್ಲಿ ಸಂಯೋಜನೆ ನವೀಕರಣ ಮಾಡಲಾಗುತ್ತದೆ.‘ವಿ.ವಿ ವ್ಯಾಪ್ತಿಯಲ್ಲಿ 130ಕ್ಕೂ ಅಧಿಕ ಬಿ.ಇಡಿ ಕಾಲೇಜುಗಳಿವೆ. 22 ಕಾಲೇಜು­ಗಳು ಮಾತ್ರ ಅಗತ್ಯ ಮೂಲಸೌಕರ್ಯ ಹೊಂದಿವೆ ಎಂದು ಬಿ.ಇಡಿ ಕಾರ್ಯ­ಪಡೆ ವರದಿ ಸಲ್ಲಿಸಿತ್ತು. 52 ಕಾಲೇಜು­ಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿತ್ತು. ಇದರಲ್ಲಿ 36 ಕಾಲೇಜುಗಳು ಮಾನ್ಯತೆ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿದ್ದವು. ಈ ಕಾಲೇಜುಗಳಿಗೆ ತಜ್ಞರ ಸಮಿತಿಯನ್ನು ಕಳುಹಿಸಲಾಗಿತ್ತು. 100(ಶೇ 50)­ಕ್ಕಿಂತ ಅಧಿಕ ಅಂಕ ಗಳಿಸಿದ ಕಾಲೇಜು­ಗಳಿಗೆ ಎಲ್‌ಐಸಿ ಕಳುಹಿಸಲು ನಿರ್ಧ­ರಿಸ ಲಾ­ಗಿದೆ’ ಎಂದು ಕುಲಪತಿ ಪ್ರೊ.ಬಿ.­ತಿಮ್ಮೇ­ಗೌಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.‘14 ಕಾಲೇಜುಗಳಿಗೆ ಸಮಿತಿ ಕಳುಹಿಸಲು ಮಂಗಳವಾರ ನಡೆದ ಅಕಾಡೆಮಿಕ್‌ ಕೌನ್ಸಿಲ್‌ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು. ಬುಧವಾರ ನಡೆದ ಸಿಂಡಿಕೇಟ್‌ ಸಭೆಯಲ್ಲಿ ಕೆಲವು ಸದಸ್ಯರು ಶೇ 40ಕ್ಕಿಂತ ಅಧಿಕ ಕಾಲೇಜು­ಗಳಿಗೆ ಸಮಿತಿ ಕಳುಹಿಸಬೇಕು ಎಂದು ಸಲಹೆ ನೀಡಿದರು.ಕೊನೆಗೆ ಶೇ 50 ಅಂಕ ಗಳಿಸಿದ ಕಾಲೇಜುಗಳಿಗೆ ಮಾತ್ರ ಸಮಿತಿ ಕಳುಹಿಸಲು ತೀರ್ಮಾ­ನಿಸ­ಲಾಯಿತು. ಈ ಕಾಲೇಜುಗಳು ಎನ್‌ಸಿಟಿಇ ಮಾನ್ಯತೆ, ಮೂಲ­ಸೌಕರ್ಯ ಹೊಂದಿದ್ದರೆ ಮಾನ್ಯತೆ ನವೀಕರಣ ಆಗಲಿದೆ’ಎಂದರು.

ಮುಂದಿನ ದಿನಗಳಲ್ಲಿ ತಜ್ಞರ ಸಮಿತಿ ರಚಿಸುವುದಿಲ್ಲ. ಸ್ಥಳೀಯ ವಿಚಾರಣಾ ಸಮಿತಿಯಲ್ಲೇ ತಜ್ಞರನ್ನು ನೇಮಿಸಲಾ­ಗುವುದು ಎಂದರು.ಬಿ.ಇಡಿ ಮೌಲ್ಯಮಾಪನದ ಸಂದರ್ಭ ಬೇಕಾಬಿಟ್ಟಿ ಅಂಕ ನೀಡಿ ಅವ್ಯವಹಾರ ನಡೆಸುವ ಮೌಲ್ಯಮಾಪ­ಕ­ರನ್ನು ಮೂರು ವರ್ಷ ಡಿಬಾರ್‌ ಮಾಡಲಾಗುವುದು ಹಾಗೂ ಅವರಿಗೆ ದಂಡ ವಿಧಿಸಲಾಗುವುದು ಎಂದರು.ಮೂಲಸೌಕರ್ಯ: ಬೆಂಗ­ಳೂರು ವಿವಿ ಸ್ಥಾಪನೆಯಾಗಿ ಈ ವರ್ಷ 50 ವರ್ಷ ಆಗಲಿದೆ. ಸಂಭ್ರಮ ಆಚರ­ಣೆಗೆ ಒಂದು ಸಮಿತಿಯನ್ನು ರಚಿಸಿ ಮೂಲ­ಸೌಕರ್ಯಕ್ಕೆ ಒತ್ತು ನೀಡಲಾಗು­ವುದು. 4–5 ವರ್ಷಗಳಲ್ಲಿ ಮೂಲ­ಸೌಕರ್ಯ ಅಭಿವೃದ್ಧಿಪಡಿಸುವಕಾರ್ಯ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ.ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸಮ­ರೋಪಾ­ದಿಯಲ್ಲಿ ಈ ಕೆಲಸ ಮಾಡ­ಲಾಗು­ವುದು. 6 ತಿಂಗಳಲ್ಲಿ ಬಾಲಕರ ಹಾಸ್ಟೆಲ್‌ ಕಾರ್ಯ ಪೂರ್ಣಗೊಳ್ಳಲಿದೆ. ಎಲ್ಲ ವಿಭಾ­ಗ­ಗಳಲ್ಲಿ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮೇಲ್ದ­ರ್ಜೆಗೆ ಏರಿಸ­­ಲಾಗುವುದು. ಹಾಳಾಗಿರುವ ಪರ್ಯಾಯ ರಸ್ತೆ ದುರಸ್ತಿ ಮಾಡಲಾಗುವುದು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry