ಶನಿವಾರ, ಏಪ್ರಿಲ್ 17, 2021
32 °C

36 ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಸಾಹಿತಿ ತೈಲೂರು ವೆಂಕಟಕೃಷ್ಣ, ಪ್ರಗತಿಪರ ರೈತ ಬಿ.ಎಂ.ನಂಜೇಗೌಡ, ಮೌಂಟ್ ಎವರೆಸ್ಟ್ ಶಿಖರ ಏರಿದ ಸಾಹಸಿ ಸ್ಮಿತಾ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಒಟ್ಟು 36 ಮಂದಿ 2012ನೇ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಡಾ.ಎಚ್.ಪಿ.ಮಂಜುಳಾ (ಯುವಜನ ಸೇವೆ) ಹಾಗೂ ಕೃಷ್ಣರಾಜಪೇಟೆ ತಹಶೀಲ್ದಾರ್ ಡಾ. ಎಚ್.ಎಲ್.ನಾಗರಾಜ್ (ಆಡಳಿತ ಸೇವೆ) ಅವರೂ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿದ್ದಾರೆ.ಪ್ರಶಸ್ತಿ ಪುರಸ್ಕೃತರ ವಿವರ:

ತೈಲೂರು ವೆಂಕಟಕೃಷ್ಣ (ಸಾಹಿತ್ಯ ಕ್ಷೇತ್ರ), ಡಾ. ರಾಮಲಿಂಗಯ್ಯ (ವಿಜ್ಞಾನ ಮತ್ತು ತಾಂತ್ರಿಕತೆ), ಪ್ರೊ. ಡಿ.ದೊಡ್ಡಲಿಂಗೇಗೌಡ (ಮಳವಳ್ಳಿ, ಸಾಹಿತ್ಯ), ಶಿ. ಕುಮಾರಸ್ವಾಮಿ (ಕೃಷ್ಣರಾಜಪೇಟೆ, ಸಾಹಿತ್ಯ), ಹರವು ದೇವೇಗೌಡ (ಹರವು, ಸಾಹಿತ್ಯ), ಮಲ್ಲಾರಾಧ್ಯ ಪ್ರಸನ್ನ (ಮಂಡ್ಯ, ಸಾಂಸ್ಕೃತಿಕ ಸಂಘಟನೆ), ಪ್ರೊ.ಡಿ.ಮಂಚೇಗೌಡ (ಹಲಗೂರು, ಸಮಾಜಸೇವೆ), ಬಿ.ಎಂ.ನಂಜೇಗೌಡ (ಬೊಪ್ಪಸಮುದ್ರ, ಸಾವಯವ ಕೃಷಿ).

ಹಿರೇಮರಳಿ ರಮೇಶ್ (ಹಿರೇಮರಳಿ, ಸಂಘಟನೆ), ಕೆ.ವಿ.ರಾಮೇಗೌಡ (ಬೆಳಗೊಳ, ಸಮಾಜಸೇವೆ), ವ.ನಂ.ಶಿವರಾಮು (ಮಂಡ್ಯ, ಜನಪದ), ಬಲ್ಲೇನಹಳ್ಳಿ ಮಂಜುನಾಥ್ (ಬಲ್ಲೇನಹಳ್ಳಿ, ಸಾಹಿತ್ಯ), ಅನಾರ್ಕಲಿ ಸಲೀಂ (ಶ್ರೀರಂಗಪಟ್ಟಣ, ಸಾಹಿತ್ಯ), ಚಂದ್ರಶೇಖರಯ್ಯ (ಪಾಂಡವಪುರ, ಶಿಕ್ಷಣ ಮತ್ತು ಸಾಂಸ್ಕೃತಿಕ ಚಟುವಟಿಕೆ), ಗುರುಸಿದ್ದಯ್ಯ (ಬೆಸಗರಹಳ್ಳಿ, ಜಾನಪದ), ಶಿವಲಿಂಗೇಗೌಡ (ಪೇಟೆ ಬೀದಿ ಮಂಡ್ಯ, ರಂಗಭೂಮಿ), ಅಂದಾನಿ (ಹೊಸಬೂದನೂರು, ತಮಟೆವಾದನ), ವಿ.ಕೆ.ರಾಮು (ವಳಗೆರೆಹಳ್ಳಿ, ತತ್ವಪದ ಗಾಯಕ), ಎಚ್. ರಾಮಯ್ಯ (ದೇವಲಾಪುರ, ತೊಗಲು ಬೊಂಬೆಯಾಟ), ಪಿ.ಜೆ.ಜಯರಾಮು (ಪಡುವಲಪಟ್ಟಣ, ರಂಗಭೂಮಿ).

ಮತ್ತೀಕೆರೆ ಜಯರಾಮ್ (ಪತ್ರಿಕೋದ್ಯಮ), ಕೆ.ವಿ.ಕುಮಾರ್ (ಮಂಡ್ಯ, ಪತ್ರಿಕೋದ್ಯಮ), ಶ್ರೀನಿವಾಸ್ (ಮಂಡ್ಯ, ಪತ್ರಿಕಾ ಛಾಯಾಗ್ರಾಹಕರು), ಎಂ.ಎಲ್.ಗುರಪ್ಪಾಜಿ (ಮಳವಳ್ಳಿ, ಸಮಾಜ ಸೇವೆ), ಪ್ರಕಾಶ್ ಚಿಕ್ಕಪಾಳ್ಯ (ಚಿಕ್ಕಪಾಳ್ಯ, ಚಿತ್ರಕಲಾ ವಿನ್ಯಾಸ), ಪದ್ಮಾ ಶ್ರೀನಿವಾಸ್ (ಮಂಡ್ಯ, ಸಾಂಸ್ಕೃತಿಕ ಚಟುವಟಿಕೆ), ಎನ್.ಶಾರದಾ (ಮಂಡ್ಯ, ಶಾಸ್ತ್ರೀಯ ಸಂಗೀತ), ರಾಣಿ ಚಂದ್ರಶೇಖರ್ (ಕೃಷಿ/ಉದ್ಯಮಶೀಲತೆ).ಸ್ಮಿತಾ (ವಡೇರಹಳ್ಳಿ, ಸಾಹಸ), ಡಾ. ಮಂಜುಳಾ (ವೈದ್ಯಾಧಿಕಾರಿ ತಗ್ಗಹಳ್ಳಿ, ವೈದ್ಯಕೀಯ ಸೇವೆ), ದೇವಮ್ಮ (ಕಿರಿಯ ಆರೋಗ್ಯ ಸಹಾಯಕಿ ಚಿನಕುರಳಿ, ಶುಶ್ರೂಷೆ), ಗಾಂಧಿ ಭವನ (ಮಂಡ್ಯ, ಸಂಘಸಂಸ್ಥೆ), ಭ್ರಮರಾಂಭ ಸ್ತ್ರೀಶಕ್ತಿ ಜಾನಪದ ಕಲಾ ತಂಡ, ಬೊಪ್ಪಸಮುದ್ರ, ಸಂಘ-ಸಂಸ್ಥೆ), ವಿನ್ಸೆಂಟ್ (ಮಂಡ್ಯ, ಸಂಕೀರಣ). 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.