371ನೇ ಕಲಂ ತಿದ್ದುಪಡಿ ಅಂಗೀಕಾರ: ವಿಜಯೋತ್ಸವ

7

371ನೇ ಕಲಂ ತಿದ್ದುಪಡಿ ಅಂಗೀಕಾರ: ವಿಜಯೋತ್ಸವ

Published:
Updated:

ಸಿಂಧನೂರು: ಕೇಂದ್ರ ಸರ್ಕಾರವು 371ನೇ ಕಲಂ ತಿದ್ದುಪಡಿ ಮಸೂದೆಗೆ ಅಂಗೀಕಾರ ನೀಡಿದ ಹಿನ್ನೆಲೆಯಲ್ಲಿ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ  ಆಚರಿಸಿದರು.ಹೈದ್ರಾಬಾದ್-ಕರ್ನಾಟಕ ಭಾಗದ ಅಭಿವೃದ್ಧಿಯ ಉದ್ದೇಶದಿಂದ ಹಲವು ವರ್ಷಗಳಿಂದ ವಿವಿಧ ಪ್ರಗತಿಪರ ಸಂಘಟನೆಗಳು ನಡೆಸಿದ ಹೋರಾಟ, ಪ್ರತಿಭಟನೆ, ಧರಣಿ, ಉಪವಾಸ, ಸತ್ಯಾಗ್ರಹಗಳಿಗೆ ಈಗ ಫಲ ಸಿಕ್ಕಂತಾಗಿದೆ. ಈ ಭಾಗಕ್ಕೆ ಶೀಘ್ರವೇ ವಿಶೇಷ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದರು.ವಿಜಯೋತ್ಸವದಲ್ಲಿ ಸುರೇಶ ಅಚ್ಚೊಳ್ಳಿ, ಕೆ.ಬಸವರಾಜ ಗೌಡನಬಾವಿ, ಮುಕ್ತಾರಪಟೇಲ್ ಮತ್ತಿತರರು ಭಾಗವಹಿಸಿ ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು.ಟಿಪ್ಪುಸುಲ್ತಾನ ಸಮಿತಿ ಸ್ವಾಗತ: ತಾಲ್ಲೂಕು ಟಿಪ್ಪುಸುಲ್ತಾನ ಸಮಿತಿ ಖಾಜಿಮಲಿಕ್ ವಕೀಲ, ಉಪಾಧ್ಯಕ್ಷ ಮುರುಗಯ್ಯಸ್ವಾಮಿ, ಜಂಟಿ ಕಾರ್ಯದರ್ಶಿ ಮಹ್ಮದ್‌ಅಲಿ, ವೀರೇಶ, ಬಡಿಬೇಸ್ ಘಟಕದ ಅಧ್ಯಕ್ಷ ಎಂ.ಡಿ.ಕಲೀಮ್ ಮತ್ತಿತರರು ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿ ಪರಸ್ಪರ ಸಿಹಿ ಹಂಚಿ ಸಂತಸಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry