ಬುಧವಾರ, ನವೆಂಬರ್ 13, 2019
18 °C
ಕೆಜೆಪಿಗೆ ಕಾಲಿಟ್ಟ ಜೆಡಿಎಸ್ ಮುಖಂಡರು...

371(ಜೆ):ವೈಜನಾಥ ಗೆಲುವು ಅಗತ್ಯ-ಮದನ

Published:
Updated:

ಗುಲ್ಬರ್ಗ: ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗಾಗಿ ಸಂವಿಧಾನದ 371ನೇ ವಿಧಿ ತಿದ್ದುಪಡಿ ಜಾರಿಗೊಳಿಸಲು ಎರಡು ದಶಕಕ್ಕೂ ದೀರ್ಘ ಕಾಲ ಹೋರಾಟ ನಡೆಸಿದ ವೈಜನಾಥ ಪಾಟೀಲ್ ಅವರನ್ನು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬೇಷರತ್ ಆಗಿ ಬೆಂಬಲಿಸುತ್ತಿದ್ದೇವೆ ಎಂದು ಜೆಡಿಎಸ್ ಮಾಜಿ ಮುಖಂಡ ಚಂದ್ರಶೇಖರ ರೆಡ್ಡಿ ದೇಶಮುಖ ಮದನ ಭಾನುವಾರ    ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ಪ್ರಸ್ತುತ ಸೇಡಂ ಕರ್ನಾಟಕ ಜನತಾ ಪಕ್ಷ ಅಭ್ಯರ್ಥಿ ವೈಜನಾಥ ಪಾಟೀಲ ಹುಟ್ಟು ಹೋರಾಟಗಾರ. 371ನೇ (ಜೆ) ವಿಧಿ ತಿದ್ದುಪಡಿಯು ಅವರ ಹೋರಾಟದ ಫಲ. ಅದನ್ನು ಸಮರ್ಪಕ ಜಾರಿಗೊಳಿಸುವ ಜವಾಬ್ದಾರಿ ಮುಂದಿನ ರಾಜ್ಯ ಸರ್ಕಾರದ ಮೇಲಿದೆ. ಅಂತಹ ಸಂದರ್ಭದಲ್ಲಿ ಪಾಟೀಲ್ ವಿಧಾನ ಸಭೆ ಪ್ರವೇಶಿಸುವುದು ಹೈದಾರಾಬಾದ್ ಕರ್ನಾಟಕದ ಜನತೆಯ ದೃಷ್ಟಿಯಿಂದ ಅತೀ ಅಗತ್ಯ ಎಂದು ವ್ಯಾಖ್ಯಾನಿಸಿದರು.ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನಡೆಯಿಂದ ಬೇಸರಗೊಂಡು ಜೆಡಿಎಸ್‌ಗೆ ವಿದಾಯ ಹೇಳಿದ್ದೇವೆ. ನಾನು, ಬೆಂಬಲಿಗರು ಹಾಗೂ ಜೊತೆಗಾರರು ಸೇರಿ  ವೈಜನಾಥ ಪಾಟೀಲ್ ಬೆಂಬಲಿಸಲು ನಿರ್ಧರಿಸಿದ್ದೇವೆ. ಏ.16ರಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೊತೆ ಮಾತುಕತೆ ನಡೆಸಿದ ಬಳಿಕ ಅಧಿಕೃತವಾಗಿ ಕೆಜೆಪಿ ಸೇರುತ್ತೇವೆ ಎಂದು ಅವರು ವಿವರಿಸಿದರು.371ನೇ ಜೆ ತಿದ್ದುಪಡಿ ಹೋರಾಟ ಹಾಗೂ ಅನುಷ್ಠಾನದ ಬಗ್ಗೆ ಜನತೆಗೆ ತಿಳಿದಿದೆ. ಇದು ಹೈಕ ಹೋರಾಟ ಸಮಿತಿಯ ಫಲವೋ ಇಲ್ಲ, ಕೊನೆ ಕ್ಷಣದ ಕಾಂಗ್ರೆಸ್ ಪ್ರಯತ್ನವೋ ಎಂಬುದನ್ನು ಜನತೆ ಈಗಾಗಲೇ ನಿರ್ಧರಿಸಿದ್ದಾರೆ. ಅವರು ಆಯೋಜಿಸಿಕೊಂಡ ಅದ್ದೂರಿ ಸನ್ಮಾನಕ್ಕೆ ಕರೆದುಕೊಂಡು ಬಂದ ಜನರೇ `371' ಗೌರವ ಯಾರಿಗೆ ಸಿಗಬೇಕಿತ್ತು? ಎಂಬುದನ್ನು ಮಾತನಾಡಿಕೊಂಡಿದ್ದಾರೆ ಎಂದು ಸೇಡಂ ವಿಧಾನಸಭಾ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ವೈಜನಾಥ ಪಾಟೀಲ್ ಹೇಳಿದರು.ಬಿ.ಎಸ್.ಯಡಿಯೂರಪ್ಪ ಹಾಗೂ ಕ್ಷೇತ್ರದ ಜನತೆಯ ಒತ್ತಾಯಕ್ಕೆ ಮಣಿದು ಸ್ಪರ್ಧಿಸುತ್ತಿದ್ದೇನೆ. ಈಗ ಕ್ಷೇತ್ರದಲ್ಲಿ ಉತ್ತಮ ವಾತಾವರಣ ರೂಪುಗೊಂಡಿದೆ. ಗುಲ್ಬರ್ಗ ಜಿಲ್ಲೆಯಲ್ಲೇ ಕೆಜೆಪಿ ಬಲಗೊಳ್ಳುತ್ತಿದೆ. ನಮಗೆ ಗೆಲುವು ಸಿದ್ಧ ಎಂದು ಭರವಸೆ ವ್ಯಕ್ತಪಡಿಸಿದರರು.371ನೇ ತಿದ್ದುಪಡಿಗೆ ಹೋರಾಡಿದ ವ್ಯಕ್ತಿಯನ್ನು ಬೆಂಬಲಿಸುವುದು ಹೈದರಾಬಾದ್ ಕರ್ನಾಟಕದ ಜನತೆಯ ಬದ್ಧತೆ ಎಂದು ಈ ಬಾರಿ ಸ್ಪರ್ಧೆಗೆ ಇಳಿದಿಲ್ಲ. ಅವರನ್ನು ಗೆಲ್ಲಿಸುವುದು ನಮ್ಮ ಕರ್ತವ್ಯ ಎಂದು ನರೇಶ ಮಲಕೂಡ ಹೇಳಿದರು.ಡಾ.ವೆಂಕಟರೆಡ್ಡಿಕೂಲಕೂಂಡಾ, ಶರಣರೆಡ್ಡಿ ಇಮಡಾಪುರ, ಶರಣ ಭೂಪಾಲರೆಡ್ಡಿ ಪಾಟೀಲ, ಶರಣರೆಡ್ಡಿ ಜಿರಡೇಪಲ್ಲಿ, ನಾಗಭೂಷಣರೆಡ್ಡಿ ಹೂಡಾ, ಪರ್ವತರೆಡ್ಡ ಪಾಟೀಲ ಕೂಡ್ಲಾ, ಮಲ್ಲಿಕಾರ್ಜುನ ಮಮ್ಮತಟ್ಟಿ, ಎಸ್.ಎಸ್‌ದಾಕಾಲ, ಬಸಿರೆಡ್ಡಿ ದೇಸಾಯಿ, ಜಗನ್ನಾಥ ಹಂದರಕಿ ಮತ್ತಿತರರನ್ನು ಕೆಜೆಪಿ ಮುಖಂಡ ಬಸವರಾಜ ಇಂಗಿನ ಹಾಗೂ ತಿಪ್ಪಣ್ಣಪ್ಪ ಕಮಕನೂರ ಪಕ್ಷಕ್ಕೆ ಬರಮಾಡಿಕೊಂಡರು. ವೆಂಕಟೇಶ ಕುಲಕರ್ಣಿ ಮತ್ತಿತರರು ಇದ್ದರು.

ಪ್ರತಿಕ್ರಿಯಿಸಿ (+)