371(ಜೆ)ತಿದ್ದುಪಡಿ ಮಸೂದೆ:ಮತ್ತೆ ಅನುಮೋದನೆ

7

371(ಜೆ)ತಿದ್ದುಪಡಿ ಮಸೂದೆ:ಮತ್ತೆ ಅನುಮೋದನೆ

Published:
Updated:

ನವದೆಹಲಿ: ಹೈದರಾಬಾದ್- ಕರ್ನಾಟಕದ ಆರು ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 371 (ಜೆ) ತಿದ್ದುಪಡಿ ಮಸೂದೆಗೆ ಲೋಕಸಭೆ ಗುರುವಾರ ಮತ್ತೆ ಅನುಮೋದನೆ ನೀಡಿತು.

ಸಂವಿಧಾನ ತಿದ್ದುಪಡಿ ಮಸೂದೆಯನ್ನು ತಾಂತ್ರಿಕ ಕಾರಣಕ್ಕಾಗಿ ಎರಡನೇ ಸಲ ಸದನದಲ್ಲಿ ಮಂಡಿಸಿ ಒಪ್ಪಿಗೆ ಪಡೆಯಲಾಯಿತು. ಮಸೂದೆ ಕ್ರಮ ಸಂಖ್ಯೆಯನ್ನು 99ರಿಂದ  98ಕ್ಕೆ ಬದಲಾಯಿಸುವ ತಿದ್ದುಪಡಿಗೆ ಸದನ ಅನುಮೋದನೆ ನೀಡಿತು.ಪ್ರಶ್ನೋತ್ತರ ಅವಧಿ ಬಳಿಕ ಮಸೂದೆಯನ್ನು ಮತಕ್ಕೆ ಹಾಕಲಾಯಿತು. ಸದನದಲ್ಲಿದ್ದ ಎಲ್ಲ 334 ಸದಸ್ಯರು ಮಸೂದೆ ಪರ ಮತ ಹಾಕಿದರು. ಈ ಮಸೂದೆಗೆ ಡಿಸೆಂಬರ್ 18ರಂದು ಮಂಗಳವಾರ ಲೋಕಸಭೆ ಮೊದಲ ಸಲ ಒಪ್ಪಿಗೆ ನೀಡಿತ್ತು. ಅಂದು ಸದನದಲ್ಲಿದ್ದ ಎಲ್ಲ 347 ಸದಸ್ಯರು ಮಸೂದೆ ಬೆಂಬಲಿಸಿದ್ದರು. ಮರುದಿನ ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರ ಪಡೆಯಿತು.ಗುರುವಾರ ಮಸೂದೆಗೆ ಲೋಕಸಭೆ ಒಪ್ಪಿಗೆ ದೊರೆಯದಿದ್ದರೆ ಬಜೆಟ್ ಅಧಿವೇಶನದವರೆಗೂ ಕಾಯಬೇಕಿತ್ತು. ಮಸೂದೆಗೆ ರಾಷ್ಟ್ರಪತಿಯವರ ಅಂಕಿತ ಬಿದ್ದ ಬಳಿಕ ಅಧಿಸೂಚನೆ ಪ್ರಕಟವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry