ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

37 ಅಭ್ಯರ್ಥಿಗಳಿಂದ 49 ನಾಮಪತ್ರ ಸಲ್ಲಿಕೆ

Last Updated 18 ಏಪ್ರಿಲ್ 2013, 6:18 IST
ಅಕ್ಷರ ಗಾತ್ರ

ಚಾಮರಾಜನಗರ: ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಬುಧವಾರ ಜಿಲ್ಲೆಯಲ್ಲಿ ಒಟ್ಟು 37 ಅಭ್ಯರ್ಥಿಗಳಿಂದ 49 ನಾಮಪತ್ರ ಸಲ್ಲಿಕೆಯಾಗಿವೆ.

ಚಾಮರಾಜನಗರ ಕ್ಷೇತ್ರ- 21, ಕೊಳ್ಳೇಗಾಲ ಕ್ಷೇತ್ರ- 13, ಗುಂಡ್ಲುಪೇಟೆ ಕ್ಷೇತ್ರ- 5 ಹಾಗೂ ಹನೂರು ಕ್ಷೇತ್ರದಲ್ಲಿ 10 ನಾಮಪತ್ರ ಸಲ್ಲಿಕೆಯಾಗಿವೆ.

ಚಾಮರಾಜನಗರ ಕ್ಷೇತ್ರ- 12 ಅಭ್ಯರ್ಥಿಗಳು, ಕೊಳ್ಳೇಗಾಲ ಕ್ಷೇತ್ರ- 11, ಗುಂಡ್ಲುಪೇಟೆ ಕ್ಷೇತ್ರ- 5 ಹಾಗೂ ಹನೂರು ಕ್ಷೇತ್ರದಲ್ಲಿ 9 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಕೊಳ್ಳೇಗಾಲ ಕ್ಷೇತ್ರದಲ್ಲಿ ಎನ್. ಮಹೇಶ್ (ಬಿಎಸ್‌ಪಿ), ಎಸ್. ಬಾಲರಾಜು (ಕೆಜೆಪಿ) ತಲಾ 2 ಸೆಟ್ ನಾಮಪತ್ರ ಸಲ್ಲಿಸಿದ್ದಾರೆ. ಚಾಮರಾಜು (ಜೆಡಿಎಸ್), ಪಿ. ಬಾಲರಾಜು (ಪಕ್ಷೇತರ), ಸುರೇಶ್‌ಕುಮಾರ್ (ಪಕ್ಷೇತರ), ಜಿ. ನಿಂಗರಾಜು (ಭಾರತೀಯ ಡಾ.ಬಿ.ಆರ್. ಅಂಬೇಡ್ಕರ್ ಪಾರ್ಟಿ), ಕೂಡ್ಲೂರು ಶ್ರೀಧರಮೂರ್ತಿ (ಬಿಎಸ್‌ಆರ್ ಕಾಂಗ್ರೆಸ್), ಎಂ. ನಾಗರತ್ನಾ (ಪಕ್ಷೇತರ), ಎಲ್. ಚಂದ್ರಶೇಖರ್ (ಪಕ್ಷೇತರ), ಕೃಷ್ಣಸ್ವಾಮಿ (ಪಕ್ಷೇತರ), ಮಹದೇವ (ಪಕ್ಷೇತರ) ತಲಾ ಒಂದು ನಾಮಪತ್ರ ಸಲ್ಲಿಸಿದ್ದಾರೆ.

ಹನೂರು ಕ್ಷೇತ್ರದಲ್ಲಿ ಬಿ.ಕೆ. ಶಿವಕುಮಾರ್ (ಬಿಜೆಪಿ) 2 ಸೆಟ್ ನಾಮಪತ್ರ ಸಲ್ಲಿಸಿದ್ದಾರೆ. ಎಂ. ರವಿ (ಎಐಎಡಿಎಂಕೆ), ಪೊನ್ನಾಚಿ ಮಹದೇವಸ್ವಾಮಿ (ಕೆಜೆಪಿ), ಡಾ.ಎಸ್. ದತ್ತೇಶ್‌ಕುಮಾರ್ (ಪಕ್ಷೇತರ), ಆರ್. ಸಿದ್ದಪ್ಪ (ಬಿಎಸ್‌ಆರ್ ಕಾಂಗ್ರೆಸ್), ಬೀರೇಶ್ (ಬಿಎಸ್‌ಆರ್ ಕಾಂಗ್ರೆಸ್), ಎಸ್. ಪುಟ್ಟರಾಜು (ಬಿಎಸ್‌ಪಿ), ಟಿ. ಮುತ್ತುರಾಜ್ (ಪಕ್ಷೇತರ), ಭುವನೇಂದ್ರ (ಭಾರತೀಯ ಡಾ.ಬಿ.ಆರ್. ಅಂಬೇಡ್ಕರ್ ಪಾರ್ಟಿ) ತಲಾ ಒಂದು ನಾಮಪತ್ರ ಸಲ್ಲಿಸಿದ್ದಾರೆ.

ಗುಂಡ್ಲುಪೇಟೆ ಕ್ಷೇತ್ರದಲ್ಲಿ ಎಚ್.ಜಿ. ಮಲ್ಲಿಕಾರ್ಜುನಸ್ವಾಮಿ (ಬಿಜೆಪಿ), ಸುಭಾಷ್ (ಪಕ್ಷೇತರ), ಸುರೇಶ (ಬಿಎಸ್‌ಆರ್ ಕಾಂಗ್ರೆಸ್), ಮರಿದಾಸಯ್ಯ (ಪಕ್ಷೇತರ), ಪಿ. ಸಂಘಸೇನ (ಆರ್‌ಪಿಐ) ತಲಾ ಒಂದು ನಾಮಪತ್ರ ಸಲ್ಲಿಸಿದ್ದಾರೆ.

ಚಾಮರಾಜನಗರ ಕ್ಷೇತ್ರದಲ್ಲಿ ಎಂ. ಹೊನ್ನೂರಯ್ಯ (ಪಕ್ಷೇತರ) 3 ಸೆಟ್ ನಾಮಪತ್ರ ಸಲ್ಲಿಸಿದ್ದಾರೆ. ಎಸ್. ಸೋಮನಾಯಕ (ಬಿಜೆಪಿ), ಎಸ್.ಪಿ. ಸಣ್ಣಮಾದಶೆಟ್ಟಿ (ಜೆಡಿಎಸ್), ಎ.ಎಚ್. ಶ್ರೀಕಂಠಮೂರ್ತಿ (ಪಕ್ಷೇತರ), ಡಿ.ಎಸ್. ದೊರೆಸ್ವಾಮಿ (ಸಮಾಜವಾದಿ ಪಕ್ಷ), ಮಹಮದ್ ಇನಾಯಿತ್ ಉಲ್ಲಾ (ಪಕ್ಷೇತರ), ಆರ್.ಪಿ. ನಂಜುಂಡಸ್ವಾಮಿ (ಬಿಎಸ್‌ಪಿ), ಎಂ.ಸಿ. ರಾಜಣ್ಣ (ಸಿಪಿಐ-ಎಂಎಲ್) ತಲಾ 2 ಸೆಟ್ ನಾಮಪತ್ರ ಸಲ್ಲಿಸಿದ್ದಾರೆ. 

ಕರುಣಾಕರ ಕೂಡೇರು (ಪಕ್ಷೇತರ), ರಾಜು (ಪಕ್ಷೇತರ), ಡಾ.ಮಹದೇವಸ್ವಾಮಿ (ಪಕ್ಷೇತರ), ಕೆ. ವೀರಭದ್ರಸ್ವಾಮಿ (ಕರ್ನಾಟಕ ಮಕ್ಕಳ ಪಕ್ಷ) ತಲಾ ಒಂದು ನಾಮಪತ್ರ ಸಲ್ಲಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿಯ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT